ಹೈದರಾಬಾದ್​:ಮತ್ತೆ ಹೆಣ್ಣು ಮಗು ಆಗುತ್ತದೆ ಎಂಬ ಭಯದಲ್ಲಿ ಗರ್ಭಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಕರುಣಾಜನಕ ಘಟನೆ ತೆಲಂಗಾಣದ ಮಂಚೇರಿಯಲ್​ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಘಟನೆಯ ಬಗ್ಗೆ ಸಬ್​ ಇನ್ಸ್​ಪೆಕ್ಟರ್ ಕಿರಣ್​ ಮಾಹಿತಿ ನೀಡಿದ್ದಾರೆ. ಮೃತಳನ್ನು ರಮ್ಯಾ ಎಂದು ಗುರುತಿಸಲಾಗಿದೆ. ಈಕೆ ಜಿಲ್ಲೆಯ ದಂಡೆಪಲ್ಲಿ ಮಂಡಲದ ನರ್ಸಾಪುರ್​ ಮೂಲದವರು. 2017ರಲ್ಲಿ ಮಂಚೇರಿಯಲ್​ ಪಟ್ಟಣದ ಎನ್​ಟಿಆರ್​ ಕಾಲನಿಯಲ್ಲಿರುವ ಆನಂದ್​ ಎಂಬುವರನ್ನು ವರಿಸಿದ್ದರು. ಮೊದಲೇ ಹೆರಿಗೆಯಾಗಿದ್ದು, 3 ವರ್ಷದ ಆರಾಧ್ಯ ಹೆಸರಿನ ಹೆಣ್ಣು ಮಗುವಿದೆ. ಪ್ರಸ್ತುತ ರಮ್ಯಾ 9 ತಿಂಗಳ ಗರ್ಭಿಣಿ ಆಗಿದ್ದರು. ವೈದ್ಯರು ಗುರುವಾರ ಹೆರಿಗೆ ದಿನವನ್ನು ನಿಗದಿಪಡಿಸಿದ್ದರು.
ಹೆರಿಗೆಗೂ ಮುಂಚೆ ಕೆಲವು ದಿನಗಳಿಂದ ಚಿಂತೆಯಲ್ಲಿ ಮುಳುಗಿದ್ದ ರಮ್ಯಾ ಮತ್ತೊಮ್ಮೆ ಹೆಣ್ಣು ಮಗುವಾದರೆ, ಗಂಡನ ಮನೆಯವರೆಲ್ಲ ಸೇರಿ ನನ್ನ ಮೇಲೆಯೇ ದೂಷಿಸುತ್ತಾರೆ. ನನ್ನನ್ನು ಕೀಳಾಗಿ ಕಾಣುತ್ತಾರೆ ಎಂಬ ಭಯದಲ್ಲಿ ಹೆರಿಗೆಗೆ ಒಂದು ದಿನದ ಮುಂಚೆಯೇ ಅಂದರೆ, ಬುಧವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಮ್ಯಾ ಅವರ ಮೃತದೇಹವನ್ನು ಮಂಚೇರಿಯಲ್​ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ರಮ್ಯಾ ಸಾವಿನ ಸುದ್ದಿ ಕೇಳಿ ಆಕೆಯ ಪಾಲಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಅತ್ತೆ ಮನೆಯವರ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಾಲಕರು ಆರೋಪ ಮಾಡಿದ್ದಾರೆ. ಈ ಸಂಬಂಧ ರಮ್ಯಾ ಪಾಲಕರು ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಹೂ ಅಂಟಾವ… ಸಿನಿಮಾಗಿಂತ ಮೇಕಿಂಗ್​ ವಿಡಿಯೋದಲ್ಲೇ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿರುವ ಸಮಂತಾ!
ಬುಲ್ಲಿ ಬಾಯ್​ ಆ್ಯಪ್ ಸೃಷ್ಟಿಕರ್ತ ಅರೆಸ್ಟ್​: ರ‍್ಯಾಂಕಿಂಗ್ ವಿದ್ಯಾರ್ಥಿಯ ಸ್ಫೋಟಕ ಮಾಹಿತಿ ಇಲ್ಲಿದೆ…
ರಾತ್ರಿ ಗಂಡ ಹೊರಹೋಗುತ್ತಿದ್ದಂತೆ ಮನೆಯಲ್ಲಿ ನಡೆಯಿತು ಘೋರ ದುರಂತ: ಪತ್ನಿ-ಪುತ್ರಿ ದಾರುಣ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − two =
Remember me
