ಹೈದರಾಬಾದ್​:ಕೆನಡಾದಲ್ಲಿ ನೆಲೆಸಿರುವ ತೆಲುಗು ಮೂಲದ ಮಹಿಳೆಯೊಬ್ಬಳು ಇದೀಗ ಕಣ್ಣೀರಿಡುತ್ತಿದ್ದು, ವಿದೇಶಾಂಗ ಸಚಿವ ಜೈಶಂಕರ್​ ಅವರಿಗೆ ಟ್ವೀಟ್​ ಮಾಡಿ ಸಹಾಯ ಕೋರಿದ್ದಾರೆ.
ದೀಪ್ತಿ ರೆಡ್ಡಿ ಎಂಬಾಕೆ ಕೆನಡಾದ ಮೊಂಟ್ರಿಯಲ್​ ನಗರದಲ್ಲಿ ನೆಲೆಸಿದ್ದಾರೆ. ಕಳೆದ ಮೂರು ತಿಂಗಳಿಂದ ಅವರ ಪತಿ ಅನುಗುಲ ಚಂದ್ರಶೇಖರ್​ ರೆಡ್ಡಿ ಪತ್ತೆಯಿಲ್ಲವಂತೆ. ಗಂಡನ ಮೇಲೆ ಕೋಪಗೊಂಡಿರುವ ದೀಪ್ತಿ, ಒಂದು ಮಾಹಿತಿಯನ್ನು ನೀಡದೇ ಮೂರು ತಿಂಗಳ ಹಿಂದೆ ಪತಿ ಭಾರತಕ್ಕೆ ಮರಳಿದ್ದಾರೆ.
ಆಗಸ್ಟ್​ 9ರಂದು ಇಲ್ಲಿಂದ ಮೊಂಟ್ರಿಯಲ್​ನಿಂದ ಹೊರಟರು ಅಂದಿನಿಂದ ಅವರೊಂದಿಗಾಗಲಿ ಅಥವಾ ಅವರ ಕುಟುಂಬದೊಂದಿಗಾಗಲಿ ಸಂಪರ್ಕ ಸಾಧ್ಯವಾಗುತ್ತಿಲ್ಲ. ಅವರ ಕುಟುಂಬಸ್ಥರು ಮೊಬೈಲ್​ನಲ್ಲಿ ನನ್ನ ನಂಬರ್​ ಬ್ಲಾಕ್​ ಮಾಡಿದ್ದಾರೆ. ನಾನೀಗ ಎರಡು ತಿಂಗಳ ಗರ್ಭಿಣಿಯಾಗಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ನಾನು ಭಾರತಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಆರೋಗ್ಯ ಸ್ಥಿತಿಯು ಸಹ ಸರಿಯಾಗಿಲ್ಲ.
ನನ್ನ ಮೈದುನ ಎ. ಶ್ರೀನಿವಾಸ ರೆಡ್ಡಿ ಹೈದರಾಬಾದ್​ನ ಚೈತನ್ಯಪುರಿ ಪೊಲೀಸ್​ ಠಾಣೆಯಲ್ಲಿ ಕಾನ್ಸ್​ಟೇಬಲರ್​ ಆಗಿದ್ದಾರೆ. ಅವರು ನನ್ನ ಅತ್ತೆ-ಮಾವ ಮತ್ತು ಪತಿಯನ್ನು ಬಚ್ಚಿಟ್ಟಿದ್ದಾರೆ. ನನ್ನ ಗಂಡ ಎಲ್ಲಿದ್ದಾರೆಂದು ನನಗೆ ಗೊತ್ತಾಗುತ್ತಿಲ್ಲ. ಅವರ ಆರೋಗ್ಯವೂ ಸರಿಯಿಲ್ಲ. ಹೀಗಾಗಿ ಅವರ ಚಿಂತೆ ಕಾಡುತ್ತಿದೆ. ಹೇಗೋ ಎಲ್ಲವನ್ನು ನಿರ್ವಹಣೆ ಮಾಡಿಕೊಳ್ಳೋಣವೆಂದರೆ ಮಾನಸಿಕ ಒತ್ತಡ ನನ್ನನ್ನು ಕೊಲ್ಲುತ್ತಿದೆ.
ನನ್ನ ಗಂಡನನ್ನು ಪತ್ತೆಹಚ್ಚಲು ನನಗೆ ಸಹಾಯ ಮಾಡಿ. ನನ್ನ ಗಂಡನ ಪಾಸ್​ಪೋರ್ಟ್​ ಮತ್ತು ಮದುವೆ ಪ್ರಮಾಣ ಪತ್ರ ಮತ್ತು ಅವರ ಇತ್ತೀಚಿನ ಪ್ರಯಾಣದ ಟಿಕೆಟ್​ ಅನ್ನು ಲಗತ್ತಿಸಿದ್ದೇನೆ. ಏನಾದರೂ ಮಾಹಿತಿ ಸಿಕ್ಕರೆ ಈ ನಂಬರ್​ ಅಥವಾ ವಿಳಾಸಕ್ಕೆ ಮಾಹಿತಿ ನೀಡಿ ಎಂದಿದ್ದಾರೆ. ಅಲ್ಲದೆ, ನಾನು ಕಳೆದ ಆಗಸ್ಟ್ 20ರಂದು ಭಾರತೀಯ ಹೈಕಮಿಷನ್‌ಗೆ ದೂರು ನೀಡಿದ್ದು, ಇಲ್ಲಿಯವರೆಗೆ ದೂರಿನ ಬಗ್ಗೆ ಯಾವುದೇ ಪ್ರಗತಿಯನ್ನು ಕಂಡಿಲ್ಲ ಎಂದು ದೂರಿದ್ದಾರೆ. ಸಹಾಯ ಮಾಡಿ ಎಂದು ವಿದೇಶಾಂಗ ಸಚಿವ ಜೈಶಂಕರ್​ ಬಳಿ ಕೇಳಿಕೊಂಡಿದ್ದಾರೆ.
ದೀಪ್ತಿ ಮನವಿ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡಿರುವ ರಾಚಕೊಂಡ ಪೊಲೀಸರು ಆಕೆಯ ಗಂಡನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
https://twitter.com/Deepthireddy248/status/1438742060958244868?s=20
ಧರಣಿಗೆ ಸಜ್ಜಾದ ಸಾರಿಗೆ ನೌಕರರು: ಸೋಮವಾರ ಬಸ್​ ಸಂಚಾರದಲ್ಲಿ ವ್ಯತ್ಯಯ?

ನಟ ಸೋನು ಸೂದ್​​ಗೆ ಐಟಿ ಕಂಟಕ: 20 ಕೋಟಿ ರೂ. ತೆರಿಗೆ ವಂಚನೆ ಆರೋಪ

ನ್ಯೂಜಿಲೆಂಡ್​ ಬೆನ್ನಲ್ಲೇ ಪಾಕಿಸ್ತಾನಕ್ಕೆ ಇಂಗ್ಲೆಂಡ್​ ಶಾಕ್​: ಪಾಕ್​ ಮಾನ ವಿಶ್ವದ ಎದುರು ಹರಾಜು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 8 =
Remember me
