ಮುಂಬೈ:ವಂಚನೆ ಆರೋಪದಡಿಯಲ್ಲಿ ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್​ ಕುಂದ್ರಾ ವಿರುದ್ಧ ನಿತಿನ್​ ಬರೈ ಎಂಬುವರು ದೂರು ದಾಖಲಿಸಿದ್ದು, ಬಾಂದ್ರಾ ಪೊಲೀಸ್​ ಠಾಣೆಯಲ್ಲಿ ಶನಿವಾರ ಎಫ್​ಐಆರ್​ ದಾಖಲಾಗಿದೆ.
ದೂರಿನ ಪ್ರಕಾರ 2014ರ ಜುಲೈನಲ್ಲಿ ಎಸ್​ಎಫ್​ಎಲ್​ ಫಿಟ್​ನೆಸ್​ ಕಂಪನಿಯ ನಿರ್ದೇಶಕ ಕಾಶಿಫ್​ ಖಾನ್, ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ ಮತ್ತು ಇತರರು ಸೇರಿ ಲಾಭ ಸಿಗುತ್ತದೆ ಎಂದು ಆಮಿಷವೊಡ್ಡಿ ಕಂಪನಿಯಲ್ಲಿ ಬಂಡವಾಳ ಹೂಡವಂತೆ ನಿತಿನ್​ತನ್ನು ಕೇಳಿದ್ದರು. ಅದರಂತೆ 1.5 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದೇನೆಂದು ನಿತಿನ್​ ಹೇಳಿದ್ದಾರೆ. ​
ಇಷ್ಟೇ ಅಲ್ಲದೆ, ಪುಣೆ ಸಮೀಪದ ಹದಪ್ಸರ್​ ಮತ್ತು ಕೊರೆಂಗಾವ್​ನಲ್ಲಿ ಸ್ಪಾ ಮತ್ತು ಜಿಮ್​ ತೆರೆಯಲು ಫ್ರಾಂಚೈಸಿಯನ್ನು ಒದಗಿಸುವುದಾಗಿಯೂ ಎಸ್​ಎಫ್​ಎಲ್​ ಕಂಪನಿ ಭರವಸೆ ನೀಡಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಇದಾದ ಬಳಿಕ ಹಣ ಹಿಂತಿರುಗಿಸುವಂತೆ ಕೇಳಿದೆ. ಆದರೆ, ಹಣ ಕೊಡದೆ ಬೆದರಿಕೆ ಹಾಕುತ್ತಿದ್ದಾರೆಂದು ದೂರಿನಲ್ಲಿ ನಿತಿನ್​ ಬರೈ ಉಲ್ಲೇಖಿಸಿದ್ದಾರೆ.
ದೂರಿನ ಆಧಾರದ ಮೇಲೆ ಬಾಂದ್ರಾ ಪೊಲೀಸ್​ ಎಫ್​ಐಆರ್​ ದಾಖಲಿಸಿದ್ದು, ಪ್ರಕರಣ ಸಂಬಂಧ ತನಿಖೆಯನ್ನು ಕೈಗೊಂಡಿದ್ದಾರೆ. ಈಗಾಗಲೇ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನಿನ ಮೇಲೆ ಹೊರಗಿರುವ ರಾಜ್​ ಕುಂದ್ರಾಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.(ಏಜೆನ್ಸೀಸ್​)
ಶಿಕ್ಷಕಿ ಕೊಲೆ​ ಪ್ರಕರಣ: ಹಾಸ್ಟೆಲ್​ನಲ್ಲಿ ನಡೆಯುತ್ತಿತ್ತು​ ಅಸಹ್ಯ, ಶಾಲಾಧ್ಯಕ್ಷನ ಪರ ನಿಂತರಾ ಪೊಲೀಸರು?

ಮಾಡೆಲ್​ಗಳಿಬ್ಬರ ದುರ್ಮರಣ: ಆಡಿ ಕಾರು, ಹೋಟೆಲ್​ ಮಾಲೀಕ… ಪೊಲೀಸರಿಗೆ ಸಿಕ್ತು ಸ್ಫೋಟಕ ಸುಳಿವು

ಕಾಂಡೋಮ್​ ಪರೀಕ್ಷಿಸಲು ಉತ್ಸುಕರಾದ ರಾಕುಲ್​: ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಫಸ್ಟ್​ಲುಕ್​ ಪೋಸ್ಟರ್​!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 9 =
Remember me
