ಕೊಚ್ಚಿ:ಪ್ರೀತಿಯ ನಾಟಕವಾಡಿ, ಯುವಕನೊಬ್ಬನನ್ನು ಲಾಡ್ಜ್​ಗೆ ಕರೆಸಿಕೊಂಡು, ತನ್ನ ಮೂವರು ಪರಿಚಿತರೊಂದಿಗೆ ಸೇರಿ, ಯುವಕನ ಮೊಬೈಲ್​​ ಫೋನ್​, ಹಣ ಮತ್ತು ಒಡವೆಯನ್ನು ದೋಚಿದ್ದ ಖತರ್ನಾಕ್​ ಮಹಿಳೆಯನ್ನು ಕೇರಳ ಪೊಲೀಸರು ಬಂಧಿಸಿದ್ದು, ವಶಕ್ಕೆ ಪಡೆದಿರುವ ಆಕೆಯ ಮೊಬೈಲ್​ನಲ್ಲಿ ಮಹತ್ವದ ದಾಖಲೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಬಂಧಿತ ಮಹಿಳೆಯನ್ನು ಹಸೀನಾ (28), ಆಕೆಯ ಪತಿ ಜೆ. ಜಿತಿನ್ (28), ಎಸ್​. ಅನ್ಶದ್​ (26) ಎಂದು ಗುರುತಿಸಲಾಗಿದೆ. ಈ ಮೂವರು ಉಮಯನಲ್ಲೂರು ಮೂಲದವರು. ಇನ್ನೊರ್ವ ಕೊಲ್ಲಂ ಮೂಲದ ಆರೋಪಿ ಅನಾಸ್, ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. ​​
ಹಸೀನಾ ಸಾಕಷ್ಟು ಮಂದಿಯನ್ನು ತನ್ನ ಬಲೆಗೆ ಬೀಳಿಸಿ, ಹಣ ಮತ್ತು ಒಡವೆ ಸುಲಿಗೆ ಮಾಡಿರುವುದು ಆಕೆಯ ಮೊಬೈಲ್​​ನಿಂದ ಬಯಲಾಗಿದೆ. ವಿಡಿಯೋ ಕಾಲ್​ಗೆ ಸೇರಿಕೊಳ್ಳಿ ಎಂದು ಜನರನ್ನು ಕೇಳುತ್ತಿದ್ದಳು. ವಿಡಿಯೋ ಕಾಲ್​ನಲ್ಲಿ ಬಣ್ಣದ ಮಾತುಗಳನ್ನು ಆಡಿ, ಸಲುಗೆ ಬೆಳೆಸಿಕೊಳ್ಳುತ್ತಿದ್ದಳು. ಬಳಿಕ ಅವರನ್ನು ತಾನಿದ್ದಲ್ಲಿಗೆ ಕರೆಸಿಕೊಂಡು ದೋಚುವುದೇ ಈಕೆಯ ಕೆಲಸವಾಗಿತ್ತು. ಆಕೆಯ ಮೊಬೈಲ್​ನಲ್ಲಿ ವಿಡಿಯೋ ಕಾಲ್​ ಮಾಹಿತಿ, ಯಾರು ಯಾರನ್ನು ಸಂಪರ್ಕಿಸಿದ್ದಾಳೆ ಎಂಬ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.
ಹಸೀನಾ ಸಿಕ್ಕಿಬಿದ್ದಿದ್ದು ಹೇಗೆ?ಕೊಟ್ಟಾಯಂನ ವೈಕ್ಕೊಮ್ ಮೂಲದ 34 ವರ್ಷದ ಸಂತ್ರಸ್ತ ಯುವಕನನ್ನು ಆರೋಪಿ ಹಸೀನಾ ಸಾಮಾಜಿಕ ಜಾಲತಾಣ ಮೂಲಕ ಪರಿಚಯ ಮಾಡಿಕೊಂಡಿದ್ದಳು. ಆತನೊಂದಿಗೆ ನಿರಂತರವಾಗಿ ಮಾತನಾಡುತ್ತಾ ತುಂಬಾ ಹತ್ತಿರವಾಗಿದ್ದಳು. ಇದೇ ಸಲುಗೆಯಲ್ಲಿ ಹಸೀನಾ, ಯುವಕನನ್ನು ಎರ್ನಾಕುಲಂ ಜನರಲ್​ ಹಾಸ್ಪಿಟಲ್​ ಬಳಿಯಿರುವ ಲಾಡ್ಜ್​ಗೆ ಆಗಸ್ಟ್ 8ರಂದು ಕರೆದಿದ್ದಳು. ಆಕೆಯ ಮಾತು ನಂಬಿದ ಯುವಕ ಅಂದು ಲಾಡ್ಜ್​ನ ರೂಮ್​ ನಂಬರ್​ 205ಕ್ಕೆ ತೆರಳಿದ್ದ. ಕೊಠಡಿಯ ಒಳಗೆ ಹೋಗುತ್ತಿದ್ದಂತೆ ಹಸೀನಾ ಮತ್ತು ಇತರೆ ಮೂವರು ಆರೋಪಿಗಳು ಯುವಕನನ್ನು ಹಿಡಿದುಕೊಂಡು ಕುರ್ಚಿಗೆ ಕಟ್ಟಿಹಾಕಿದರು. ಬಾಯಿಗೆ ಬಟ್ಟೆ ತುರುಕಿ ಅಮಾನವೀಯವಾಗಿ ಹಲ್ಲೆ ಮಾಡಿದರು. ಬಳಿಕ ಯುವಕನ ಕತ್ತಿನಲ್ಲಿ ಚಿನ್ನದ ಸರ, ಬ್ರೇಸ್​ಲೆಟ್​, ರಿಂಗ್​ ಮತ್ತು 20 ಸಾವಿರ ರೂ. ಬೆಲೆ ಬಾಳುವ ಮೊಬೈಲ್​ ಫೋನ್​ ಮತ್ತು ಪಾಕೆಟ್​ನಲ್ಲಿದ್ದ 5 ಸಾವಿರ ರೂ. ನಗದು ದೋಚಿದ್ದರು. ಇಷ್ಟೇ ಅಲ್ಲದೆ, ಆತನ ಫೋನ್​ ಬಳಸಿಕೊಂಡು ಬಲವಂತವಾಗಿ ಆತನ ಬ್ಯಾಂಕ್​ ಖಾತೆಯಿಂದ 15 ಸಾವಿರ ರೂಪಾಯಿ ಹಣವನ್ನು ತಮ್ಮ ಬ್ಯಾಂಕ್​ ಖಾತೆಗೆ ವರ್ಗಾಯಿಸಿಕೊಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಹಲ್ಲೆಯಿಂದಾಗಿ ಯುವಕನ ಮೈಮೇಲೆ ತುಂಬಾ ಗಾಯಗಳಾಗಿತ್ತು. ಬಳಿಕ ಚಿಕಿತ್ಸೆ ಪಡೆದುಕೊಂಡು, ಆಗಸ್ಟ್ 13 ರಂದು ಎರ್ನಾಕುಲಂ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಡ್ಜ್‌ನಲ್ಲಿರುವ ಸಿಸಿಟಿವಿ ದೃಶ್ಯಗಳು ಮತ್ತು ಹಣ ವರ್ಗಾವಣೆಯಾಗಿರುವ ಖಾತೆಯ ಮೂಲಕ ಆರೋಪಿಗಳ ಸುಳಿವು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.(ಏಜೆನ್ಸೀಸ್​)
ಲಾಡ್ಜ್​ಗೆ ಕರೆಸಿಕೊಂಡು ಯುವಕನ ಬಳಿ ಹಣ, ಚಿನ್ನದ ಸರ, ಮೊಬೈಲ್​​ ದೋಚಿದ್ದ ಖತರ್ನಾಕ್​ ಲೇಡಿ ಅಂದರ್​!

ಸಹಾಯಕ ಕೃಷಿ ನಿರ್ದೇಶಕಿಯ ದರ್ಪಕ್ಕೆ ಅಧಿಕಾರಿಗಳು, ಸಿಬ್ಬಂದಿ ‌ಸುಸ್ತೋ ಸುಸ್ತು! ವಿಡಿಯೋ ವೈರಲ್​

ಸೋನಾಲಿ ಸಾವಿನ ಪ್ರಕರಣದಲ್ಲಿ ಇಬ್ಬರ ಆಪ್ತರ ಬಂಧನ: ಮರಣೋತ್ತರ ವರ ಪರೀಕ್ಷೆಯಲ್ಲಿ ಆಘಾತಕಾರಿ ಅಂಶ ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
