ನವದೆಹಲಿ:ಆನ್​ಲೈನ್​ನಲ್ಲಿ ಬುಕ್​ ಮಾಡಿದ ಪ್ರಾಡಕ್ಟ್​ ಬದಲಾಗಿ ಬೇರೆ ಪ್ರಾಡಕ್ಟ್​ ಕೈ ಸೇರುವ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಫ್ಲಿಪ್​ಕಾರ್ಟ್​ನಲ್ಲಿ ಬಿಗ್​ ಬಿಲಿಯನ್​ ಡೇಸ್​ ವಿಶೇಷ ಮಾರಾಟ ನಡೆದಿತ್ತು. ಈ ವೇಳೆ ಆನ್​ಲೈನ್​ಲ್ಲಿ ದುಬಾರಿ ಐಫೋನ್​ ಬುಕ್​ ಮಾಡಿದವನಿಗೆ ಆರ್ಡರ್​ ಡಿಲಿವರಿ ಬಳಿಕ ಶಾಕ್​ ಆಗಿದೆ.
ಸಿಮ್ರನ್​ಪಾಲ್​ ಸಿಂಗ್​ ಎಂಬಾತ 51,999 ರೂಪಾಯಿಗೆ ಐಫೋನ್​ ಬುಕ್​ ಮಾಡಿದ್ದ. ನಿಗದಿಯಂತೆ ಡಿಲಿವರಿ ಬಾಯ್​ ಪಾರ್ಸೆಲ್​ ಅನ್ನು ಮನೆಗೆ ತಲುಸಿದ್ದಾನೆ. ಪಾರ್ಸೆಲ್​ ತೆಗೆದುಕೊಂಡ ಸಿಮ್ರನ್​ಪಾಲ್​ ಸಿಂಗ್​ ಐಫೋನ್​ ಬಂತೆಂಬ ಖುಷಿಯಿಂದ ಪ್ಯಾಕ್​ ಓಪನ್​ ಮಾಡುತ್ತಿದ್ದಂತೆ ಬಾಕ್ಸ್​ ಒಳಗೆ 2 ಬಾರ್​ ನಿರ್ಮಾ ಸೋಪ್​ ನೋಡಿ ಶಾಕ್​ ಆಗಿದ್ದಾರೆ.
ಸಿಮ್ರನ್​ಪಾಲ್​ ಸಿಂಗ್​ ಮಾಡಿದ ಒಂದು ಒಳ್ಳೆ ಕೆಲಸವೆಂದರೆ ಅವರು OTP ಅನ್ನು ಡೆಲಿವರಿ ಪಾಲುದಾರರೊಂದಿಗೆ ಹಂಚಿಕೊಳ್ಳಿಲ್ಲ. ಒಂದು ವೇಳೆ ಹಂಚಿಕೊಂಡಿದ್ದರೆ, ಆರ್ಡರ್ ‘ಡೆಲಿವರಿ’ ಆಗಿದೆ ಎಂದು ಅಪ್‌ಡೇಟ್ ಮಾಡಲಾಗುತ್ತಿತ್ತು. ಇದಾದ ಬಳಿಕ ಫ್ಲಿಪ್​ಕಾರ್ಟ್ ಪ್ರಮಾದವನ್ನು ಕಸ್ಟಮರ್​ ಕೇರ್​ ಮೂಲಕ ತಿಳಿಸಿದ್ದು, ತಪ್ಪನ್ನು ಒಪ್ಪಿಕೊಂಡಿರುವ ಫ್ಲಿಪ್​ಕಾರ್ಟ್​ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿದೆ.
ಫ್ಲಿಪ್‌ಕಾರ್ಟ್ ಆದೇಶವನ್ನು ರದ್ದುಗೊಳಿಸಿದೆ ಮತ್ತು ಆರ್ಡರ್‌ಗಾಗಿ ಮರುಪಾವತಿಯನ್ನು ಆರಂಭಿಸಿದೆ. ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್​)

ಟಿ20 ವಿಶ್ವಕಪ್​ಗೆ ಕೆಲವೇ ದಿನಗಳಿರುವಾಗಲೇ ಭಾರತದ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಪ್ರಧಾನಿ

ಸೋಲದೇವನಹಳ್ಳಿಯ ನಾಲ್ವರು ಮಕ್ಕಳು ಪತ್ತೆ: ಪೊಲೀಸರ ಬಳಿ ಮನದ ನೋವನ್ನ ಎಳೆಎಳೆಯಾಗಿ ಬಿಚ್ಚಿಟ್ಟ ಮಕ್ಕಳು

ಸರ್ಕಾರಿ ಶಾಲಾ ಶಿಕ್ಷಕರಿಗೇಕೆ ಈ ಕಷ್ಟ? ಸಿಎಂ ಬೊಮ್ಮಾಯಿಗೆ ವಿದ್ಯಾರ್ಥಿನಿ ಪ್ರಶ್ನೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:2 + 17 =
Remember me
