ಹೈದರಾಬಾದ್​:ತೆಲಂಗಾಣದ ಭದ್ರಾದ್ರಿ ಕೊಟ್ಟಗುಡೇಮ್​ ಜಿಲ್ಲೆಯ ಮುಲಕಲಪಲ್ಲಿ ಮಂಡಲದ ಅರಣ್ಯ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಇಲ್ಲಿನ ಅರಣ್ಯ ಸಿಬ್ಬಂದಿಯೊಬ್ಬ ಬುಡಕಟ್ಟು ಜನಾಂಗದ ಮಹಿಳೆಯರನ್ನು ಥಳಿಸಿ, ವಿವಸ್ತ್ರಗೊಳಿಸಿ ಮೃಗೀಯವಾಗಿ ಹಿಂಸಿಸಿದ್ದು, ಈ ಘಟನೆ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮುಲಕಪಲ್ಲಿ ಮಂಡಲದ ಕಡು ಗ್ರಾಮ ಸಕಿ ವಗು ಕಾಲನಿಯ ಬುಡಕಟ್ಟು ಸಮುದಾಯದ ನಾಲ್ವರು ಮಹಿಳೆಯರು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದರು. ಈ ವೇಳೆ ಅವರನ್ನು ನೋಡಿದ ಮಹೇಶ್​ ಹೆಸರಿನ ಫಾರೆಸ್ಟ್​ ಗಾರ್ಡ್​ ಅವರೊಂದಿಗೆ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆರೋಪಿ ಮಹೇಶ್​​ ಒಬ್ಬ ಮಹಿಳೆಯರನ್ನು ಹಿಮ್ಮೆಟ್ಟಿಸಿ ಹೋಗಿ ಕೋಲಿನಿಂದ ಥಳಿಸಿರುವ ಆರೋಪ ಕೇಳಿಬಂದಿದೆ. ಆತನಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಇನ್ನೊಬ್ಬ ಮಹಿಳೆ ಹಳ್ಳದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಷ್ಟೇಅಲ್ಲದೆ, ಯುವತಿಯೊಬ್ಬಳನ್ನು ತಡೆದು ನಿಲ್ಲಿಸಿದ ಮಹೇಶ್​, ಆಕೆಯ ಕೆಳಭಾಗದ ಬಟ್ಟೆಯನ್ನು ಕಿತ್ತೆಸೆದು ಹಿಂಸಿಸಿದ್ದಾನೆ.
ಫಾರೆಸ್ಟ್​ ಗಾರ್ಡ್​ ಮಹೇಶ್​ ನಾಲ್ವರು ಮಹಿಳೆಯರ ಮೇಲೆಯೂ ದುರ್ವತನೆ ತೋರಿರುವ ಆರೋಪವಿದೆ. ಕೋಲಿನಿಂದ ಮನಬಂದಂತೆ ಥಳಿಸಿ, ವಿವಸ್ತ್ರಗೊಳಿಸಿದ್ದಾನೆ. ಈ ವಿಚಾರ ಬುಡಕಟ್ಟು ಸಮುದಾಯಕ್ಕೆ ತಿಳಿದಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ.(ಏಜೆನ್ಸೀಸ್​)
ವಾಹನ ಸವಾರರಿಗೆ ಮಾತ್ರವಲ್ಲ ಇನ್ಮುಂದೆ ಪಾದಾಚಾರಿಗಳಿಗೂ ಬೀಳಲಿದೆ ದಂಡ..!

ನಾನಿನ್ನೂ ಜೀವಂತವಾಗಿದ್ದೇನೆ ಅಂದ್ರೆ ಈ ಇಬ್ಬರು ಕಾರಣ! ಚರ್ಚೆ ಹುಟ್ಟುಹಾಕಿದ ಸಮಂತಾ ಹೇಳಿಕೆ

ವರನಿಗೆ 85, ವಧುವಿಗೆ 65: ಅಜ್ಜನಿಗೆ ಮದುವೆ ಮಾಡಿಸಿದ ಮೊಮ್ಮಕ್ಕಳು- ಮೈಸೂರಲ್ಲೊಂದು ಅಪರೂಪದ ವಿವಾಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − twelve =
Remember me
