ಮಲ್ಕಂಗಿರಿ (ಒಡಿಶಾ):ಸರ್ಕಾರಿ ಅಧಿಕಾರಿಯೊಬ್ಬ ಅಮಾಯಕ ಯುವತಿಯನ್ನು ನಂಬಿಸಿ ವಂಚಿಸಿ, ಬಂಧಕ್ಕೀಡಾಗಿರುವ ಘಟನೆ ಒಡಿಶಾದ ಮಲ್ಕಂಗಿರಿಯಲ್ಲಿ ನಡೆದಿದೆ.
ಬಂಧಿತನನ್ನು ಅರಣ್ಯಾಧಿಕಾರಿ ಮುರಳೀಧರ್​ ಎಂದು ಗುರುತಿಸಲಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ.
ಕಳೆದ ಏಪ್ರಿಲ್​ ತಿಂಗಳಲ್ಲಿ ಬುಡಕಟ್ಟು ಜನಾಂಗದ ಅಮಾಯಕ ಯುವತಿಯನ್ನು ಆರೋಪಿ ಮುರಳೀಧರ್​ ತನ್ನ ಕ್ವಾರ್ಟರ್ಸ್​ಗೆ ಕರೆಸಿಕೊಂಡಿದ್ದಾನೆ. ಬಂದವಳ ಬಳಿ ಬೆಣ್ಣೆಯಂತಹ ಮಾತುಗಳನ್ನಾಡಿದ್ದಾನೆ. ನಿನ್ನಂತಹ ಯುವತಿಯನ್ನೇ ನಾನು ಮದುವೆ ಆಗಬೇಕೆಂದುಕೊಂಡಿದ್ದೇನೆ. ನೀನು ಬಯಸಿದರೆ ಇಬ್ಬರು ಮದುವೆ ಆಗೋಣ ಎಂದಿದ್ದಾನೆ.
ಆರೋಪಿಯ ಮಾತಿಗೆ ಸಂತ್ರಸ್ತ ಯುವತಿ ಮರುಳಾಗಿದ್ದಾಳೆ. ಇದನ್ನು ಬಂಡವಾಳ ಮಾಡಿಕೊಂಡ ಮುರಳೀಧರ್​, ಪ್ರೀತಿಯ ಹೆಸರಲ್ಲಿ ಆಕೆ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಕೆಲವು ದಿನಗಳ ಹಿಂದೆ ಮುರಳೀಧರ ಮತ್ತೊಂದು ಮದುವೆ ಆಗಿದ್ದಾನೆ. ಬಳಿಕ ಈ ವಿಚಾರ ಸಂತ್ರಸ್ತ ಯುವತಿಗೆ ತಿಳಿದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುರಳೀಧರನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರು ಡಿಕ್ಕಿಯಾಗಿ ಬೈಕ್​ ಸವಾರ ಸಾವು: ಪರಾರಿಯಾಗಲು ನಡೆದಿತ್ತು ಮಾಸ್ಟರ್​ ಪ್ಲಾನ್!​

‘ಕಪಿಲ್​ದೇವ್’ ವರ್ಗಾವಣೆ, ‘ಬೌಂಡರಿ’ ಮೀರಿದ ಸಂಭ್ರಮ!; ಖಾಕಿ ಖದರಿಗೆ ಮುದುರಿತಾ ಕೋವಿಡ್ ನಿಯಮ?

ಜು.6ರಿಂದ ಗೋವಾಗೆ ಬಸ್ ಸಂಚಾರ ಆರಂಭ; ಕೋವಿಡ್ ನೆಗಟಿವ್ ವರದಿ ಇರುವವರಿಗೆ ಮಾತ್ರ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
