ಕೋಲ್ಕತ: ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಪಶ್ಚಿಮ ಬಂಗಾಳವನ್ನು 10 ವರ್ಷಗಳ ಕಾಲ ಆಳಿದರು. ಸಾಮಾನ್ಯವಾಗಿ ಮುಖ್ಯಮಂತ್ರಿ ಅಂದಮೇಲೆ ಅವರ ಕುಟುಂಬಸ್ಥರು ಆರ್ಥಿಕವಾಗಿ ತುಂಬಾ ಸದೃಢವಾಗಿರುತ್ತಾರೆ. ಅದರಲ್ಲಿ ಸಂದೇಹವೇ ಇಲ್ಲ. ಆದರೆ, ಬಂಗಾಳದಲ್ಲಿ ಬುದ್ಧದೇವ್ ಭಟ್ಟಾಚಾರ್ಯ ಅವರ ಪತ್ನಿಯ ಸಹೋದರಿ ಅಂದರೆ ನಾದಿನಿ ಬೀದಿ ಬೀದಿ ಅಲೆಯುತ್ತಿದ್ದು, ಫುಟ್​ಪಾತ್​ ಮೇಲೆ ಕಾಲ ಕಳೆಯುತ್ತಿದ್ದಾರೆ ಅಂದರೆ ಅದಕ್ಕಿಂತ ಶಾಕಿಂಗ್​ ವಿಚಾರ ಏನಿದೆ ಹೇಳಿ.
ಹೌದು, ಬುದ್ಧದೇವ್ ಭಟ್ಟಾಚಾರ್ಯ ಅವರ ನಾದಿನಿ ಇರಾ ಬಸು ಇಂದು ನಿರ್ಗತಿಕರಾಗಿದ್ದಾರೆ. ಅಷ್ಟಕ್ಕೂ ಬಸು ಅವಿದ್ಯಾವಂತೆಯೇನಲ್ಲ. ವೈರಾಲಜಿಯಲ್ಲಿ (ರೋಗಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ) ಪಿಎಚ್​ಡಿ ಮಾಡಿದ್ದಾರೆ. ಅಲ್ಲದೆ, ರಾಜ್ಯ ಮಟ್ಟದ ಅಥ್ಲೆಟಿಯು ಹೌದು. ಇಷ್ಟೇ ಅಲ್ಲದೆ, ಟೆನ್ನಿಸ್​ ಮತ್ತು ಕ್ರಿಕೆಟ್​ ಸಹ ಆಡುತ್ತಿದ್ದರು.

ಇರಾ ಬಸು ಅವರು ಹಿಂದೆ ಪಶ್ಚಿಮ ಬಂಗಾಳದ ನಾರ್ಥ್​ 24 ಪರಗಣ ಜಿಲ್ಲೆಯ ಪ್ರಿಯಾನಾಥ್​ ಗರ್ಲ್ಸ್​ ಹೈಸ್ಕೂಲ್​ನಲ್ಲಿ ವಿಜ್ಞಾನ ಶಿಕ್ಷಕಿಯಾಗಿದ್ದರು. ಇವರು ಬುದ್ಧದೇವ್ ಭಟ್ಟಾಚಾರ್ಯ ಅವರ ಪತ್ನಿ ಮೀರಾ ಅವರ ಸಹೋದರಿ. ಇದೀಗ ಕಳೆದ ಎರಡು ವರ್ಷಗಳಿಂದ ಫುಟ್​ಪಾತ್​ ಮೇಲೆ ಬದುಕು ಸವೆಸುತ್ತಿದ್ದಾರೆ.
ಇರಾ ಬಸು ಅವರು ಪ್ರಿಯಾನಾಥ್​ ಗರ್ಲ್ಸ್​ ಹೈಸ್ಕೂಲ್​ನಲ್ಲಿ ಸೇವೆ ಸಲ್ಲಿಸಿ, 2009ರ ಜೂನ್​ 28ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದರು. ಈ ವೇಳೆ ಬುದ್ಧದೇವ್ ಭಟ್ಟಾಚಾರ್ಯ ಅವರು ಪಶ್ಚಿಮ ಬಂಗಾಳ ಸಿಎಂ ಆಗಿದ್ದರು. ಆ ಸಮಯದಲ್ಲಿ ಬಸು ಅವರು ಬಾರಾನಗರದಲ್ಲಿ ವಾಸಿಸುತ್ತಿದ್ದರು. ತದನಂತರ ಖಾರ್ದಾದ ಲಿಚು ಬಗಾನ್ ಪ್ರದೇಶಕ್ಕೆ ತೆರಳಿದರು. ಅಲ್ಲಿಯೇ ವಾಸವಿದ್ದ ಬಸು ಅವರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಕೆಲವು ದಿನಗಳಿಂದ ಡನ್​ಲಪ್​ ಏರಿಯಾದ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದರು. ನಿವೃತ್ತಿ ಹೊಂದಿದ ಬಳಿಕ ಪಿಂಚಣಿಗೆ ಎಲ್ಲ ದಾಖಲೆಗಳನ್ನು ಸಲ್ಲಿಸಿ ಎಂದು ಶಾಲೆಯ ಹೆಡ್​ ಮಾಸ್ಟರ್​ ಹೇಳಿದ್ದರೂ ಕೂಡ ಬಸು ಯಾವುದೇ ದಾಖಲೆಗಳನ್ನು ನೀಡಿರಲಿಲ್ಲವಂತೆ.
ಇದೇ ವರ್ಷದ ಶಿಕ್ಷಕರ ದಿನದಂದು (ಸೆಪ್ಟೆಂಬರ್ 5) ಇರಾ ಬಸು ಅವರನ್ನು ಡನ್ಲೋಪ್ ನಲ್ಲಿರುವ ‘ಆರ್ಟ್ಯಾಜಾನ್’ ಸಂಸ್ಥೆಯ ಸದಸ್ಯರು ಗುರುತಿಸಿ ಸನ್ಮಾನಿಸಿದರು. ಆಕೆಗೆ ಹಾರ ಹಾಕಿ ಸಿಹಿ ತಿನ್ನಿಸಲಾಯಿತು. ಆ ಸಂದರ್ಭದಲ್ಲಿ ಎಲ್ಲ ಶಿಕ್ಷಕರ ನನ್ನನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅನೇಕ ವಿದ್ಯಾರ್ಥಿಗಳು ನನ್ನನ್ನು ಗುರುತು ಹಿಡಿಯುತ್ತಾರೆ. ಕೆಲವರನ್ನು ತಬ್ಬಿ ಕಣ್ಣೀರಾಕುತ್ತಾರೆಂದಿದ್ದರು.
ಬುದ್ಧದೇವ್ ಭಟ್ಟಾಚಾರ್ಯರ ಕುಟುಂಬದೊಂದಿಗಿನ ತನ್ನ ಸಂಬಂಧದ ಕುರಿತು, “ನಾನು ಶಾಲಾ ಶಿಕ್ಷಕಿಯಾಗಿ ನನ್ನ ವೃತ್ತಿಜೀವನವನ್ನು ಆರಂಭಿಸಿದಾಗ ನಾನು ಅವರಿಂದ ಯಾವುದೇ ಪ್ರಯೋಜನಗಳನ್ನು ಪಡೆಯಲು ಬಯಸಲಿಲ್ಲ. ನಾನು ಅದನ್ನು ನನ್ನ ಸ್ವಂತ ಸಾಮರ್ಥ್ಯದ ಮೇಲೆ ಮಾಡಿದ್ದೇನೆ. ನಾನು ವಿಐಪಿ ಗುರುತನ್ನು ಬಯಸುವುದಿಲ್ಲ, ಆದರೂ ಅನೇಕ ಜನರು ನಮ್ಮ ಕೌಟುಂಬಿಕ ಸಂಬಂಧದ ಬಗ್ಗೆ ತಿಳಿದುಕೊಂಡಿದ್ದಾರೆಂದು ತಿಳಿಸಿದ್ದರು.
ಇರಾ ಬಸು ಅವರ ಪ್ರಸ್ತುತ ಜೀವನ ಪರಿಸ್ಥಿತಿಗಳ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ, ಸ್ಥಳೀಯ ಆಡಳಿತವು ಆಕೆಯನ್ನು ಗುರುವಾರ ಆಂಬ್ಯುಲೆನ್ಸ್‌ನಿಂದ ಡನ್‌ಲೋಪ್ ಪ್ರದೇಶದಿಂದ ಬರಾನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಬಳಿಕ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಅವರನ್ನು ಕೋಲ್ಕತ್ತದ ಪ್ರಮುಖ ಆಸ್ಪತ್ರೆಗೆ ಕರೆದೊಯ್ಯಲಾಯಿತು.(ಏಜೆನ್ಸೀಸ್​)
ನಟ ಧರಮ್ ತೇಜ್​ ಇತ್ತೀಚೆಗೆ ಖರೀದಿಸಿದ್ದ ದುಬಾರಿ ಬೈಕ್​ನಿಂದಲೇ ದುರಂತ: ಅದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

VIDEO| ಅಪಘಾತದಲ್ಲಿ ನಟ ಧರಮ್​ ತೇಜ್​ ಸ್ಥಿತಿ ಗಂಭೀರ: ಬೈಕ್​ ಸ್ಕಿಡ್​ ಆದ ಭಯಾನಕ ವಿಡಿಯೋ ವೈರಲ್​..!

ಭೀಕರ ಅಪಘಾತದಿಂದ ನಟ ಸಾಯಿ ಧರಮ್​ ತೇಜ್ ಬಚಾವ್​ ಆಗಿದ್ಹೇಗೆ? ಅದೊಂದಿಲ್ಲದಿದ್ದರೆ ಬದುಕುತ್ತಿರಲಿಲ್ಲವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 11 =
Remember me
