ಪಲಕ್ಕಾಡ್​:ನೆರೆಮನೆಯ ಬಾತ್​ರೂಮ್​ಗಳಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸುವ ಮೂಲಕ ಗೃಹಿಣಿಯರ ಅಶ್ಲೀಲ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದ ಆರೋಪದ ಮೇಲೆ ಮಾಜಿ ಸಿಪಿಎಂ ನಾಯಕನನ್ನು ಕೇರಳ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಆರೋಪಿಯನ್ನು ಶಹಜಹಾನ್​ ಎಂದು ಗುರುತಿಸಲಾಗಿದೆ. ಈತ ಕೊಡುಂಬಾ ನಿವಾಸಿ. ಸಿಪಿಎಂ ಪಕ್ಷದ ಮಾಜಿ ನಾಯಕನಾಗಿರುವ ಈತನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ವಿಶೇಷ ತನಿಖಾ ತಂಡವನ್ನು ನಿಯೋಜಿಸಿದ ಕೂಡಲೇ ಆರೋಪಿ ಶಹಜಹಾನ್​ ತನ್ನ ರಾಜ್ಯವನ್ನೇ ತೊರೆದು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಜಾಮೀನು ರಹಿತ ಕಾಯ್ದೆಯಡಿ ಶಹಜಹಾನ್​ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಬಾತ್​ರೂಮ್​ ಕಿಟಕಿಯ ಬಳಿ ವ್ಯಕ್ತಿಯೊಬ್ಬನ ನೆರಳು ನೋಡಿ ಮಹಿಳೆ ಕಿರುಚಿಕೊಂಡಾಗ ಶಹಜಹಾನ್​ ಅಲ್ಲಿಂದ ಕಾಲ್ಕಿತ್ತಿದ್ದ. ಓಡುವಾಗ ಆತನ ಮೊಬೈಲ್​ ಮಾತ್ರ ಹತ್ತಿರದ ಮೈದಾನದಲ್ಲಿ ಬಿದ್ದಿತ್ತು. ರಹಸ್ಯ ಕ್ಯಾಮೆರಾವನ್ನು ಅಳವಡಿಸಿದ್ದೇ ಶಹಜಹಾನ್​ ಎಂದರಿಯದ ಮಹಿಳೆ ಸಹಾಯಕ್ಕಾಗಿ ಶಹಜಹಾನ್​ ನೆರವು ಕೋರಿದ್ದಳು.
ಇತ್ತ ಹತ್ತಿರದ ಮೈದಾನದಲ್ಲಿ ಆತನ ಮೊಬೈಲ್​ ರಿಂಗ್​ ಆಗುವುದನ್ನು ಕೇಳಿದಾಗ ಮಹಿಳೆಗೆ ಶಹಜಹಾನ್​ ಮೇಲೆಯೇ ಅನುಮಾನ ಶುರುವಾಯಿತು. ಸಿಕ್ಕ ಮೊಬೈಲ್ ನೋಡಿದಾಗ ಅದರಲ್ಲಿ ಕೆಲವೊಂದು ಅಶ್ಲೀಲ ವಿಡಿಯೋಗಳನ್ನು ನೋಡಿ ಆತನದ್ದೇ ಈ ಕೆಲಸ ಎಂಬುದು ಮಹಿಳೆಗೆ ದೃಢವಾದ ಕೂಡ ಮೊಬೈಲ್​ ಸಮೇತ ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು.
ಜಾಮೀನು ರಹಿತ ಕಾಯ್ದೆಯಡಿ ಶಹಜಹಾನ್​ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇತ್ತ ದೂರು ದಾಖಲಾಗುತ್ತಿದ್ದಂತೆ ಆತನ ಬಂಧನಕ್ಕೆ ವಿಶೇಷ ತನಿಖಾ ತಂಡದ ರಚನೆ ಮಾಡಲಾಯಿತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಆರೋಪಿ​ ರಾಜ್ಯವನ್ನೇ ತೊರೆದು ತಮಿಳುನಾಡಿಗೆ ಪರಾರಿಯಾಗಿದ್ದ. ಇದೀಗ ಬಂಧಿಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.(ಏಜೆನ್ಸೀಸ್​)
ಇಡಿಯಿಂದ ರಾಹುಲ್​ ಗಾಂಧಿ ಬಂಧನವಾಗುತ್ತಾ? ಛತ್ತೀಸ್​ಗಢ ಮುಖ್ಯಮಂತ್ರಿ ಕೊಟ್ಟ ಸ್ಫೋಟಕ ಉತ್ತರ ಹೀಗಿದೆ…

ಐದು ದಿನಗಳಲ್ಲಿ 32 ಕೋಟಿ!; ಗಲ್ಲಾಪೆಟ್ಟಿಗೆಯಲ್ಲಿ ‘777 ಚಾರ್ಲಿ’ ಹಾವಳಿ

ಸಂಚಾರಿ ಇಲ್ಲದೆ ಒಂದು ವರ್ಷ; ವಿಜಯನಿಧಿ ತೋಟದಲ್ಲಿ ಪುತ್ಥಳಿ ಸ್ಥಾಪನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 5 =
Remember me
