ಹೈದರಾಬಾದ್​:ಆಂಧ್ರಪ್ರದೇಶದ ಏಳೂರು ಕ್ಷೇತ್ರದ ಮಾಜಿ ಸಂಸದ ಮಗಂತಿ ವೆಂಕಟೇಶ್ವರ ರಾವ್​ ಪುತ್ರ ಹೈದರಾಬಾದ್​ನ ಬಂಜಾರ ಹಿಲ್ಸ್​ನ ಹಯಾಟ್ ಪ್ಲೇಸ್ ಹೋಟೆಲ್​ನಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಾಜಿ ಸಂಸದರ ಪುತ್ರ ಮಗಂತಿ ರವೀಂದ್ರನಾಥ್​ ಚೌಧರಿ ಅನಾರೋಗ್ಯದಿಂದ ಮೃತಪಟ್ಟಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ರವೀಂದ್ರನಾಥ್​ ಹೈದರಾಬಾದ್​ನ ಕೊಕಪೇಟೆಯ ನಿವಾಸಿ. ಇವರು ಲಿವರ್​ ಸಮಸ್ಯೆಯಿಂದ ಬಳಲುತ್ತಿದ್ದರು. ಬಹುದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ನಗರದಲ್ಲಿ ಪುನರ್ವಸತಿ ಕೇಂದ್ರಕ್ಕೆ ಸೇರಿಕೊಂಡಿದ್ದರು.
ಏಪ್ರಿಲ್​ 28ರಿಂದ ರವೀಂದ್ರನಾಥ್​ ಹೋಟೆಲ್​ನಲ್ಲಿ ತಂಗಿದ್ದರು. ಜೂನ್​ 1ರಂದು ಹೋಟೆಲ್​ನಿಂದ ಖಾಲಿ ಮಾಡುವುದಾಗಿ ಹೇಳಿದ್ದರು. ಆದರೆ, ಆಗಿದ್ದೇ ಬೇರೆ. ಅದೇ ದಿನ ಸಂಜೆ ಹೋಟೆಲ್​ ಸಿಬ್ಬಂದಿ ರವೀಂದ್ರನಾಥ್​ಗೆ ನೆನಪು ಮಾಡಲು ಹೋದಾಗ ಕೋಣೆ ಬಾಗಿಲು ಮುಚ್ಚಿತ್ತು. ಎಷ್ಟು ಬಾಗಿಲು ಬಡಿದರು ಪ್ರತಿಕ್ರಿಯೆ ನೀಡದಿದ್ದಾಗ ಹೋಟೆಲ್​ ಸಿಬ್ಬಂದಿ ತದನಂತರದಲ್ಲಿ ಬಂಜಾರ ಹಿಲ್ಸ್​ ಪೊಲೀಸರಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದುಕೊಂಡು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ಒಳಗಡೆ ನುಗ್ಗಿದಾಗ ರವೀಂದ್ರನಾಥ್​ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಆದರೆ, ದೇಹದಲ್ಲಿ ಯಾವುದೇ ಗಾಯದ ಗುರುತುಗಳಿರಲಿಲ್ಲ. ಬಹುಶಃ ಅನಾರೋಗ್ಯ ಸಮಸ್ಯೆಯಿಂದಲೇ ಮೃತಪಟ್ಟಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಆದರೂ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ರವೀಂದ್ರನಾಥ್​ ಮೃತದೇಹವನ್ನು ಒಸ್ಮಾನಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಅವರ ಕುಟುಂಬಸ್ಥರಿಗೂ ಮಾಹಿತಿ ನೀಡಲಾಗಿದ್ದು, ಕುಟುಂಬ ಸದಸ್ಯನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.(ಏಜೆನ್ಸೀಸ್​)
ರಾಜ್ಯದ ಪಾಲಿಗೆ ಕಹಿ ಸುದ್ದಿ: KSRTC ಹೆಸರು, ಲೋಗೋ ಕಳೆದುಕೊಳ್ಳಲಿದೆ ಕರ್ನಾಟಕ!

ಐಪಿಎಲ್​ ಭಾಗ-2ಕ್ಕೆ ಆಗಮಿಸದಿದ್ದರೆ ವಿದೇಶಿ ಆಟಗಾರರಿಗೆ ಕಾದಿದೆ ಶಾಕ್​..!

ಕಂದಮ್ಮನ ಗಂಟಲಲ್ಲಿ ಬೀಜವಿದೆ ಚಿಕಿತ್ಸೆ ಕೊಡಿ ಎಂದು ಗೋಗರೆದರೂ ಚಿಕಿತ್ಸೆ ಕೊಡದ ಆಸ್ಪತ್ರೆ! ಕರೊನಾ ರಿಪೋರ್ಟ್​ನಿಂದಾಗಿ ಮಗಳ ಪ್ರಾಣವೇ ಬಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
