ಹೈದರಾಬಾದ್​:ಮಹಾಮಾರಿ ಕೋವಿಡ್​ನಿಂದಾಗಿ ಶಾಲೆಯಿಂದ ದೂರ ಉಳಿದಿದ್ದ ವಿದ್ಯಾರ್ಥಿಗಳು ಇದೀಗ ಮತ್ತೆ ಶಾಲೆಯ ಮೆಟ್ಟಿಲೇರುತ್ತಿರುವುದು ಒಂದು ರೀತಿಯ ವಿಶಿಷ್ಟ ಅನುಭವ. ಹೀಗಾಗಿ ಈ ಕ್ಷಣವನ್ನು ಕೆಲವೆಡೆ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆಯೆಂದರೆ, ಇತ್ತೀಚೆಗೆ ಹೈದರಾಬಾದ್​ನ ಮಾಜಿ ಶಾಸಕ ವಿಷ್ಣುವರ್ಧನ್​ ರೆಡ್ಡಿಯವರು ತಮ್ಮ ಮಗಳನ್ನು ಮೆರವಣಿಗೆ ಮೂಲಕ ಶಾಲೆಗೆ ಬಿಟ್ಟು ಬಂದಿದ್ದಾರೆ.
ಎರಡು ವರ್ಷಗಳ ಸುದೀರ್ಘ ಅಂತರದ ಬಳಿಕ ಮಗಳು ಜನಶ್ರೀ ರೆಡ್ಡಿ ಮತ್ತೆ ಶಾಲೆಗೆ ಹೋಗಲು ಆರಂಭಿಸಿದ್ದಾಳೆ. ಇದರಿಂದ ತಂದೆಯ ಸಂತೋಷಕ್ಕೆ ಮಿತಿಯೇ ಇಲ್ಲದಂತಾಗಿದೆ. ಹೀಗಾಗಿ ಮಗಳಿಗೆ ಸರ್ಪ್ರೈಸ್​ ಕೊಡಲು ಮಾಜಿ ಶಾಸಕ ವಿಷ್ಣುವರ್ಧನ್​ ರೆಡ್ಡಿ ಪ್ಲಾನ್​ ಮಾಡಿ ಮೆರವಣಿಗೆಯನ್ನು ಆಯೋಜನೆ ಮಾಡಿದ್ದರು.
ತಂದೆಯ ಈ ಸರ್ಪ್ರೈಸ್​ನಿಂದ ಗಲಿಬಿಲಿಗೊಂಡ 13 ವರ್ಷದ ಮಗಳು ಆರಂಭದಲ್ಲಿ ಶಾಲೆಗೆ ಹೋಗಲು ನಿರಾಕರಿಸಿದಳು. ಆದರೆ, ನಂತರದಲ್ಲಿ ತಂದೆಯ ಮಾತಿಗೆ ಗೌರವ ಕೊಟ್ಟು ಮೆರವಣಿಗೆಯನ್ನು ಎಂಜಾಯ್​ ಮಾಡಿಕೊಂಡು ಶಾಲೆಗೆ ಹೋಗಿದ್ದಾಳೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ, ಎರಡು ವರ್ಷಗಳ ನಂತರ ತಮ್ಮ ಮಗಳು ದೈಹಿಕ ತರಗತಿಗಳಿಗೆ ಹಾಜರಾಗುತ್ತಿರುವುದು ತನಗೆ ಅತ್ಯಂತ ವಿಶೇಷ ಕ್ಷಣವಾಗಿದೆ ಎಂದು ಹೇಳಿದರು.(ಏಜೆನ್ಸೀಸ್​)
ವೈರಲ್​ ಆಯ್ತು ಕಚ್ಚಾ ಬಾದಮ್​ ಹಾಡಿಗೆ ಪೊಲೀಸ್​ ಸಿಬ್ಬಂದಿ ಹಾಕಿದ ಸ್ಟೆಪ್ಸ್​: ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ ನೋಡಿ…

ಬಿಜೆಪಿ ನಾಯಕನ ಹೇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿ ವಿರುದ್ಧ ಶಾಕಿಂಗ್​ ಕಾಮೆಂಟ್​ ಮಾಡಿದ ಪ್ರಕಾಶ್​ ರಾಜ್​!

The Kashmir Files: ಉಗ್ರರ ಕಣ್ಣುತಪ್ಪಿಸಿ ಅಕ್ಕಿ ಡ್ರಮ್​ನಲ್ಲಿ ಬಚ್ಚಿಟ್ಟುಕೊಂಡ ನನ್ನ ಅಣ್ಣನನ್ನು ಗುಂಡು ಹಾರಿಸಿ ಕೊಂದೇ ಬಿಟ್ಟರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eight =
Remember me
