ನವದೆಹಲಿ:ರಸ್ತೆ ಪಕ್ಕ ಪಾರ್ಕ್​ ಮಾಡಿದ್ದ ವಾಹನಗಳಿಗೆ ಸರಣಿ ಅಪಘಾತ ಮಾಡಿದ್ದಲ್ಲದೆ, ವ್ಯಕ್ತಿಯೊಬ್ಬನನ್ನು ಸುಮಾರು 100 ಮೀಟರ್​ವರಗೆ ಟೊಯೊಟಾ ಫಾರ್ಚುನರ್​ ಕಾರೊಂದು ಎಳೆದುಕೊಂಡು ಹೋದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿ ಕರೊಲ್​ ಬಾಘ್​ ಏರಿಯಾದಲ್ಲಿ ಸೋಮವಾರ (ಸೆ.19) ರಾತ್ರಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಹಿಳೆಯೊಬ್ಬಳು ರಸ್ತೆ ಒಂದು ಬದಿಯಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಎಸ್​ಯುವಿ ಕಾರು ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಪಾರ್ಕ್​ ಮಾಡಿರುವ ವಾಹನಗಳನ್ನು ಡಿಕ್ಕಿ ಹೊಡೆದುಕೊಂಡು ಮುಂದೆ ಸಾಗುತ್ತದೆ. ಅಲ್ಲದೆ, ಕಾರಿನ ಅಡಿಗೆ ಸಿಲುಕುವ ವ್ಯಕ್ತಿಯೊಬ್ಬನ್ನನು 100 ಮೀಟರ್​ ದೂರ ಎಳೆದುಕೊಂಡು ಬರುತ್ತದೆ. ಇದನ್ನು ನೋಡಿ ಅಲ್ಲಿದ್ದ ಜನರು ಒಂದು ಕ್ಷಣ ಶಾಕ್​ ಆಗುತ್ತಾರೆ. ಇದಿಷ್ಟು ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಾನಿಗೊಳಗಾದ ಕಾರುಗಳು ಮತ್ತು ದ್ವಿಚಕ್ರ ವಾಹನದ ಅವಶೇಷಗಳನ್ನು ಸಹ ವಿಡಿಯೋದಲ್ಲಿ ಕಾಣಬಹುದು. ಎಸ್‌ಯುವಿ ಕಾರು ಸದ್ಯ ಪೊಲೀಸರ ವಶದಲ್ಲಿದ್ದು, ಚಾಲಕ ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ರವಿಚಂದ್ರನ್ ಅಭಿಮಾನಿ ಈ ಸೂಜಿ; ಗುರು ಶಿಷ್ಯರು ಚಿತ್ರದ ಬಗ್ಗೆ ನಿಶ್ವಿಕಾ ಮಾತು

ನಾಸ್ತಿಕರೂ ಆಸ್ತಿಕರಾಗುವ ಕಾಂತಾರ; ಕಂಬಳ ಕಥೆಯ ಭಾಗವಷ್ಟೇ, ಕಂಬಳವೇ ಚಿತ್ರವಲ್ಲ: ರಿಷಬ್

ಕೈ ಸ್ವಚ್ಛವಾಗಿಟ್ಟುಕೊಳ್ಳೋಣ: ಮನೋಲ್ಲಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − two =
Remember me
