ವಿಜಯವಾಡ​:ವಾಟ್ಸ್​ಆ್ಯಪ್​ನಲ್ಲಿ ಬಂದು ಸಂದೇಶವೊಂದನ್ನು ಫಾರ್ವಡ್​ ಮಾಡಿದ್ದೇ ವ್ಯಕ್ತಿಯೊಬ್ಬನ ದುರಂತ ಸಾವಿಗೆ ಕಾರಣವಾಗಿದೆ. ಪೊಲೀಸ್​ ತನಿಖೆಯ ಭಯದಿಂದಲೇ ತೆಲಂಗಾಣದ ನಾರಾಯಣ ಪೇಟೆಯ ನಿವಾಸಿ ಗುತ್ತಲ ಶ್ರೀನಿವಾಸ್​ (38) ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ಅಮಲಾಪುರಂನಲ್ಲಿ ದುರಂತ ನಡೆದಿದೆ.
ಶುಕ್ರವಾರ (ಮೇ 14) ತೀವ್ರ ಅನಾರೋಗ್ಯದಿಂದ ಶ್ರೀನಿವಾಸ್​ ಮೃತಪಟ್ಟಿದ್ದು, ಮೃತನ ಪತ್ನಿ ಪದ್ಮಾ ಅವರು ತನ್ನ ಗಂಡನ ಸಾವಿಗೆ ಪೊಲೀಸರ ಕಿರುಕುಳವೇ ಕಾರಣ ಎಂದು ಸ್ಥಳೀಯ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.
ಪೂರ್ವ ಗೋದಾವರಿಯ ಅಮಲಾಪುರದ ಅಕ್ವಾ ಕಂಪನಿಯಲ್ಲಿ ಶ್ರೀನಿವಾಸ್ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಶ್ರೀನಿವಾಸ್​ ಮೊಬೈಲ್​ಗೆ ವಾಟ್ಸ್​ಆ್ಯಪ್​ ಸಂದೇಶವೊಂದು ಬಂದಿತ್ತು. ಅದರಲ್ಲಿ ಕೋಳಿಗಳಲ್ಲೂ ಕರೊನಾ ಸೋಂಕು ಕಂಡುಬಂದಿದೆ ಎಂಬ ಸಂದೇಶವಿತ್ತು. ಇದು ದುರುದ್ದೇಶದ ಸಂದೇಶವಾಗಿದ್ದು, ಸ್ವಲ್ಪವೂ ಯೋಚಿಸದೇ ಶ್ರೀನಿವಾಸ್​ ಬೇರೆ ಗ್ರೂಪ್​ಗಳಿಗೆ ಅದನ್ನು ಫಾರ್ವರ್ಡ್​ ಮಾಡಿದ್ದ. ​
ಇದಾದ ಬೆನ್ನಲ್ಲೇ ಹೈದರಾಬಾದ್​ ಪೊಲೀಸರು ಶ್ರೀನಿವಾಸ್​ಗೆ ಕರೆ ಮಾಡಿ ವಾಟ್ಸ್​ಆ್ಯಪ್​ ಸಂದೇಶದ ಬಗ್ಗೆ ಪ್ರಶ್ನಿಸಿದ್ದರು. ಆದರೆ, ಆ ಬಗ್ಗೆ ನನಗೇನು ತಿಳಿದಿಲ್ಲ ಎಂದು ಉತ್ತರಿಸಿದ್ದ. ಆದರೆ, ಪೊಲೀಸರು ಮತ್ತೆ ಕರೆ ಮಾಡಬಹುದು, ತನಿಖೆ ಮಾಡಬಹುದು ಎಂಬ ಭಯದಿಂದ ಕುಸಿದುಬಿದ್ದಿದ್ದ. ತಕ್ಷಣ ಆತನನ್ನು ಅಮಲಾಪುರದ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ದಾಖಲಾದ ಒಂದೇ ಗಂಟೆಯಲ್ಲಿ ಶ್ರೀನಿವಾಸ್​ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶ್ರೀನಿವಾಸ್​ ಪತ್ನಿ ಪದ್ಮಾ, ಪೊಲೀಸರು ಫೋನ್​ನಲ್ಲಿ ಬೆದರಿಸಿ, ಇದು ದೊಡ್ಡ ಕೇಸ್​ ಆಗಲಿದೆ ಎಂದು ಬೆದರಿಸಿದರು. ಇದರಿಂದ ಹೆದರಿ ನನ್ನ ಪತಿ ಮೃತಪಟ್ಟಿದ್ದಾರೆ. ಸೈಬರ್​ ಕ್ರೈಮ್​ ಸಿಐ ರಾಜೇಶ್​, ಎಸ್​ಐ ರಂಜಿತ್​ ಕುಮಾರ್​ ಪತಿ ಮಾನಸಿಕ ಕಿರುಕುಳ ನೀಡಿದರು ಎಂದು ಆರೋಪಿಸಿದ್ದಾರೆ.
ಪತಿಯನ್ನು ಕಳೆದುಕೊಂಡಿರುವ ಪದ್ಮಾ ಇದೀಗ 9 ವರ್ಷದ ಮಗ ಮತ್ತು 7 ವರ್ಷದ ಮಗಳ ಜವಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದ್ದು, ಕುಟುಂಬದಲ್ಲಿ ಆಕ್ರಂದನ ನೀರವ ಮೌನ ಆವರಿಸಿದೆ.(ಏಜೆನ್ಸೀಸ್​)
ಕೊಡಲಿ ಹಿಡಿದು ಮದ್ವೆ ಮಂಟಪಕ್ಕೆ ನುಗ್ಗಿದ ಒನ್​ ಸೈಡ್​ ಲವರ್​: ಮುಂದಾಗಿದ್ದು ಹ್ಯಾಪಿ ಎಂಡಿಂಗ್​!

ಮತ್ತೆ ಶುರುವಾಗುತ್ತಾ ಬಿಗ್​ಬಾಸ್​ ಸೀಸನ್​ 8? ಕಿಚ್ಚನ ಆ ಒಂದು ಮಾತು ನಿಜವಾಗಲಿದೆಯೇ?

ರೈತರೇ ಲಾಕ್​ಡೌನ್​ ಚಿಂತೆ ಬಿಡಿ, ನಿಮ್ಮ ಬೆಳೆಗೆ ಸೂಕ್ತ ಬೆಲೆಕೊಟ್ಟು ಖರೀದಿಸುವೆ, ಈ ನಂಬರ್​ಗೆ ಕರೆ ಮಾಡಿ: ನಟ ಉಪೇಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − six =
Remember me
