ಲಖನೌ:ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಂದು ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರವು ಉತ್ತರ ಪ್ರದೇಶದ ಜನರಿಗೆ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಆಗಸ್ಟ್​ 15ರಿಂದ ರಾಜ್ಯದ 217 ಪಟ್ಟಣಗಳಲ್ಲಿ ಉಚಿತ ವೈಫೈ ಸೌಲಭ್ಯ ನೀಡಲು ಸರ್ಕಾರ ತಯಾರಿ ನಡೆಸಿದೆ.
ಈ ಯೋಜನೆಯಲ್ಲಿ 17 ಮುನ್ಸಿಪಾಲ್​ ಕಾರ್ಪೊರೇಷನ್​ ಸೇರಿದಂತೆ 75 ಜಿಲ್ಲಾ ಕೇಂದ್ರಗಳು ಒಳಗೊಂಡಿವೆ. ಸಿಎಂ ಯೋಗಿ ಅವರ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆ ಉಚಿತ ವೈಫೈ ನೀಡುವ ಯೋಜನೆಯನ್ನು ಉದ್ಘಾಟಿಸಿದ್ದಾರೆ. ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಪುರಸಭೆ ಆಯುಕ್ತರಿಗೆ ಈಗಾಗಲೇ ಸೂಚನೆ ರವಾನೆ ಆಗಿದ್ದು, ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ವೈಫೈ ಸೌಲಭ್ಯ ನೀಡಲು ಹಾಟ್​ಸ್ಪಾಟ್​ ಗುರುತು ಮಾಡುವಂತೆ ಹೇಳಲಾಗಿದೆ.
ಆಗಸ್ಟ್​ 15ರಿಂದ ಉತ್ತರ ಪ್ರದೇಶದ ಪ್ರತಿ ಪಟ್ಟಣದ ಬಸ್​ ನಿಲ್ದಾಣ, ರೈಲು ನಿಲ್ದಾಣ, ತಾಲೂಕು ಕಚೇರಿ, ನ್ಯಾಯಾಲಯ, ಬ್ಲಾಕ್​ ಆಫೀಸ್​, ರಿಜಿಸ್ಟ್ರಾರ್​ ಆಫೀಸ್​ ಮತ್ತು ಪ್ರಮುಖ ಮಾರುಕಟ್ಟೆಗಳಲ್ಲಿ ಉಚಿತ ಸೌಲಭ್ಯ ದೊರೆಯಲಿದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಸಿದಂತೆ ಉಚಿತ ವೈಫೈ ಸೌಲಭ್ಯ ನೀಡಿ ಭರವಸೆ ಉಳಿಸಿಕೊಂಡಿದೆ.
ಯೋಗಿ ಆದಿತ್ಯನಾತ್​ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ರಾಜಧಾನಿ ಲಖನೌ ಸೇರಿದಂತೆ ಪ್ರಮುಖ ನಗರಗಳಲ್ಲಿ ಉಚಿತ ವೈಫೈ ಸೌಲಭ್ಯವನ್ನು ನೀಡಿದ್ದರು. ಇದೀಗ ಅದೇ ರೀತಿಯಲ್ಲಿ ಜಿಲ್ಲಾ ಕೇಂದ್ರಗಳು, ಮುನ್ಸಿಪಲ್​ ಕೌನ್ಸಿಲ್​ಗಳು ಮತ್ತು ಮುನ್ಸಿಪಲ್​ ಕಾರ್ಪೊರೇಷನ್​ಗಳಲ್ಲಿ ಉಚಿತ ವೈಫೈ ನೀಡಲು ಸಜ್ಜಾಗಿದೆ.(ಏಜೆನ್ಸೀಸ್​)
ಮಕ್ಕಳಿಗೆ ಸ್ಮಾರ್ಟ್​ಫೋನ್​ ಕೊಡಿಸಿದ ತಾಯಿಗೆ ಶಾಕ್​! ರಹಸ್ಯ ಮಾಹಿತಿ ಕದ್ದು ಮಾಡಿದರೊಂದು ಎಡವಟ್ಟು

Tokyo Olympics| ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಸರ್ಕಾರಿ ಉದ್ಯೋಗದ ಜತೆಗೆ 1 ಕೋಟಿ ರೂ. ಬಹುಮಾನ!

ಸೆ.24ಕ್ಕೆ ಧನಂಜಯ ಅಭಿನಯದ ಬಡವ ರಾಸ್ಕಲ್ ಬಿಡುಗಡೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:16 + 15 =
Remember me
