ನವದೆಹಲಿ:ನಾಲ್ಕೂವರೆ ತಿಂಗಳ ಬಳಿಕ ನಿನ್ನೆ (ಮಾ.22) ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ 80 ಪೈಸೆಗಳಷ್ಟು ಏರಿಕೆಯಾಗಿತ್ತು. ಇಂದು (ಮಾ.23) ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ 80 ಪೈಸೆ ಹೆಚ್ಚಳವಾಗಿದ್ದು, ಸಾಮಾನ್ಯ ಜನರಿಗೆ ಬ್ಯಾಕ್​ ಟು ಬ್ಯಾಕ್​ ಶಾಕ್​ ಎದುರಾಗುತ್ತಿದೆ.
ಒಂದೆಡೆ ಯೂಕ್ರೇನ್​-ರಷ್ಯಾ ಯುದ್ಧದಿಂದ ಖಾದ್ಯ ತೈಲ ಮತ್ತು ಗೋಧಿ ಸೇರಿದಂತೆ ಕೆಲವೊಂದು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದೀಗ ಇಂಧನ ದರ ಮತ್ತೊಮ್ಮೆ ಏರಿಕೆಯಾಗಿರುವು ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾವು ಮತ್ತೊಮ್ಮೆ ಹೆಚ್ಚಾಗಲಿದ್ದು, ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ.
ಇಂದು ಬೆಳಗ್ಗೆ 6 ಗಂಟೆಯಿಂದಲೇ ದರ ಏರಿಕೆ ಪರಿಷ್ಕರಣೆಯಾಗಿದ್ದು, ಇಂದಿನ ಇಂಧನ ದರ ಈ ಕೆಳಕಂಡಂತಿದೆದೆಹಲಿಪೆಟ್ರೋಲ್​:ಪ್ರತಿ ಲೀಟರ್​ಗೆ 97.01 ರೂಪಾಯಿಡೀಸೆಲ್​:ಪ್ರತಿ ಲೀಟರ್​ಗೆ 88.27
ಮುಂಬೈಪೆಟ್ರೋಲ್​:111.58 ರೂ.ಡೀಸೆಲ್​:95.74
ಚೆನ್ನೈಪೆಟ್ರೋಲ್​:102.96 ರೂ.ಡೀಸೆಲ್​:92.99
ಕೊಲ್ಕತಪೆಟ್ರೋಲ್​:106.31 ರೂ.ಡೀಸೆಲ್​:91.42
ಬರೋಬ್ಬರಿ 137 ದಿನಗಳವರೆಗೆ ತಟಸ್ಥವಾಗಿದ್ದ ಇಂಧನ ದರ ಇದೀಗ ಏರುಗತಿಯಲ್ಲಿದೆ. ಪಂಚ ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಇಂಧರ ದರದಲ್ಲಿ ಯಾವುದೇ ಬದಲಾವಣೆ ಕಂಡಿರಲಿಲ್ಲ. ಇದೀಗ ಚುನಾವಣೆ ಮುಗಿದ್ದಿದ್ದು, ಮತ್ತೆ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಲಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕವಾಗಿದೆ. ಭಾರತ ತನ್ನ ತೈಲ ಅಗತ್ಯದ ಸುಮಾರು 85% ನಷ್ಟು ಭಾಗವನ್ನು ಸಾಗರೋತ್ತರ ಮಾರುಕಟ್ಟೆಗಳಿಂದ ತರಿಸಿಕೊಳ್ಳುತ್ತಿದೆ.
ಸ್ಥಳೀಯ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಅಂತರಾಷ್ಟ್ರೀಯ ಬೆಲೆಗಳಿಗೆ ಸಂಬಂಧಿಸಿವೆ. ಇದು ಕಚ್ಚಾ ತೈಲ ಬೆಲೆಗಳ ಮೇಲೆ ನಿರ್ಧಾರವಾಗಿರುತ್ತದೆ. ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಾಗಿದ್ದು, ಇದು ಜಾಗತಿಕ ತೈಲ ಬೆಲೆಗಳ ಮೇಲೆ ಗಣನೀಯ ಪ್ರಭಾವ ಬೀರಿದೆ. ಅಲ್ಲದೆ, ಯುಎಸ್​ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.(ಏಜೆನ್ಸೀಸ್​)
ಕಾರ್ವಿುಕರಿಗೆ ಕನಿಷ್ಠ ವೇತನ ಭದ್ರತೆ; ತಿಂಗಳಿಗೆ 10,685 ರೂಪಾಯಿಗಿಂತ ಕಡಿಮೆ ಸಂಬಳ ಕೊಡುವಂತಿಲ್ಲ

ಮಗು ಮಾಡಿಕೊಳ್ಳಲು ನಯನತಾರಾ ಆಯ್ಕೆ ಮಾಡಿಕೊಂಡ ವಿಧಾನ ಕೇಳಿ ಬೆರಗಾದ ಅಭಿಮಾನಿಗಳು!

ಜನಪ್ರಿಯ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಐಪಿಎಲ್‌ನಲ್ಲಿ ಪುನರಾಗಮನ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
