ನವದೆಹಲಿ:ಕೇವಲ ಒಂದೇ ವಾರದಲ್ಲಿ 6ನೇ ಬಾರಿಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಆಯಿಲ್​ ಕಂಪನಿಗಳು ಗ್ರಾಹಕರಿಗೆ ಬ್ಯಾಕ್​ ಟು ಬ್ಯಾಕ್​ ಶಾಕ್​ ನೀಡುತ್ತಿವೆ. ಇಂದು (ಮಾ.28) ಪೆಟ್ರೋಲ್ ಬೆಲೆಯಲ್ಲಿ 30 ಮತ್ತು ಡೀಸೆಲ್​ ಬೆಲೆಯಲ್ಲಿ 35 ಪೈಸೆಯಷ್ಟು ಏರಿಕೆಯಾಗಿದೆ.
ಮಾರ್ಚ್​ 22 ರಿಂದ ಆರಂಭವಾದ ಇಂಧನ ದರ ಏರಿಕೆಗೆ ಮಾ. 24 ಒಂದು ದಿನ ಮಾತ್ರ ವಿರಾಮ ನೀಡಲಾಗಿತ್ತು. ಇದೀಗ ಪ್ರತಿದಿನ ಬೆಲೆ ಏರಿಕೆ ಮಾಡಲಾಗುತ್ತಿದೆ. ಇಂದು ಕೂಡ ಬೆಲೆ ಏರಿಕೆಯಾಗಿದೆ. ನಾಳೆಯು ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಒಂದೆಡೆ ಯೂಕ್ರೇನ್​-ರಷ್ಯಾ ಯುದ್ಧದಿಂದ ಖಾದ್ಯ ತೈಲ ಮತ್ತು ಗೋಧಿ ಸೇರಿದಂತೆ ಕೆಲವೊಂದು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದೀಗ ಇಂಧನ ದರ ಮತ್ತೊಮ್ಮೆ ಏರಿಕೆಯಾಗಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಇನ್ನಷ್ಟು ತಟ್ಟಲಿದೆ. ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಕಳೆದ 7 ದಿನಗಳಲ್ಲಿ 4 ರೂಪಾಯಿಯಷ್ಟು ಇಂಧನ ದರ ಏರಿಕೆಯಾಗಿದೆ.
ಇಂದು ಬೆಳಗ್ಗೆ 6 ಗಂಟೆಯಿಂದಲೇ ದರ ಏರಿಕೆ ಪರಿಷ್ಕರಣೆಯಾಗಿದ್ದು, ಇಂದಿನ ಇಂಧನ ದರ ಈ ಕೆಳಕಂಡಂತಿದೆ
ಬೆಂಗಳೂರುಪೆಟ್ರೋಲ್​:ಪ್ರತಿ ಲೀಟರ್​ಗೆ 104.73 ರೂಪಾಯಿಡೀಸೆಲ್​:ಪ್ರತಿ ಲೀಟರ್​ಗೆ 85.04 ರೂಪಾಯಿ
ದೆಹಲಿಪೆಟ್ರೋಲ್​:99.41 ರೂಪಾಯಿಡೀಸೆಲ್​:90.77
ಮುಂಬೈಪೆಟ್ರೋಲ್​:114.18 ರೂ.ಡೀಸೆಲ್​:98.48
ಚೆನ್ನೈಪೆಟ್ರೋಲ್​:104.90 ರೂ.ಡೀಸೆಲ್​:95.00
ಕೊಲ್ಕತಪೆಟ್ರೋಲ್​:108.83 ರೂ.ಡೀಸೆಲ್​:93.92
ಹೈದರಾಬಾದ್​ಪೆಟ್ರೋಲ್​:112.36 ರೂ.ಡೀಸೆಲ್​:99 ರೂ.
ಬರೋಬ್ಬರಿ 137 ದಿನಗಳವರೆಗೆ ತಟಸ್ಥವಾಗಿದ್ದ ಇಂಧನ ದರ ಇದೀಗ ಏರುಗತಿಯಲ್ಲಿದೆ. ಒಂದು ವಾರದಲ್ಲಿ 6ನೇ ಬಾರಿ ಏರಿಕೆಯಾಗಿದೆ. ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ಮತ್ತೆ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕವಾಗಿದೆ. ಭಾರತ ತನ್ನ ತೈಲ ಅಗತ್ಯದ ಸುಮಾರು 85% ನಷ್ಟು ಭಾಗವನ್ನು ಸಾಗರೋತ್ತರ ಮಾರುಕಟ್ಟೆಗಳಿಂದ ತರಿಸಿಕೊಳ್ಳುತ್ತಿದೆ.
ಸ್ಥಳೀಯ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಅಂತರಾಷ್ಟ್ರೀಯ ಬೆಲೆಗಳಿಗೆ ಸಂಬಂಧಿಸಿವೆ. ಇದು ಕಚ್ಚಾ ತೈಲ ಬೆಲೆಗಳ ಮೇಲೆ ನಿರ್ಧಾರವಾಗಿರುತ್ತದೆ. ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಾಗಿದ್ದು, ಇದು ಜಾಗತಿಕ ತೈಲ ಬೆಲೆಗಳ ಮೇಲೆ ಗಣನೀಯ ಪ್ರಭಾವ ಬೀರಿದೆ. ಅಲ್ಲದೆ, ಯುಎಸ್​ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.(ಏಜೆನ್ಸೀಸ್​)
ಬೇಕಿದ್ರೆ ನಿಮ್ಮ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ: ಹಿಜಾಬ್​ ವಿವಾದದ ಬಗ್ಗೆ ಶಾಕಿಂಗ್​ ಹೇಳಿಕೆ ಕೊಟ್ಟ ಭುವನ ಸುಂದರಿ!

ಕೋವಿಡ್​ ಕಾಲರ್ ಟ್ಯೂನ್​ ಕೇಳಿ ಕೇಳಿ ಸುಸ್ತಾಗಿರುವವರಿಗೆ ಇಲ್ಲಿದೆ ಒಂದು ಗುಡ್​ ನ್ಯೂಸ್​..!

10 ಹೊಸ ಅಣು ರಿಯಾಕ್ಟರ್: ಕೈಗಾ 5, 6ನೇ ಘಟಕ 2023ರಲ್ಲಿ ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 16 =
Remember me
