ನವದೆಹಲಿ:ಲಾಯರ್​ ವೇಷದಲ್ಲಿದ್ದ ಬಂದೂಕುಧಾರಿಗಳು ದೆಹಲಿ ನ್ಯಾಯಾಲಯದಲ್ಲಿ ನಡೆಸಿದ ಗುಂಡಿನ ದಾಳಿಯಿಂದಾಗಿ ಓರ್ವ ಗ್ಯಾಂಗ್​ಸ್ಟರ್​ ಸೇರಿದಂತೆ ಮೂವರು ಹತರಾಗಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ.
ಗ್ಯಾಂಗ್​ಸ್ಟರ್​ ಜೀತೇಂದರ್​ ಗೊಗಿಯನ್ನು ಎದುರಾಳಿ ಗುಂಪಿನವರು ಉತ್ತರ ದೆಹಲಿಯ ರೋಹಿಣಿ ಏರಿಯಾದಲ್ಲಿರುವ ನ್ಯಾಯಾಲಯ ಸಂಕೀರ್ಣದಲ್ಲಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಆರೋಪಿಗಳು ಲಾಯರ್​ ವೇಷ ಧರಿಸಿ ಕೋರ್ಟ್​ ಆವರಣಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಎದುರಾಳಿ ಗುಂಪಿನ ಇಬ್ಬರು ಸದಸ್ಯರು ಕೂಡ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಜೀತೇಂದರ್​ ಗೊಗಿ ಓರ್ವ ನಟೋರಿಯಸ್​ ಗ್ಯಾಂಗ್​ಸ್ಟರ್​. ಅನೇಕ ಅಪರಾಧ ಪ್ರಕರಣಗಳು ಆತನ ಮೇಲಿವೆ. ತಿಹಾರ್​ ಜೈಲಿನಲ್ಲಿದ್ದ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ವೇಳೆ ಎದುರಾಳಿ “ಟಿಲ್ಲು ಗ್ಯಾಂಗ್” ಸದಸ್ಯರು ಲಾಯರ್​ ವೇಷದಲ್ಲಿ ಬಂದು ಜೀತೇಂದರ್​ ಗೊಗಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಇದೇ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿ ದಾಳಿ ನಡೆಸಿದ್ದು, ಟಿಲ್ಲು ಗ್ಯಾಂಗ್​ನ ಇಬ್ಬರು ಸದಸ್ಯರು ಮೃತರಾಗಿದ್ದಾರೆಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್​ ಆಸ್ತಾನಾ ಮಾಹಿತಿ ನೀಡಿದ್ದಾರೆ. ಪೊಲೀಸರು ಬಹುಬೇಗನೇ ಪ್ರತಿಕ್ರಿಯಿಸಿ ಇಬ್ಬರನ್ನು ಹೊಡೆದುರುಳಿಸಿದರು. ಒಟ್ಟು ಮೂವರು ಸಾವಿಗೀಡಾಗಿದ್ದಾರೆಂದು ಪೊಲೀಸ್​ ಆಯುಕ್ತರು ಹೇಳಿದ್ದಾರೆ.
ಕೋರ್ಟ್​ ಆವರಣದಲ್ಲಿಯೇ ಗುಂಡಿನ ದಾಳಿ ನಡೆದಿದ್ದು, ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇನ್ನು ಜೀತೇಂದ್ರ ಗೊಗಿ ಗ್ಯಾಂಗ್​ ಮತ್ತು ಟಿಲ್ಲು ಗ್ಯಾಂಗ್​ ನಡುವೆ ಅನೇಕ ವರ್ಷಕ್ಕಿಂತ ಹೆಚ್ಚಿನ ಕಾಲದಿಂದಲೂ ಸಂಘರ್ಷ ನಡೆದುಕೊಂಡು ಬಂದಿದ್ದು, ಇದುವರೆಗೂ ಎರಡು ಗ್ಯಾಂಗ್​ನಿಂದ 25ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ.
ಜೀತೇಂದರ್​ ಗೊಗಿಯನ್ನು ಕಳೆದ ವರ್ಷ ಮಾರ್ಚ್​ ತಿಂಗಳಲ್ಲಿ ಬಂಧಿಸಲಾಗಿತ್ತು. ದೆಹಲಿ ಪೊಲೀಸ್​ ಪಾಲಿಗೆ ದೊಡ್ಡ ಮಿಕಾ ಎಂದು ಭಾವಿಸಲಾಗಿತ್ತು. ಆತನನ್ನು ಇಂದು ಕೋರ್ಟ್​ಗೆ ಹಾಜರುಪಡಿಸುವುದನ್ನೇ ಕಾದು ಕುಳಿತಿದ್ದ ಎದುರಾಳಿ ಗ್ಯಾಂಗ್​ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದೆ.(ಏಜೆನ್ಸೀಸ್​)
PHOTOS| ಹಗಲು-ರಾತ್ರಿ ಪ್ರಯಾಣ, 18 ಪಾರಂಪರಿಕ ತಾಣ, 33 ಸಾವಿರ ಕಿ.ಮೀ: ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ!
ದೇವೇಗೌಡರ ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ: ನಿಖಿಲ್​-ರೇವತಿ ದಂಪತಿಗೆ ಗಂಡು ಮಗು ಜನನ
ದೇವೇಗೌಡರ ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ: ನಿಖಿಲ್​-ರೇವತಿ ದಂಪತಿಗೆ ಗಂಡು ಮಗು ಜನನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
