ಕೊಯಿಕ್ಕೋಡ್:ಕಾಸರಗೋಡಿನ ನಟಿ ಮತ್ತು ರೂಪದರ್ಶಿ ಶಹನಾ (20) ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ. ಸಹನಾ ಮೃತದೇಹವು ಸಂಶಯಾಸ್ಪದ ರೀತಿಯಲ್ಲಿ ಕೇರಳದ ಕೊಯಿಕ್ಕೋಡ್​ನ ಬಾಡಿಗೆ ಮನೆಯಲ್ಲಿ ಮೇ. 12 ರಂದು ಪತ್ತೆಯಾಗಿದ್ದು, ಕೇರಳ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸುವ ವೇಳೆ ಡ್ರಗ್ಸ್​ ಸಿಕ್ಕಿರುವುದಾಗಿ ತಿಳಿದುಬಂದಿದೆ.
ಗಾಂಜಾ, ಎಂಡಿಎಂಎ ಮತ್ತು ಎಲ್​ಎಸ್​ಡಿ ಸ್ಟ್ಯಾಂಪ್​ ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಶಹನಾ ದೇಹವನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಿ ಆಕೆಯ ದೇಹದಲ್ಲಿ ಡ್ರಗ್ಸ್ ಇರುವುದನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಶಹನಾ ಕಾಸರಗೋಡಿನ ಛೆರುವಥೂರು ಮೂಲದ ನಿವಾಸಿ. ಮೇ. 12ರ ರಾತ್ರಿ ಕೊಯಿಕ್ಕೋಡಿನ ಬಾಡಿಗೆ ಮನೆಯಲ್ಲಿ ಕಿಟಕಿಯ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸಾವಿನ ಬೆನ್ನಲ್ಲೇ ಆಕೆಯ ಗಂಡ ಸಾಜದ್​ನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶಹನಾ ತಾಯಿ ಉಮೈಬಾ, ಸಾಜದ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಗಂಡನೇ ಶಹನಾಳನ್ನು ಕೊಲೆ ಮಾಡಿದ್ದಾರೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತವಳಲ್ಲ. ಸಾಜದ್​ ಮತ್ತು ಆತನ ಸಂಬಂಧಿಕರು ಮದುವೆಯಾದಾಗಿನಿಂದಲೂ ಕಿರುಕುಳ ನೀಡುತ್ತಿದ್ದಾರೆ. ಮೇ.13ರಂದು ಆಕೆಯ ಹುಟ್ಟುಹಬ್ಬ ಇತ್ತು. ನಮ್ಮನೆಲ್ಲ ಆಹ್ವಾನಿಸಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಉಮೈಬಾ ಹೇಳಿದ್ದಾರೆ.
ಇನ್ನು ಶಹನಾ ಸಾವು ಅಸಹಜವಾಗಿರುವುದರಿಂದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಆರ್‌ಡಿಒ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆರೋಪಿ ಸಜಾದ್ ಕೊಯಿಕ್ಕೋಡ್‌ನ ಚೆರುಕುಲಂ ಮೂಲದವರು. ಕಾಸರಗೋಡಿನ ಚೆರುವತ್ತೂರಿನವರಾದ ಶಹನಾ ಕೆಲವು ಆಭರಣಗಳ ಜಾಹೀರಾತುಗಳಲ್ಲಿ ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲವು ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಈ ಜೋಡಿ ಮದುವೆಯಾಗಿತ್ತು.(ಏಜೆನ್ಸೀಸ್​)
ಬಿಡುಗಡೆಗೆ ಮುನ್ನವೇ ಸೇಫ್; ಮೇ 20ಕ್ಕೆ ಸಕುಟುಂಬ ಸಮೇತ ಚಿತ್ರ ನೋಡಿ

ಪಿಂಕ್ ನೋಟ್ ಹಿಂದೆ ಭಾವನಾ; ಮೊದಲ ಬಾರಿಗೆ ದ್ವಿಪಾತ್ರಗಳಲ್ಲಿ ಅಭಿನಯ

ಕಥೆ ಸಹ ತೀಕ್ಷ್ಣವಾಗಿರಲಿ…; ಹೊಸ ನಿರ್ದೇಶಕರಿಗೆ ಉಪೇಂದ್ರ ಸಲಹೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − two =
Remember me
