ತಿರುವನಂತಪುರಂ:ಕೇರಳ ರಾಜಧಾನಿ ತಿರುವನಂತಪುರದ ಹೋಟೆಲ್​ ಒಂದರಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನೇಕ ಅನುಮಾನ ಹುಟ್ಟಿಕೊಂಡಿವೆ. ಆಕೆಯೊಂದಿಗೆ ಹೋಟೆಲ್​ಗೆ ಬಂದ ಯುವಕ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮೃತ ಮಹಿಳೆಯನ್ನು ಗಾಯತ್ರಿ ಎಂದು ಗುರುತಿಸಲಾಗಿದೆ. ಈಕೆ ಕಟ್ಟಕಾಡದ ನಿವಾಸಿ. ಕೊಲ್ಲಂ ನಿವಾಸಿ ಪ್ರವೀಣ್​ ಎಂಬಾತನ ಜತೆಯಲ್ಲಿ ನಿನ್ನೆ (ಮಾ.5) ಮಧ್ಯಾಹ್ನ ಹೋಟೆಲ್​ಗೆ ಬಂದಿದ್ದಳು. ಪ್ರವೀಣ್​ ಕೊಠಡಿಯನ್ನು ಲಾಕ್​ ಮಾಡಿ ಸಂಜೆ ಹೊರ ಹೋದವನು ಮತ್ತೆ ಬರಲಿಲ್ಲ. ಕೊಠಡಿಯಲ್ಲಿ ಮಹಿಳೆಯೊಬ್ಬಳು ಇದ್ದಾಳೆ ಎಂಬ ಮಾಹಿತಿ ಹೋಟೆಲ್​ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ಮೇರೆಗೆ ಹೋಟೆಲ್​ಗೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ನೋಡಿದಾಗ ಗಾಯತ್ರಿ ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ. ಆಕೆಯ ಬಾಯಲ್ಲಿ ನೊರೆ ಇತ್ತು. ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾಳೋ ಅಥವಾ ಕೊಲೆಯೋ ಎಂಬುದು ಸ್ಪಷ್ಟವಾಗಬೇಕಿದೆ.
ಅಂದಹಾಗೆ ಗಾಯತ್ರಿ ಮತ್ತು ಪ್ರವೀಣ್​ ಜ್ಯುವೆಲ್ಲರಿ ಶಾಪ್​ ಒಂದರ ಉದ್ಯೋಗಿಗಳು. ಸುಮಾರು 8 ತಿಂಗಳಿನಿಂದ ಕೆಲಸ ಮಾಡುತ್ತಿದ್ದಳು. ಆದರೆ, ಪ್ರವೀಣ್​ನನ್ನು ಬೇರೊಂದು ಶೋರೂಮ್​ಗೆ ವರ್ಗಾಯಿಸಲಾಗಿತ್ತು. ಇಬ್ಬರು ಮದುವೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಅದಕ್ಕೆ ಪುಷ್ಟಿ ನೀಡುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ಶಿಕ್ಷಕರ ವಿರುದ್ಧ ಠಾಣೆಯ ಮೆಟ್ಟಿಲೇರಿದ 3ನೇ ಕ್ಲಾಸ್​ ವಿದ್ಯಾರ್ಥಿ: ಬಾಲಕನ ಮಾತು ಕೇಳಿ ಪೊಲೀಸರೇ ಶಾಕ್​!

ಈ ಎರಡು ಪೀಸ್​ ಬಟ್ಟೆಗೆ ಇಷ್ಟೊಂದು ಹಣ ಕೊಡ್ಬೇಕಿತ್ತಾ? ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿರುವ ಕರೀನಾ!

ನಡೆದಾಡುವ ದೇವರೆಂದೇ ಹೆಸರಾಗಿದ್ದ ಚನ್ನಪಟ್ಟಣದ ಗೌಡಗೆರೆ ಗ್ರಾಮದ ಪವಾಡ ಬಸವಪ್ಪ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − eight =
Remember me
