ಮುಂಬೈ:ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಿ, ಆ್ಯಪ್​ಗಳಲ್ಲಿ ಅಪ್​​ಲೋಡ್​ ಮಾಡುತ್ತಿದ್ದ ಆರೋಪದ ಮೇಲೆ ಉದ್ಯಮಿ ಮತ್ತು ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಬಂಧನವಾಗಿ ಹಲವು ದಿನಗಳೇ ಕಳೆದಿವೆ. ಆದರೂ, ಪ್ರಕರಣ ಕುರಿತು ಒಂದೊಂದೇ ಸ್ಫೋಟಕ ವಿಚಾರಗಳು ಹೊರ ಜಗತ್ತಿಗೆ ತೆರೆದುಕೊಳ್ಳುತ್ತಿರುವುದು ನಿಂತಿಲ್ಲ. ಇದೀಗ ಮತ್ತೊಂದು ಮಾಹಿತಿ ಮುಂಬೈ ಪೊಲೀಸ್​ ಅಂಗಳದಿಂದ ಹೊರಬಿದ್ದಿದೆ.
ಏನಪ್ಪಾ ಆ ಸುದ್ದಿ ಅಂತಾ ನೋಡುವುದಾದರೆ, ಅದಕ್ಕೂ ಮುನ್ನ ಒಂದು ಮಾತನ್ನು ಇಲ್ಲಿ ನೆನೆಯಲೇಬೇಕು. ರಾಜ್​ ಕುಂದ್ರಾ ಬೆನ್ನಲ್ಲೇ ಮಾಡೆಲ್​ ಕಂ ನಟಿ ಗೆಹಾನಾ ವಸಿಷ್ಠ ಒಂದು ಹೇಳಿಕೆ ನೀಡಿದ್ದರು. ಕುಂದ್ರಾ ತೆಗೆಯುತ್ತಿದ್ದದ್ದು, ಪೋರ್ನ್​ ವಿಡಿಯೋ ಅಲ್ಲ, ಎರೋಟಿಕಾ ಎಂದು ಹೇಳುವ ಮೂಲಕ ಭಾರಿ ಸುದ್ದಿಯಾಗಿದ್ದರು. ಅಲ್ಲಿಯವರೆಗೆ ಗೆಹಾನಾ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಯಾವಾಗ ಬೋಲ್ಡ್​ ಹೇಳಿಕೆ ನೀಡಿದಳೋ ಪ್ರಕರಣದಲ್ಲಿ ಆಕೆಯ ಹೆಸರು ಸಹ ಹೆಚ್ಚಾಗಿ ಕೇಳಿಬರುತ್ತಿದೆ.
ಇದೀಗ ಮುಂಬೈ ಪೊಲೀಸರ ಅಂಗಳದಿಂದ ಕೇಳಿಬಂದಿರುವ ಸ್ಫೋಟಕ ಮಾಹಿತಿ ಕೂಡ ಇದೇ ಗೆಹಾನಾಳ ಕುರಿತು. ಏನದು ಅಂದ್ರೆ, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಗೆಹಾನಾ ಇದೇ ವರ್ಷದ ಫೆಬ್ರವರಿಯಲ್ಲಿ ಮುಂಬೈನಲ್ಲಿ ಬಂಧನವಾಗಿದ್ದಳು. ಈ ವೇಳೆ ಬಂಧನದಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ಭಾರೀ ಆಫರ್​ ಒಂದನ್ನು ನೀಡಿದ್ದರಂತೆ. ಆ ಕುರಿತ ವಾಟ್ಸ್​ಆ್ಯಪ್​ ಚಾಟ್​ ಒಂದು ಇತ್ತೀಚೆಗಷ್ಟೇ ವೈರಲ್​ ಆಗಿದೆ.
ಗೆಹಾನಾ, ತನ್ನನ್ನು ಬಂಧಿಸದಂತೆ ಪೊಲೀಸರಿಗೆ ಬರೋಬ್ಬರಿ 15 ಲಕ್ಷ ರೂ. ಲಂಚದ ಆಮಿಷ ಒಡ್ಡಿದ್ದಳಂತೆ. ಆದರೆ, ಆಕೆ ಹೇಳುವ ಪ್ರಕಾರ ಪೊಲೀಸರೇ ನನ್ನ ಬಳಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾಳೆ. ಪ್ರಕರಣದಲ್ಲಿ ಸದ್ಯ ಬಂಧನವಾಗಿರುವ ಯಶ್​ ಠಾಕೂರ್​ ಅಲಿಯಾಸ್​ ಅರವಿಂದ್​ ಕುಮಾರ್​ ಶ್ರೀವಾತ್ಸವ ಮತ್ತು ತನ್ವೀರ್​ ಹಶ್ಮಿ ಜತೆ ಪೊಲೀಸರ ಕುರಿತು ಗೆಹಾನಾ ಚಾಟ್​ ಮಾಡಿರುವ ಸ್ಕ್ರೀನ್​ ಶಾಟ್​ ವೈರಲ್​ ಆಗಿದೆ. ಪ್ರಕರಣದಿಂದ ಹೊರ ಬರಲು ಲಂಚ ನೀಡಲು ಅವರು ಕೂಡ ಸಿದ್ಧರಾಗಿದ್ದರಂತೆ. ಆದರೆ, ಪ್ರಕರಣದಲ್ಲಿ ಸದ್ಯ ಬಂಧನವಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.(ಏಜೆನ್ಸೀಸ್​)
ಬಾವ ರಾಜ್​ ಕುಂದ್ರಾ ಬಂಧನ: ಕುತೂಹಲ ಸೃಷ್ಟಿಸಿದ ನಟಿ ಶಮಿತಾ ಶೆಟ್ಟಿಯ ಇನ್​ಸ್ಟಾಗ್ರಾಂ ಪೋಸ್ಟ್​!

ಯಾರಾಗಲಿದ್ದಾರೆ ಬಿಗ್​ಬಾಸ್​ ಸೀಸನ್​ 8ರ ವಿನ್ನರ್​? ಸಣ್ಣ ಸುಳಿವು ಕೊಟ್ರಾ ಕಾರ್ಯಕ್ರಮದ ನಿರ್ದೇಶಕರು?

ಸಮಂತಾ-ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿತಾ? ಜಾಲತಾಣದಲ್ಲಿ ದಿಢೀರ್​ ಶಾಕ್​ ಕೊಟ್ಟ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 8 =
Remember me
