ಹೈದರಾಬಾದ್​:ಇಂದು ಸಾಮಾಜಿಕ ಜಾಲತಾಣದಲ್ಲಿ ಯುವಕ-ಯುವತಿಯರ ರೀಲ್ಸ್​ ಮತ್ತು ಶಾರ್ಟ್​ ವಿಡಿಯೋಗಳೇ ತುಂಬಿ ತುಳುಕುತ್ತಿವೆ. ಯಾವುದೇ ಸಿನಿಮಾದ ಸಾಂಗ್​ ಅಥವಾ ಡೈಲಾಗ್​ ಇಷ್ಟವಾದರೇ ಸಾಕು ಅದಕ್ಕೆ ರೀಲ್ಸ್​ ಮಾಡಿ ಹರಿಬಿಡುವುದು ಯುವ ಜನಾಂಗದ ಹೊಸ ಅಭ್ಯಾಸವಾಗಿದೆ. ಹೀಗಾಗಿ ಜಾಲತಾಣದಲ್ಲಿ ವಿಡಿಯೋಗಳ ಮಹಾಪೂರವೇ ಪ್ರತಿನಿತ್ಯ ಹರಿದುಬರುತ್ತಿರುತ್ತದೆ. ಆದರೆ, ವಿಡಿಯೋ ಮಾಡುವಾಗ ಯಾವ ಸ್ಥಳಗಳಲ್ಲಿ ಮಾಡುತ್ತೇವೆ ಎಂಬುದು ಮುಖ್ಯ. ಇಲ್ಲವಾದಲ್ಲಿ ಆಡಳಿತ ವಲಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
ಬೆಂಗಳೂರಿನ ಸೋಶಿಯಲ್​ ಮೀಡಿಯಾ ಕಂಟೆಂಟ್​ ಕ್ರಿಯೇಟರ್​ ಒಬ್ಬ ಬೈಕ್​ ಬಳಸಿಕೊಂಡು, ಸಂಚಾರ ನಿಯಮ ಉಲ್ಲಂಘಿಸಿ, ಸಾಕಷ್ಟು ವಿಡಿಯೋಗಳನ್ನು ಮಾಡಿ ಜಾಲತಾಣದಲ್ಲಿ ಹರಿಬಿಡುವ ಮೂಲಕ ಟ್ರಾಫಿಕ್ ಪೊಲೀಸರಿಗೆ ಕಣ್ಣಿಗೆ ಬಿದ್ದು​ ದಂಡ ಕಟ್ಟಿದ್ದನ್ನು ನೀವು ಗಮನಿಸಿರಬಹುದು. ಇದೀಗ ಹೈದರಾಬಾದ್​ನಲ್ಲಿ ಯುವತಿಯೊಬ್ಬಳು ಮೆಟ್ರೋ ನಿಲ್ದಾಣದಲ್ಲಿ ಮತ್ತು ರೈಲಿನ ಒಳಗೆ ರೀಲ್ಸ್​ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಅಂದಹಾಗೆ ಯುವತಿ ಕನ್ನಡದ ವಿಕ್ರಾಂತ್​ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೂ ಹೆಜ್ಜೆ ಹಾಕಿದ್ದಾಳೆ.
ಹೈದರಾಬಾದ್​ನ ಕಂಟೆಂಟ್​ ಕ್ರಿಯೇಟರ್​ ಒಬ್ಬಳು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮೆಟ್ರೋ ರೈಲಿನ ಒಳಗೆ ಮತ್ತು ನಿಲ್ದಾಣದಲ್ಲಿ ಡಾನ್ಸ್​ ಮಾಡಿರುವ ವಿಡಿಯೋವನ್ನು ಪೋಸ್ಟ್​ ಮಾಡಿದ್ದಳು. ಆ ವಿಡಿಯೋ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯಿತು. ಸಾವಿರಕ್ಕೂ ಹೆಚ್ಚು ವೀಕ್ಷಣೆ ಮತ್ತು ಲೈಕ್ಸ್​ಗಳನ್ನು ವಿಡಿಯೋ ಪಡೆದುಕೊಂಡಿದೆ. ಅನೇಕ ವಿಡಿಯೋವನ್ನು ಬೆಂಬಲಿಸಿದರೆ, ಇನ್ನು ಕೆಲವರು ಸಾರ್ವಜನಿಕ ಪ್ರದೇಶಗಳಲ್ಲಿ ಏನಿದು ಅತಿರೇಕದ ವರ್ತನೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಸಾರ್ವಜನಿಕ ಪ್ರದೇಶದಲ್ಲಿ ಇದೆಂಥಾ ವರ್ತನೆ? ಇಂಥವುಗಳಿಗೆ ಮೆಟ್ರೋ ರೈಲಿನಲ್ಲಿ ಅನುಮತಿ ಕೊಡುತ್ತೀರಾ? ಹೈದರಾಬಾದ್​ ಮೆಟ್ರೋ ರೈಲು ನಿಲ್ದಾಣವನ್ನು ಪಿಕ್​ನಿಕ್​ ಮತ್ತು ಡಾನ್ಸ್​ ವೇದಿಕೆ ಎಂದು ಬದಲಾಯಿಸಿದ್ದೀರಾ? ಎಂದು ಪ್ರಶ್ನೆಗಳ ಸರಮಾಲೆಯೊಂದಿಗೆ ಹೈದರಾಬಾದ್​ ಮೆಟ್ರೋ ರೈಲು ನಿಗಮ (ಎಚ್​ಎಂಆರ್​ಎಲ್​) ವನ್ನು ಟ್ವಿಟರ್​ನಲ್ಲಿ ಟ್ಯಾಗ್​ ಮಾಡಲಾಗಿತ್ತು.
ಇದೀಗ ಈ ವಿಚಾರ ಎಚ್​ಎಂಆರ್​ಎಲ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಯುವತಿಯ ವಿರುದ್ಧ ಗರಂ ಆಗಿದ್ದು, ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದೆ. ರೈಲಿನ ಒಳಗೆ ರೀಲ್ಸ್​ ಮಾಡಿದ ಯುವತಿಗೆ ಇದೀಗ ಸಂಕಷ್ಟ ಎದುರಾಗಿದೆ.(ಏಜೆನ್ಸೀಸ್​)
https://t.co/fSZ6iATkWG
— Sai Vikas  (@vikkyszone)July 20, 2022

ಕೆರೂರು ಗುಂಪು ಘರ್ಷಣೆ ಕೇಸ್​: ಗಾಯಾಳು ಮುಂದೆ ಬಸವಣ್ಣನವರ ವಚನ ಹೇಳಿದ ADGP ಅಲೋಕ್​ ಕುಮಾರ್​

ಮಲಯಾಳಂ ಸ್ಟಾರ್​ ನಟನ ಜತೆ ನಿತ್ಯಾ ಮೆನನ್​ ಮದುವೆ? ಮಲಯಾಳಂ ಬ್ಯೂಟಿ ಕೊಟ್ಟ ಸ್ಪಷ್ಟನೆ ಹೀಗಿದೆ…

13,800 ಸರ್ಕಾರಿ ಶಾಲೆ ಮುಚ್ಚಲು ನಡೆದಿದೆ ಹುನ್ನಾರ: ಕನ್ನಡ ಪರ, ವಿದ್ಯಾರ್ಥಿ ಸಂಘಟನೆಗಳ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
