ಹೈದರಾಬಾದ್​:ಬಾಯ್​ಫ್ರೆಂಡ್​ ಮದುವೆ ಆಗಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಖಮ್ಮಮ್​ ಜಿಲ್ಲೆಯ ಸತ್ತುಪಲ್ಲಿಯ ದ್ವಾರಕಪುರಿ ಕಾಲನಿಯಲ್ಲಿ ನಡೆದಿದೆ.
ಪ್ರತ್ಯುಷಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಯುವತಿ ಡೇವಿಡ್​ರಾಜು ಮತ್ತು ರಾಣಿ ಎಂಬುವರ ಮಗಳು. ಈಕೆ ಸಿರಿಸಿಲ್ಲಾದಲ್ಲಿ ಡಿಪ್ಲಮೋ ಓದುತ್ತಿದ್ದಳು. ಕಳೆದ ವರ್ಷ ಕರೊನಾ ಸಮಸ್ಯೆ ಉದ್ಭವ ಆದಾಗಿನಿಂದ ಸರಿಯಾಗಿ ತರಗತಿಗಳು ನಡೆಯದ ಕಾರಣ ಹೈದರಾಬಾದ್​ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.
ಈ ಮಧ್ಯೆ ಪ್ರತ್ಯುಷಾ ಸತ್ತುಪಲ್ಲಿ ಮಂಡಲದ ತಂಬೂರ್​ ಗ್ರಾಮದಲ್ಲಿರುವ ಅಜ್ಜಿ ಮನೆಗೆ ಒಮ್ಮೆ ಭೇಟಿ ನೀಡಿದ್ದಳು. ಈ ವೇಳೆ ಅದೇ ಊರಿನ ಜಗದೀಶ್​ ಎಂಬಾತನ ಪರಿಚಯ ಆಗಿ, ಇಬ್ಬರ ನಡುವೆ ಪ್ರೀತಿ ಚಿಗುರಿ, ನಂಬರ್​ ವಿನಿಮಯ ಸಹ ಆಗಿದೆ.
ಇದಾದ ಬಳಿಕ ಇಬ್ಬರು ಫೋನ್​ನಲ್ಲಿ ಮಾತನಾಡುವುದು ಸಾಮಾನ್ಯವಾಗಿತ್ತು. ಪ್ರೇಮ ಶುರುವಾದ ಎಂಟು ತಿಂಗಳ ನಂತರ ಪ್ರತ್ಯುಷಾ, ಜಗದೀಶ್​ ಜತೆ ಮದುವೆ ಪ್ರಸ್ತಾಪ ಮಾಡಿದ್ದಾಳೆ. ಆದರೆ, ಆತ ಮದುವೆ ಆಗಲು ನಿರಾಕರಿಸಿದ್ದಾನೆ. ಇದರಿಂದ ಮನನೊಂದಿದ್ದ ಪ್ರತ್ಯುಷಾ ಏಪ್ರಿಲ್​ 30ರಂದು ಹೈದರಾಬಾದ್​ನಲ್ಲಿ ಸ್ಯಾನಿಟೈಜರ್​ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಇದನ್ನು ನೋಡಿದ ಆಕೆಯ ಫ್ರೆಂಡ್ಸ್​ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಚಿಕಿತ್ಸೆ ಫಲಿಸದೇ ಮೇ 2ರಂದು ಪ್ರತ್ಯುಷಾ ಕೊನೆಯುಸಿರೆಳೆದಿದ್ದಾಳೆ. ಇದೀಗ ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಮಗಳ ಸಾವಿಗೆ ಜಗದೀಶ್​ ಕಾರಣ ಎಂದು ಆರೋಪಿಸಿ ಪ್ರತ್ಯುಷಾ ಪಾಲಕರು ಬಷೀರ್​ಬಾಘ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.
ಇತ್ತ ದೂರು ದಾಖಲಾಗುತ್ತಿದ್ದಂತೆ ಜಗದೀಶ್​ ಪರಾರಿಯಾಗಿದ್ದಾನೆ. ಮಂಗಳವಾರ ಪ್ರತ್ಯುಷಾ ಮೃತದೇಹವನ್ನು ಜಗದೀಶ್​ ಮನೆ ಮುಂದೆ ಇಟ್ಟು ಪ್ರತಿಭಟನೆ ಸಹ ನಡೆಸಿದ್ದಾರೆ. ಇದೀಗ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಐ ಲವ್​ ಯು ಎಂದವನಿಗೆ ಶಾಸಕಿ ರೋಜಾ ಮಗಳು ಕೊಟ್ಟ ಉತ್ತರ ವೈರಲ್​..!

ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು

ಗಂಡನಿದ್ದರೂ ಪರಪುರುಷನೊಂದಿಗೆ 2 ಮಕ್ಕಳ ತಾಯಿ ಕಾಮದಾಟ! ತಡರಾತ್ರಿ ನಡೆದೇ ಹೋಯ್ತು ಭೀಕರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
