ವಿಶಾಖಪಟ್ಟಣಂ:ಓರ್ವ ಯುವಕನಿಗಾಗಿ ಯುವತಿಯರಿಬ್ಬರು ನಡು ರಸ್ತೆಯಲ್ಲೇ ಪರಸ್ಪರ ಕೂದಲು ಹಿಡಿದು ಎಳೆದಾಡಿ, ಕಿತ್ತಾಡಿಕೊಂಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಈ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ ಕಾಲೇಜು ವಿದ್ಯಾರ್ಥಿಗಳು ವಿಶಾಖಪಟ್ಟಣದ ಆರ್​ಟಿಸಿ ಬಸ್​ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಯುವತಿಯರಿಬ್ಬರು ಇದ್ದಕ್ಕಿದ್ದಂತೆ ಒಬ್ಬರನೊಬ್ಬರು ನಿಂದಿಸಲು ಶುರು ಮಾಡಿದ್ದಾರೆ. ನೋಡ ನೋಡುತ್ತಿದ್ದಂತೆ ಇಬ್ಬರ ಕೂಗಾಟ ಜೋರಾಗಿದೆ. ಈ ವೇಳೆ ಅಲ್ಲಿದ್ದವರೆಲ್ಲ ಏನಾಗುತ್ತಿದೆ ಎಂದು ಇತ್ತ ತಿರುಗಿ ನೋಡಿದಾಗ ಇಬ್ಬರು ಯುವತಿಯರು ಪರಸ್ಪರ ಜುಟ್ಟು ಹಿಡಿದು ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರ ಪಕ್ಕದಲ್ಲಿ ಓರ್ವ ಯುವಕನು ಕೂಡ ನಿಂತಿದ್ದನು.
ಯಾವ ವಿಚಾರಕ್ಕೆ ಇಬ್ಬರು ಜಗಳು ಆಡುತ್ತಿದ್ದಾರೆ ಎಂಬುದನ್ನು ತಿಳಿದ ಬಳಿಕ ಅಲ್ಲಿದ್ದವರೆಲ್ಲ ಒಂದು ಕ್ಷಣ ದಂಗಾದರು. ಒಂದೇ ಯುವಕನ್ನು ಇಬ್ಬರು ಯುವತಿಯರು ಪ್ರೀತಿಸುತ್ತಿದ್ದರು. ಅದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ. ಈ ವೇಳೆ ಯುವಕನು ಕೂಡ ಅಲ್ಲಿಯೇ ಇದ್ದ. ಪೊಲೀಸರಿಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಪೊಲೀಸರು ಇಬ್ಬರು ಯುವತಿಯರು ಮತ್ತು ಯುವಕನನ್ನು ಕರೆದುಕೊಂಡು ಹೋಗಿ ಸಮಾಲೋಚನೆ ಕೊಟ್ಟು ಕಳುಹಿಸಿದ್ದಾರೆ.
ಇನ್ನು ಸ್ಥಳೀಯರು ಜಗಳ ಆಡುತ್ತಿದ್ದ ಕ್ಷಣವನ್ನು ಮೊಬೈಲ್​ನಲ್ಲಿ ಸೆರೆಹಿಡಿದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.(ಏಜೆನ್ಸೀಸ್​)
ಕಪಿಲ್​​ ದೇವ್​ ಮತ್ತು 1983 ವಿಶ್ವಕಪ್​ ವಿಜೇತ ತಂಡಕ್ಕೆ 83 ಸಿನಿಮಾ ತಂಡ ಕೊಟ್ಟ ಗೌರವಧನ ಎಷ್ಟು?

ಅಪ್ಪನಿಂದ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಬಾಲಕಿ: ತಪ್ಪಿಸಿಕೊಳ್ಳುವ ಭರದಲ್ಲಿ ಹಾರಿ ಸಾವು-ಬದುಕಿನ ನಡುವೆ ಹೋರಾಟ!

‘ತೆಳ್ಳಗಿನ ನನ್ನ ದೇಹ ನೋಡಿ ನಕ್ಕವರು ಅಷ್ಟಿಷ್ಟಲ್ಲ, ಬಾಡಿ ಶೇಮಿಂಗ್‌ನಿಂದ ಖಿನ್ನತೆಗೂ ಜಾರಿದ್ದೆ’ ಎಂದ ನಟಿ ಆಥಿಯಾ

ಕಾವಿಧಾರಿಗಳಿಬ್ಬರ ಬೇಡಿಕೆ ಕೇಳಿ ಗೃಹ ಸಚಿವರೇ ತಬ್ಬಿಬ್ಬು! ಒಪ್ಪಲೂ ಆಗದೆ, ನಿರಾಕರಿಸಲೂ ಆಗದೆ ಪರದಾಡಿದ್ರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − five =
Remember me
