ನವದೆಹಲಿ:ಕೆಲ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಟೆಕ್​ ದೈತ್ಯ ಗೂಗಲ್​​ ಶಾಕಿಂಗ್​ ನ್ಯೂಸ್​ ಒಂದನ್ನು ನೀಡಿದೆ. ಇನ್ಮುಂದೆ 2.3.7 ಅಥವಾ ತುಂಬಾ ಕಡಿಮೆ ವರ್ಷನ್​ನ ಆ್ಯಂಡ್ರಾಯ್ಡ್​ ಮೊಬೈಲ್​ಗಳಲ್ಲಿ ಕೆಲವೊಂದು ಖಾತೆಗಳಿಗೆ ಸೈನ್​ ಇನ್​ ಆಗಲು ಗೂಗಲ್​ ಬೆಂಬಲಿಸುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದ್ದು, ಕೆಲ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಇದು ದುಬಾರಿ ಆಗಲಿದೆ.
ಈ ನಿಯಮವು ಸೆಪ್ಟೆಂಬರ್​ 27 ರಿಂದ ಜಾರಿಗೆ ಬರಲಿದೆ. ಗೂಗಲ್​ ಬಳಕೆದಾರರಿಗೆ ಕಳುಹಿಸಿದ ಇಮೇಲ್​ನಿಂದ ಈ ವಿಚಾರ ಬಹಿರಂಗವಾಗಿದೆ. ಸೆಪ್ಟೆಂಬರ್​ ನಂತರವೂ ಗೂಗಲ್​ ಆ್ಯಪ್ಸ್​ ಬಳಸುವುದಾದರೆ, ಕನಿಷ್ಟ ಪಕ್ಷ ಆ್ಯಂಡ್ರಾಯ್ಡ್​ 3.0 ಹನಿಕೂಂಬ್​ ವರ್ಸನ್​ಗೆ ಅಪ್​ಡೇಟ್​ ಮಾಡಿಕೊಳ್ಳುವಂತೆ ಬಳಕೆದಾರರಿಗೆ ಇಮೇಲ್​ ಸೂಚಿಸಿದೆ.
ಗೂಗಲ್​ ಈ ನಿಯಮದಿಂದ ಫೋನ್​ ಬ್ರೌಸರ್​ ಮೂಲಕ ಸೈನ್​ ಇನ್​ ಆಗುವ ಜಿಮೇಲ್​, ಗೂಗಲ್​ ಸರ್ಚ್​, ಗೂಗಲ್​ ಡ್ರೈವ್​, ಯೂಟ್ಯೂಬ್​ ಮತ್ತು ಇತರ ಗೂಗಲ್​ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ಆಂಡ್ರಾಯ್ಡ್‌ನ ಅತ್ಯಂತ ಹಳೆಯ ವರ್ಷನ್ ಬಳಕೆದಾರರು ಬಹಳ ಕಡಿಮೆ ಇರಬಹುದು ಮತ್ತು ಗೂಗಲ್ ನಿಸ್ಸಂಶಯವಾಗಿ ಬಳಕೆದಾರರ ಡೇಟಾವನ್ನು ರಕ್ಷಿಸಲು ಮತ್ತು ಖಾತೆಯ ಭದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದೆ.
ಸೆಪ್ಟೆಂಬರ್​ 27ರ ಆರಂಭದಿಂದ ಆ್ಯಂಡ್ರಾಯ್ಡ್​ 2.3.7 ಮತ್ತು ಅದಕ್ಕಿಂತ ಕಡಿಮೆ ವರ್ಸನ್​ ಸ್ಮಾರ್ಟ್​ ಫೋನ್​ಗಳಲ್ಲಿ ಯಾವುದೇ ಗೂಗಲ್​ ಆ್ಯಪ್ಸ್​ಗೆ ಲಾಗಿನ್​ ಆಗಲು ಪ್ರಯತ್ನಿಸಿದರೆ, “ಯೂಸರ್​ ನೇಮ್​ ಅಥವಾ ಪಾಸ್​ವರ್ಡ್​ ಎರರ್​” ಎಂಬ ಸಂದೇಶವು ಬರಲಿದೆ. ಹಳೆಯ ಸಾಫ್ಟ್‌ವೇರ್ ಆವೃತ್ತಿಗಳನ್ನು ಬಳಸುತ್ತಿರುವ ಕೆಲವು ಬಳಕೆದಾರರಿಗೆ ಈ ಇಮೇಲ್‌ಗಳು ಎಚ್ಚರಿಕೆಯ ಚಿಹ್ನೆಯಾಗಿ ಕಾಣುತ್ತಿವೆ. ತಮ್ಮ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಲು ಅಥವಾ ಫೋನ್‌ಗಳನ್ನು ಬದಲಾಯಿಸಲು ಸೂಚನೆ ನೀಡುವಂತಿದೆ.(ಏಜೆನ್ಸೀಸ್​)
ಗೆಳೆತನ ಎಂಬ ನವಿಲುಗರಿ; ಇಂದು ಫ್ರೆಂಡ್​ಶಿಪ್ ಡೇ..
ಮೌಲ್ಯ ಪಾಲಿಸುವಂಥ ಸಮಾಜ ಮರುಸೃಷ್ಟಿ ಮಾಡಬೇಕು…; ಸೆಲೆಬ್ರಿಟಿ ಕಾರ್ನರ್​ನಲ್ಲಿ ಎನ್​.ಸಂತೋಷ್​ ಹೆಗ್ಡೆ
ಎರಡು ಹಂತ ಹಲವು ಸೂತ್ರ: ವಾರದೊಳಗೆ ಕೋರ್ ಟೀಮ್ ಮಾತ್ರ ಸಂಪುಟ ಸೇರ್ಪಡೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:1 × three =
Remember me
