ಕೋಯಿಕ್ಕೋಡ್​:ಕೇವಲ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಗಂಡನ ಮನೆಯಲ್ಲಿ ಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಭಾರೀ ಅನುಮಾನ ಹುಟ್ಟುಹಾಕಿದೆ.
ಮೃತ ಯುವತಿಯ ಹೆಸರು ಭಾಗ್ಯ (19). ಈಕೆ ಕೋಯಿಕ್ಕೋಡ್​ನ ಎಲಥೂರ್​ ನಿವಾಸಿ ಅನಂತು ಎಂಬಾತನ ಪತ್ನಿ. ಭಾಗ್ಯ ಗರ್ಭಿಣಿ ಆಗಿದ್ದಳು. ಇಬ್ಬರು ಪ್ರೀತಿಸಿ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.
ಬಹಳ ಹಿಂದಿನಿಂಗಲೂ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಭಾಗ್ಯಳನ್ನು ಅಪಹರಿಸಿದ ಆರೋಪದ ಮೇಲೆ ಪೊಕ್ಸೊ ಕಾಯ್ದೆ ಅಡಿಯಲ್ಲಿ ಅನಂತುನನ್ನು ಪೊಲೀಸರು ಬಂಧಿಸಿದ್ದರು. ಭಾಗ್ಯಳಿಗೆ 18 ವರ್ಷ ತುಂಬಿದ ಬಳಿಕ ಪ್ರಕರಣವನ್ನು ಇತ್ಯರ್ಥ ಮಾಡಿ ಇಬ್ಬರಿಗೆ ಮದುವೆ ಮಾಡಲಾಗಿತ್ತು.
ಆದರೆ, ಈಗ ಭಾಗ್ಯ ಮೃತಪಟ್ಟಿದ್ದಾಳೆ. ಆಕೆಯ ಸಾವಿನ ಸುತ್ತು ನಿಗೂಢ ಅಡಗಿದೆ ಎಂದು ಹೇಳಿ ಆಕೆಯ ತಾಯಿ ದೂರು ದಾಖಲಿಸಿದ್ದಾರೆ. ಅನಂತು ತಾಯಿ ಯಾವಾಗಲೂ ಭಾಗ್ಯಗೆ ಕಿರುಕುಳ ನೀಡುತ್ತಿದ್ದಳು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ರವಿತೇಜರ ಹೊಸ ಚಿತ್ರದಲ್ಲಿ ನರೇಶ್​-ಪವಿತ್ರಾರನ್ನು ತೆರೆ ಮೇಲೆ ನೋಡಿ ಬಿದ್ದು ಬಿದ್ದು ನಕ್ಕಿದ ಪ್ರೇಕ್ಷಕರು! ಕಾರಣ ಹೀಗಿದೆ…

ರಶ್ಮಿಕಾ ನನ್ನ ಡಾರ್ಲಿಂಗ್; ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದ ದೇವರಕೊಂಡ

ಸರ್ಕಾರಿ ಕಾರ್ನರ್​: ಸ್ವಯಂ ನಿವೃತ್ತಿಗೆ ವೇತನ ಸೌಲಭ್ಯ ಲಭ್ಯವೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 10 =
Remember me
