ಹೈದರಾಬಾದ್​:ಇತ್ತೀಚೆಗಷ್ಟೇ ತನ್ನ ಮದುವೆಯ ಮೆರವಣಿಗೆಯಲ್ಲಿ “ನೀ ಬುಲೆಟ್ಟು ಬಂಡಿ” ಎಂಬ ಟಪ್ಪಾಂಗುಚ್ಚಿ ಹಾಡಿಗೆ ಪತಿಯ ಮುಂದೆಯೇ ನವವಧು ಕುಣಿದು ಕುಪ್ಪಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ 60 ವರ್ಷದ ಅಜ್ಜಿ ತನ್ನ ಗಂಡನ ಮುಂದೆ ಅದೇ ಹಾಡಿಗೆ ಮಸ್ತ್​ ಸ್ಟೆಪ್ಸ್​ ಹಾಕುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.
ಗಂಡನನ್ನು ಒಂದು ಬೆಡ್​ ಮೇಲೆ ಕೂರಿಸಿ ಅಜ್ಜಿ ಬುಲೆಟ್​ ಬಂಡಿ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು 60ರ ವಯಸ್ಸಿನಲ್ಲಿ ಅಜ್ಜಿಯ ಎನರ್ಜಿ ನೋಡಿ ಫಿದಾ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ವಿಡಿಯೋದಲ್ಲಿ ಏನಿದೆ?:ಹಸಿರು ರೇಷ್ಮೆ ಸೀರೆ ಹುಟ್ಟುಕೊಂಡಿರುವ ಅಜ್ಜಿ ತನ್ನ ಗಂಡನನ್ನು ಮಂಚದ ಮೇಲೆ ಕೂರಿಸಿ ಅವರ ಮುಂದೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಪತ್ನಿಯ ಮನರಂಜನೆಗೆ ಪತಿ ತಲೆದೂಗುತ್ತಿರುವುದನ್ನು ಕಾರಣಬಹುದಾಗಿದೆ.
Maamma Garu, adbhutampic.twitter.com/CGHbA9j3l6
— Damayanthi.MVNL (@Indishout)September 9, 2021

ಈ ಇಳಿವಯಸ್ಸಿನಲ್ಲಿ ಇಬ್ಬರ ಪ್ರೇಮ ಎಲ್ಲರಿಗೂ ಮಾದರಿಯಾಗಿದ್ದು, ಹೀಗೆ ಇಬ್ಬರು ನಗುನಗುತ್ತಾ ಕೊನೆಯವರೆಗೂ ಸಂತೋಷವಾಗಿರಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ. ಈ ವಿಡಿಯೋವನ್ನು ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಕೆಲದಿನಗಳ ಹಿಂದಷ್ಟೇ ತೆಲಂಗಾಣದ ಸಾಯಿ ಶ್ರೀಯಾ ಕಳೆದ ತಿಂಗಳು 14ರಂದು ರಾಮಕೃಷ್ಣಪುರದ ಅಕುಲಾ ಅಶೋಕ್​ ಎಂಬುವರನ್ನು ವರಿಸಿದರು. ತನ್ನ ಮದುವೆಯ ಮೆರವಣಿಗೆಯಲ್ಲಿ “ನೀ ಬುಲೆಟ್ಟು ಬಂಡಿ” ಎಂಬ ಟಪ್ಪಾಂಗುಚ್ಚಿ ಹಾಡಿಗೆ ಪತಿಯ ಮುಂದೆಯೇ ಕುಣಿದು ಕುಪ್ಪಳಿಸಿದ್ದರು. ಈ ವಿಡಿಯೋ ವೈರಲ್​ ಆಗಿ, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತದಂತೆ ವಧುವಿಗೆ ಬಂಪರ್​ ಆಫರ್​ ಒಲಿದು ಬಂದಿತ್ತು. ಹಾಡುಗಳನ್ನು ನಿರ್ಮಿಸುವ ಮನರಂಜನಾ ಕಂಪನಿಯಾದ ಬ್ಲ್ಯೂ ರಾಬಿಟ್​ ಎಂಟರ್​ಟೈನ್ಮೆಂಟ್ ತಮ್ಮ ಮುಂದಿನ ಹಾಡಿಗೆ ಹೆಜ್ಜೆ ಹಾಕುವ ಅವಕಾಶವನ್ನು ವಧುವಿಗೆ ನೀಡುವುದಾಗಿ ಘೋಷಿಸಿತ್ತು.(ಏಜೆನ್ಸೀಸ್​)

ಮುಂದುವರಿದ ಶಿವಾಜಿ ಸಾಹಸ; ರಮೇಶ್ ಹುಟ್ಟುಹಬ್ಬಕ್ಕೆ ಫಸ್ಟ್​ಲುಕ್ ಬಿಡುಗಡೆ

ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್; ಕೆಎಸ್​ಸಿಎ ಮುಂದೆ ಬೇಡಿಕೆಯಿಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 3 =
Remember me
