ಭುವನೇಶ್ವರ:ಕಿರಾಣಿ ಅಂಗಡಿಯಲ್ಲಿ ಏನಾದರೂ ಖರೀದಿಸಿ ಎರಡು ಸಾವಿರ ರೂಪಾಯಿ ಕೊಟ್ಟು ಚಿಲ್ಲರೆ ಕೇಳಿದಾಗ ಚಿಲ್ಲರೆ ತರಲು ಹೊರಗಡೆ ಹೋಗುವ ಮುನ್ನ ನಿಮ್ಮ ಅಂಗಡಿಯ ಗಲ್ಲಾಪೆಟ್ಟಿಗಯನ್ನು ಭದ್ರ ಮಾಡಿ ಹೋಗಿ, ಇಲ್ಲದಿದ್ದಲ್ಲಿ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಈ ಘಟನೆ ನಡೆದಿದೆ. ಕಿರಾಣಿ ಅಂಗಡಿಗೆ ಬಂದ ದುಷ್ಕರ್ಮಿಯೊಬ್ಬ ವಸ್ತುವೊಂದನ್ನು ಖರೀದಿಸಿ 2 ಸಾವಿರ ರೂಪಾಯಿ ನೋಟು ನೀಡಿ ಚಿಲ್ಲರೆ ಕೇಳಿದ್ದಾನೆ. ಆದರೆ, ಅಂಗಡಿಯವನ ಬಳಿ ಚಿಲ್ಲರೆ ಇರಲಿಲ್ಲ.
ಸ್ವಲ್ಪ ಸಮಯ ಇಲ್ಲೇ ನಿಂತಿರಿ ಚಿಲ್ಲರೆ ಪಡೆದು ಬರುತ್ತೇನೆಂದು ಹೇಳಿ ಅಂಗಡಿ ಮಾಲೀಕ ಹೊರ ಹೋಗಿದ್ದಾರೆ. ಚಿಲ್ಲರೆ ಪಡೆದು ಬಂದು ನೋಡಿದರೆ, ಅಂಗಡಿಯ ಮುಂದೆ ಚಿಲ್ಲರೆ ಕೇಳಿದ ವ್ಯಕ್ತಿ ಇರಲಿಲ್ಲ. ಏನಾಗಿರಬಹುದು ಎಂದು ಅಂಗಡಿ ಒಳಗೆ ಬಂದು ನೋಡಿದಾಗ ಮಾಲೀಕನಿಗೆ ಬಹುದೊಡ್ಡವೇ ಆಘಾತವೇ ಕಾದಿತ್ತು.
ಮಾಲೀಕ ಚಿಲ್ಲರೆ ಪಡೆದು ಬರುವಷ್ಟರಲ್ಲಿ ದುಷ್ಕರ್ಮಿ ಗಲ್ಲಾಪೆಟ್ಟಿಗೆಯಲ್ಲಿದ್ದ ಹಣವನ್ನೆಲ್ಲ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಭುವನೇಶ್ವರದ ಸತ್ಯನಗರ ಏರಿಯಾದಲ್ಲಿ ಎರಡನೇ ಬಾರಿಗೆ ನಡೆದಿದೆ.
ಘಟನೆ ಸಂಬಂಧ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
1 ನಿಮಿಷಕ್ಕೆ 146 ತೆಂಗಿನಕಾಯಿ ಬ್ರೇಕ್​, ಹಲ್ಲಿನಲ್ಲಿ ಬಸ್​ ಎಳೆಯುವ ನಿಜ ಜೀವನದ ಸೂಪರ್​ ಹೀರೋ ಈತ!

ವಿಚ್ಛೇದಿತ ಪತ್ನಿಯ ಬಳಿ ಇರುವ ಮಗುವಿನ ವಿಸಿಟಿಂಗ್‌ ರೈಟ್‌ ‍ಪಡೆಯುವುದು ಹೇಗೆ? ಕೋರ್ಟ್‌ಗೆ ಹೋಗಲೇಬೇಕಾ?

ಚಿನ್ನು ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಿದ್ದ: ಅನುಶ್ರೀ ಭಾವುಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + thirteen =
Remember me
