ನವದೆಹಲಿ:ಭಾರತದಲ್ಲಿ ಪ್ರಸ್ತುತ ಮದುವೆ ಸೀಸನ್​ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರತಿದಿನ ನೂರಾರು ಮದುವೆಗಳು ನಡೆಯುತ್ತಿರುತ್ತವೆ. ವಿವಾಹಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಶೇರ್​ ಮಾಡಲಾಗುತ್ತಿದೆ. ಅವುಗಳಲ್ಲಿ ಕೆಲವೊಂದಿಷ್ಟು ವಿಡಿಯೋ ವಿಶೇಷ ಕಾರಣಗಳಿಂದಾಗಿ ವೈರಲ್​ ಆಗಿಬಿಡುತ್ತವೆ. ಅದೇ ರೀತಿ ಸದ್ಯ ವೈರಲ್​ ಆಗಿರುವ ವಿಡಿಯೋವನ್ನು ನೀವು ನೋಡಿದರೆ ನಿಮ್ಮ ತಲೆಯಲ್ಲಿ ಮುಂದೇನಾಯ್ತು ಎಂಬ ಪ್ರಶ್ನೆ ಮೂಡದೇ ಇರದು.
ಅಂದಹಾಗೆ ಭಾರತೀಯ ವಿವಾಹಗಳು ಸಾಕಷ್ಟು ಆಚರಣೆಗಳಿಂದ ತುಂಬಿವೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಅಂಥದ್ದೆ ಆಚರಣೆ ನಡೆದಿದ್ದು, ಅದು ಆಕಸ್ಮಿಕವಾಗಿ ಹಾಸ್ಯಾಸ್ಪದ ತಿರುವು ಪಡೆದು, ಮಂಟಪದಲ್ಲಿದವರೆಲ್ಲ ನಗೆಗಡಲಲಲ್ಲಿ ತೇಲಿದ್ದನ್ನು ನೀವು ನೋಡಬಹುದು.
ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾದರೆ, 15 ನಿಮಿಷದ ವಿಡಿಯೋದಲ್ಲಿ ವಧುವಿನ ಸಹೋದರಿಯು ಆಚರಣೆಯ ಭಾಗವಾಗಿ ವರ ಅಥವಾ ತನ್ನ ಭಾವಿ ಬಾವನಿಗೆ ಸ್ವೀಟ್​ ತಿನಿಸಲು ಮುಂದಾಗಿರುತ್ತಾಳೆ. ಈ ವೇಳೆ ವರ ನಾದಿನಿಯ ಕೈಹಿಡಿದುಕೊಂಡು ತಿನ್ನಲು ಯತ್ನಿಸಿದಾಗ, ನಾದಿನಿ ತನ್ನ ಕೈಗಳನ್ನು ಹಿಂದಕ್ಕೆ ಎಳೆದುಕೊಂಡು ತಾನೇ ತಿನ್ನಲು ಮುಂದಾಗುತ್ತಾಳೆ. ಈ ವೇಳೆ ಆಕಸ್ಮಿಕವಾಗಿ ನಾದಿನಿಯ ಕೆನ್ನೆಗೆ ಭಾವ ಚುಂಬಿಸುತ್ತಾನೆ. ಈ ವೇಳೆ ಸುತ್ತಾಮುತ್ತ ಇದ್ದವರು ನಗೆಗಡಲಲ್ಲಿ ತೇಲಾಡುತ್ತಾರೆ.
ಈ ವಿಡಿಯೋವನ್ನು ಭೂತಿನಿ ಕೀ ಮೀಮ್ಸ್ (bhutni_ke_memes)​ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಜುಲೈ 26ರಂದು ಪೋಸ್ಟ್​ ಮಾಡಲಾಗಿದ್ದು, ಈವರೆಗೂ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಸಾವಿರಾರು ಮಂದಿ ಕಾಮೆಂಟ್​ ಮಾಡಿದ್ದಾರೆ. ಪಾಪ ವರ ಕತೆ ಏನಾಯ್ತೋ? ವಧು ನಿಜಕ್ಕೂ ಕಾಳಿಯ ಅವತಾರ ತಾಳಿರುತ್ತಾಳೆ ಮತ್ತು ಹನಿಮೂನ್​ ವೇಳೆ ವಧುವಿಗೆ ಕಾದಿದೆ ಎಂದೆಲ್ಲಾ ಕಮೆಂಟಿಸಿದ್ದಾರೆ. ಇನ್ನು ಕೆಲವರು ಅದೃಷ್ಟವಂತ ಎಂದಿದ್ದಾರೆ.(ಏಜೆನ್ಸೀಸ್​)
A post shared by Bhutni_ke (@bhutni_ke_memes)

ಸೌತ್​ ಸಿನಿರಂಗದ ಯುವ ನಟಿ ದುರಂತ ಸಾವು! ಕಾಲಿವುಡ್​ಗೆ ಮತ್ತೊಂದು ಆಘಾತ

ಹೆಣ್ಣು ಮಕ್ಕಳ ಮೇಲೆ ನಮಗೂ ಗೌರವ ಇದೆ ಅದನ್ನೇ ಬಂಡವಾಳ ಮಾಡ್ಕೋಬೇಡಿ: ಸಂಸದೆ ಸುಮಲತಾಗೆ ನಿಖಿಲ್​ ಎಚ್ಚರಿಕೆ

VIDEO: ತರಕಾರಿ ಮೇಲೆ ಮೂತ್ರ ವಿಸರ್ಜಿಸಿ ಮಾರಾಟ: ಅಸಹ್ಯ ವಿಡಿಯೋ ವೈರಲ್​- ವ್ಯಾಪಾರಿ ಪೊಲೀಸರ ವಶಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
