ತಿರುವನಂತಪುರಂ:ಸೂಪರ್​ ಹೀರೋ ಕಲ್ಪನಾ ಆಧಾರಿತ ಮಲಯಾಳಂನ ಯಶಸ್ವಿ ಚಿತ್ರ “ಮಿನ್ನಲ್​ ಮುರಳಿ”ಯಿಂದ ಪ್ರಭಾವಿತಗೊಂಡಿರುವ ಯುವಕನೊಬ್ಬ ಚಿತ್ರದಲ್ಲಿ ನಾಯಕ ಟೋವಿನೋ ಥಾಮಸ್​ ಧರಿಸಿದ್ದ ಸೂಪರ್​ ಹೀರೋ ಉಡುಗೆಯನ್ನೇ ಧರಿಸಿ, ವಿಭಿನ್ನವಾಗಿ ಮದುವೆ ಆಗಿರುವ ಪ್ರಸಂಗ ಬೆಳಕಿಗೆ ಬಂದಿದೆ.
ವರನನ್ನು ಅಮಲ್​ ರವೀಂದ್ರನ್​ ಎಂದು ಗುರುತಿಸಲಾಗಿದೆ. ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿಕೊಂಡಿರುವ ರವೀಂದ್ರನ್​, ಕೊನೆಗೂ ಮಿನ್ನಲ್​ ಮುರಳಿ ಮತ್ತು ಸೂಪರ್​ ವುಮೆನ್​ ಮದುವೆ ಮಾಡಿಕೊಂಡರು ಎಂದು ಬರೆದುಕೊಂಡಿದ್ದಾರೆ.
A post shared by Amal Raveendran (@amallraveendran)

ವಧು ಸಾಂಪ್ರದಾಯಿಕ ಉಡುಗೆಯಲ್ಲಿದ್ದರೆ, ವರ ರವೀಂದ್ರನ್​ ಸೂಪರ್​ ಹೀರೋ ಧರಿಸು ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತೆರೆದ ಮೈದಾನದಲ್ಲಿ ವಧು-ವರ ಹಾರ ಬದಲಾವಣೆ ಮಾಡಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ವಿಡಿಯೋ ಸೆರೆಹಿಡಿಯಲಾಗಿದೆ. ನವಜೋಡಿ ಮೈದಾನದಲ್ಲಿ ಓಡಾಡಿರುವ ದಶ್ಯವೂ ವೈರಲ್​ ವಿಡಿಯೋದಲ್ಲಿದೆ.
ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ವರ ರವೀಂದ್ರನ್​, ಶೂಟ್​ ಮಾಡಿದ ಬಳಿಕ ನಮ್ಮ ಸಂಬಂಧಿಕರು ಈ ಉಡುಗೆಯಲ್ಲಿ ನನ್ನನ್ನು ನೋಡಲು ತುಂಬಾ ಉತ್ಸುಕರಾಗಿದ್ದಾರೆ. ಈ ಸೂಪರ್ ಹೀರೋ ಉಡುಗೆಯನ್ನು ನನ್ನ ಸೋದರ ಸಂಬಂಧಿಯೊಬ್ಬರು ಮದುವೆ ಸಂದರ್ಭದಲ್ಲಿ ಧರಿಸಲು ಪ್ಲಾನ್​ ಮಾಡಿದ್ದರು. ಆದರೆ, ಕೋವಿಡ್​ ಕಾರಣದಿಂದಾಗಿ ಅವರು ಮದುವೆಗೆ ಬರಲು ಆಗಲಿಲ್ಲ. ‘ಸೇವ್ ದಿ ಡೇಟ್’ ವೀಡಿಯೋ ನೋಡಿದ ನಂತರ ಅನೇಕರು ಮದುವೆಯ ಬಗ್ಗೆ ಕುತೂಹಲ ಹೊಂದಿದ್ದರು ಎಂದು ತಿಳಿಸಿದ್ದಾರೆ. ಅಂದಹಾಗೆ ಇಬ್ಬರು ಜನವರಿ 23ರಂದು ಸಪ್ತಪದಿ ತುಳಿದಿದ್ದಾರೆ.
A post shared by Amal Raveendran (@amallraveendran)

ಇದೀಗ ಈ ವಿಡಿಯೋವನ್ನು ಅನೇಕರು ನಟ ಟೋವಿನೋ ಥಾಮಸ್​ಗೆ ಟ್ಯಾಗ್​ ಮಾಡುತ್ತಿದ್ದಾರೆ. ಅಲ್ಲದೆ, ಈ ವಿಭಿನ್ನ ವೆಡ್ಡಿಂಗ್​ ಫೋಟೋಶೂಟ್​ ಪರಿಕಲ್ಪನೆಗೆ ಫಿದಾ ಆಗಿದ್ದಾರೆ.(ಏಜೆನ್ಸೀಸ್​)
A post shared by Amal Raveendran (@amallraveendran)

ಮಿಸ್​ ಕಾಲ್​ನಲ್ಲಿ ಶುರುವಾದ ಪ್ರೀತಿ: ಲವರ್ ಕುರುಡನೆಂದು ತಿಳಿದಾಗ ಯುವತಿ ಮಾಡಿದ್ದು ಕೇಳಿದ್ರೆ ಅಚ್ಚರಿ ಪಡ್ತೀರಾ!

ದೇವಸ್ಥಾನ ಗೋಪುರದ ಫೋಟೋ ಪೋಸ್ಟ್​ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಮ್​ಚರಣ್​ ಪತ್ನಿ ಉಪಾಸನ!

3,300 ವರ್ಷ ಹಳೆಯದಾದ ಕಮಲದ ಹೂವಿನ ಚಿತ್ರವಿರುವ ಸೀಸದ ತಾಯಿತ ಪತ್ತೆ..!

Sign in to your account
Please enter an answer in digits:four × 3 =
Remember me
