ಅಡೂರು:ಮದುವೆಯಾಗಿ ಮೊದಲ ರಾತ್ರಿಯ ಬಳಿಕ ವಧುವಿನ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ಕದ್ದು ಪರಾರಿಯಾಗಿದ್ದ ವರನನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಾಯಂಕುಲಂ ನಿವಾಸಿ ಅಜರುದ್ದೀನ್​ ರಶೀದ್​ (30) ಎಂಬಾತನನ್ನು ಕೇರಳದ ಅಡೂರು ಪೊಲೀಸರು ಬಂಧಿಸಿದ್ದು, 30 ಸವರನ್​ ಚಿನ್ನ ಮತ್ತು 2.75 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಜರುದ್ದೀನ್​ ಪಹಕುಲಂ ಮೂಲದ ಮಹಿಳೆಯನ್ನು ಜನವರಿ 30ರಂದು ಎಸ್​.ಎಚ್​. ಆಡಿಟೋರಿಯಂನಲ್ಲಿ ಮದುವೆಯಾಗಿದ್ದ. ಸಂಪ್ರದಾಯದಂತೆ ವಧುವಿನ ಮನೆಯುಲ್ಲಿ ಮೊದಲ ರಾತ್ರಿ ನಡೆದಿತ್ತು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸ್ನೇಹಿತನಿಗೆ ಅಪಘಾತವಾಗಿದೆ ಎಂದು ಅಜರುದ್ದೀನ್​ ಮನೆ ಬಿಟ್ಟಿದ್ದಾನೆ.
ಇದಾದ ಬಳಿಕ ಆತನಿಗೆ ಫೋನ್​ ಮಾಡಿದರೆ ಸ್ವಿಚ್​ ಆಫ್​ ಅಂತಾ ಕೇಳಿಬಂದಿದೆ. ಇದೇ ಸಂದರ್ಭದಲ್ಲಿ ವಧುವಿನ ಮನೆಯಲ್ಲಿ 30 ಸವರನ್​ ಚಿನ್ನ ಮತ್ತು 2.75 ಲಕ್ಷ ರೂ. ಹಣ ಕಾಣೆಯಾಗಿರುವುದು ತಿಳಿಯುತ್ತದೆ. ಇದರಿಂದ ಅನುಮಾನಗೊಂಡ ವಧುವಿನ ಮನೆಯವರು ತಕ್ಷಣ ದೂರು ಸಹ ದಾಖಲಿಸುತ್ತಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿಯುವ ಅಡೂರು ಪೊಲೀಸರಿಗೆ ಆರೋಪಿ ಅಜರುದ್ದೀನ್​ ಕುರಿತು ಸ್ಫೋಟಕ ಸಂಗತಿಯೊಂದು ತಿಳಿಯುತ್ತದೆ. ಎರಡು ವರ್ಷಗಳ ಹಿಂದೆ ಅಲಪ್ಪುಳದ ಚೆಪ್ಪಾಡ್​​ ಎಂಬಲ್ಲಿ ಯುವತಿಯೊಬ್ಬಳನ್ನುಮದುವೆಯಾಗಿದ್ದ ಎಂಬ ಸಂಗತಿ ಬಯಲಾಗುತ್ತದೆ. ಆತ ಮೊದಲ ಪತ್ನಿಯೊಂದಿಗೆ ಇದ್ದಾನೆ ಎಂಬ ಮಾಹಿತಿ ತಿಳಿದ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಆತನನ್ನು ಬಂಧಿಸಿದ್ದು, ಕೋರ್ಟ್​ ಮುಂದೆ ಹಾಜರುಪಡಿಸಿದ್ದಾರೆ. ಇತ್ತ ಘನ ಘೋರ ಸತ್ಯ ತಿಳಿದ ವಧು ಮದುವೆ ಆರಂಭದಲ್ಲೇ ಈ ರೀತಿ ಆಯ್ತಲ್ಲ ಅಂತಾ ಆಘಾತಕ್ಕೆ ಒಳಗಾಗಿದ್ದಾಳೆ.(ಏಜೆನ್ಸೀಸ್​)
ಹಿರಿಯ ನಟಿ, ಬಿಜೆಪಿ ಮುಖಂಡೆ ಜಯಪ್ರದಾ ಮನೆಯಲ್ಲಿ ಸಂಭವಿಸಿದ ದುರಂತ

ವಿರೋಧಿಗಳಿಗೆ ಒಂದೇ ಪದದಲ್ಲಿ ಉತ್ತರಿಸಿದ ಸಮಂತಾ? ನೆಟ್ಟಿಗರು ಶಾಕ್! ಫೋಟೋ, ವಿಡಿಯೋಗಳು ವೈರಲ್…

ಯೂಟ್ಯೂಬ್‌ನಲ್ಲಿಯೂ ಪ್ರಧಾನಿ ಮಿಂಚು: ತಮ್ಮದೇ ದಾಖಲೆ ಮುರಿದು ಪುನಃ ‘ಜಾಗತಿಕ ನಾಯಕ’ರಾದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 15 =
Remember me
