ನವದೆಹಲಿ:ಇಂದು (ಆಗಸ್ಟ್​ 12) ಬೆಳಗ್ಗೆ 5.43ರಲ್ಲಿ ಆಂಧ್ರ ಪ್ರದೇಶದ ಶ್ರೀಹರಿಕೋಟ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿದ್ದ ಭೂ ನಿಗಾವಣೆಯ ಸ್ಯಾಟಲೈಟ್​ ಇಒಎಸ್​-03 ತಾಂತ್ರಿಕ ಅಡಚಣೆಯಿಂದಾಗಿ ವಿಫಲವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಕ್ರಯೋಜೆನಿಕ್ ಹಂತದ ವೇಳೆ ಉಂಟಾದ ತಾಂತ್ರಿಕ ಅಡಚಣೆಯಿಂದಾಗಿ ಮಿಷನ್​ ಅಪೂರ್ಣವಾಗಿದೆ ಎಂದು ಇಸ್ರೋ ತಿಳಿಸಿದೆ. ಇಒಎಸ್​-03 ಭೂ ನಿಗಾವಣೆಯ ಉಪಗ್ರಹ. ಇದನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಲು 51.70 ಮೀಟರ್​ ಎತ್ತರದ ಜಿಎಸ್​ಎಲ್​ವಿ-ಎಫ್​10 ರಾಕೆಟ್​ನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. 26 ಗಂಟೆಗಳ ಕೌಂಟ್‌ಡೌನ್ ಮುಗಿದ ನಂತರ ಮುಂಜಾನೆ 5.43ಕ್ಕೆ ಯೋಜಿಸಿದಂತೆಯೇ ಸ್ಪೇಸ್‌ಪೋರ್ಟ್‌ನ ಎರಡನೇ ಉಡಾವಣಾ ಪ್ಯಾಡ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.
ಲಿಫ್ಟ್-ಆಫ್‌ಗೆ ಮುಂಚಿತವಾಗಿ, ಲಾಂಚ್ ಆಥರೈಸೇಶನ್ ಬೋರ್ಡ್ ಯೋಜಿಸಿದಂತೆ ಸಾಮಾನ್ಯ ಲಿಫ್ಟ್-ಆಫ್‌ಗಾಗಿ ಡೆಕ್‌ಗಳನ್ನು ತೆರವುಗೊಳಿಸಿತು. ಮೊದಲ ಮತ್ತು ಎರಡನೇ ಹಂತಗಳಲ್ಲಿ ರಾಕೆಟ್​ನ ಕಾರ್ಯಕ್ಷಮತೆ ಸಾಮಾನ್ಯವಾಗಿತ್ತು. ಆದಾಗ್ಯೂ, ಕೆಲವು ನಿಮಿಷಗಳ ನಂತರ ರಾಕೆಟ್​ನಲ್ಲಿ ತಾಂತ್ರಿಕ ಅಡಚಣೆ ಉಂಟಾಗಿದ್ದು ಕಂಡು ಬಂದಿತು ಎಂದು ಮಿಷನ್ ನಿಯಂತ್ರಣ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.
ರಾಕೆಟ್​ನ ಕ್ರೆಯೋಜೆನಿಕ್ ಹಂತ ವೇಳೆ ತಾಂತ್ರಿಕ ಅಡಚಣೆ ಕಂಡುಬಂದಿದ್ದರಿಂದ ಮಿಷನ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಹಿಮಾಚಲ ಪ್ರದೇಶದಲ್ಲಿ ಮತ್ತೊಂದು ದುರಂತ: ಭೂಕುಸಿತಕ್ಕೆ 11 ಮಂದಿ ಬಲಿ, 30 ಮಂದಿ ನಾಪತ್ತೆ

ಸಿಲಿಕಾನ್​ ಸಿಟಿಯಲ್ಲಿ ವಂಚಕ ಕಂಪನಿ! ಟ್ರೇಡ್​ ಆಕ್ಸಿಸ್​ ಕಂಪನಿಯಿಂದ ವಂಚನೆ -ಶೇ. 8 ರವರೆಗೆ ಲಾಭಾಂಶ ಆಮಿಷ

ಮಧ್ಯರಾತ್ರಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ​ ಮನೆಗೆ ನುಗ್ಗಿ ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − six =
Remember me
