ಗಡೂರು:ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳಿಗೆ ಚಾಕು ಇರಿದ ಯುವಕ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಗಡೂರಿನಲ್ಲಿ ನಡೆದಿದೆ.
ಪೊಲೀಸರು ಮತ್ತು ಸ್ಥಳೀಯರ ಪ್ರಕಾರ ಪಿ. ಸುಧಾಕರ್​ ಮತ್ತು ಸರಿತಾ ದಂಪತಿ ಗಡೂರಿನಲ್ಲಿ ಟೀಚರ್ಸ್​ ಆಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ತೇಜಸ್ವಿನಿ ಮತ್ತು ಕಾರ್ತಿಕ್​ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ತೇಜಸ್ವಿನಿ ಇಂಜಿನಿಯರ್​ ವಿದ್ಯಾರ್ಥಿನಿಯಾಗಿದ್ದಳು.
ಸುಧಾಕರ್​ ಸಹೋದ್ಯೋಗಿ ಚೆಂಚುಕೃಷ್ಣಯ್ಯ ಮಗ ವೆಂಕಟೇಶ್​ ಮತ್ತು ತೇಜಸ್ವಿನಿ ಕೆಲವು ದಿನಗಳ ಹಿಂದೆ ಪರಿಚಯವಾಗಿತ್ತು. ಬಳಿಕ ತೇಜಸ್ವಿನಿಯನ್ನು ಪ್ರೀತಿಸುವುದಾಗಿ ವೆಂಕಟೇಶ್​ ದುಂಬಾಲು ಬಿದ್ದಿದ್ದ. ಆದರೆ, ತೇಜಸ್ವಿನಿಗೆ ಇಷ್ಟವಿರಲಿಲ್ಲ. ಅಲ್ಲದೆ, ಎಚ್ಚರಿಕೆಯನ್ನು ನೀಡಿದ್ದಳು. ಪಾಲಕರಿಂದಲೂ ವಾರ್ನ್​ ಮಾಡಿಸಿದ್ದಳು. ವಿವಾದ ದೊಡ್ಡದಾಗುವ ಲಕ್ಷಣಗಳು ಕಾಣುತ್ತಿದ್ದಂತೆ ಚೆಂಚುಕೃಷ್ಣಯ್ಯ ತನ್ನ ಮಗ ವೆಂಕಟೇಶ್​ನನ್ನು ಬೆಂಗಳೂರಿಗೆ ಕಳುಹಿಸಿದ್ದ.
ಹೀಗಿರುವಾಗಿ ಕರೊನಾ ಎರಡನೇ ಹಿನ್ನೆಲೆಯಲ್ಲಿ ವೆಂಕಟೇಶ್​ ಗಡೂರಿಗೆ ಹಿಂದುರಿಗಿದ್ದ. ಬಳಿಕವೂ ಪ್ರೀತಿ ಮಾಡುವಂತೆ ತೇಜಸ್ವಿನಿಯನ್ನು ಪೀಡಿಸುತ್ತಿದ್ದ. ಆತನ ಕಿರುಕುಳ ಸಹಿಸದೇ ತೇಜಸ್ವಿನಿ ತನ್ನ ಫೋನ್​ ನಂಬರ್​ ಬದಲಾಯಿಸಿದ್ದಳು. ಆಕೆ ತನ್ನನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೆ ಬಂದ ವೆಂಕಟೇಶ್​, ತೇಜಸ್ವಿನಿಯನ್ನು ಶಾಶ್ವತವಾಗಿ ಇಲ್ಲವಾಗಿಸಲು ತೀರ್ಮಾನಿಸಿದ.
ಗುರುವಾರ ಬೆಳಗ್ಗೆ ಸುಧಾಕರ್​ ಮತ್ತು ಸರಿತಾ ಶಾಲೆಗೆ ಹೋದಾಗ ಮನೆಯಲ್ಲಿ ತೇಜಸ್ವಿನಿ ಮತ್ತು ಸಹೋದರ ಕಾರ್ತಿಕ್​ ಮಾತ್ರ ತಾವು ವಾಸವಿದ್ದ ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ನಲ್ಲಿದ್ದರು. ಸ್ನೇಹಿತನ ಸಹಾಯದಿಂದ ಬೆಳಗ್ಗೆ 11 ಗಂಟೆಗೆ ತೇಜಸ್ವಿನಿ ಮನೆಗೆ ಬಂದ ವೆಂಕಟೇಶ್​, ತಾನು ಕೆಳಗಡೆ ನಿಂತು, ಸ್ನೇಹಿತನನ್ನು ಮಹಡಿಗೆ ಕಳುಹಿಸಿ ಯಾರಿದ್ದಾರೆಂದು ನೋಡಿ ಬರಲು ಹೇಳಿದ್ದ. ತೇಜಸ್ವಿನಿ ತಮ್ಮ ಕಾರ್ತಿಕ್​ ಮಹಡಿಯಿಂದ ಕೆಳಗೆ ಬರುವುದನ್ನು ನೋಡಿದ ವೆಂಕಟೇಶ್​, ತನ್ನ ಸ್ನೇಹಿತನಿಗೆ ಹೊರಡುವಂತೆ ಹೇಳಿ ತೇಜಸ್ವಿನಿ ಇದ್ದ ಫ್ಲ್ಯಾಟ್​ ಒಳಗೆ ನುಸುಳಿದ.
ತೇಜಸ್ವಿನಿ ಲಿವಿಂಗ್​ ರೂಮ್​ನಲ್ಲಿರುವುದನ್ನು ನೋಡಿದ ವೆಂಕಟೇಶ್​ ಆಕೆಯ ಮೇಲೆ ಚಾಕುವಿನಿಂದ ದಾಳಿ ಮಾಡಿ, ಗಂಟಲು ಸೀಳಿ ಬಳಿಕ ಆಕೆಯ ವೇಲ್​ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡುತ್ತಾನೆ. ಬಳಿಕ ಮನೆಯಲ್ಲಿ ನಡೆದಿರುವ ಘಟನೆ ಸುಧಾಕರ್​ಗೆ ಮಗ ಕಾರ್ತಿಕ್​ನಿಂದ ತಿಳಿಯುತ್ತದೆ. ಬಳಿಕ ಸುಧಾಕರ್​ ಎಮರ್ಜೆನ್ಸಿ ನಂಬರ್​ 100ಗೆ ಕರೆ ಮಾಡುತ್ತಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸುತ್ತಾರೆ.
ಮುಚ್ಚಿದ್ದ ಬಾಗಿಲನ್ನು ಮುರಿದು ಒಳಗಡೆ ಪ್ರವೇಶಿಸಿದಾಗ ತೇಜಸ್ವಿನಿ ರಕ್ತದ ಮಡುವಿನಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿರುತ್ತಾನೆ. ಇನ್ನೊಂದೆಡೆ ಅದೇ ಮನೆಯಲ್ಲಿ ವೆಂಕಟೇಶ್​ ಕಿಟಕಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಇಬ್ಬರ ಪ್ರಾಣ ಅಷ್ಟರಲ್ಲಾಗಲೇ ಹೋಗಿರುವುದಾಗಿ ವೈದ್ಯರು ದೃಢಪಡಿಸುತ್ತಾರೆ.
ಘಟನೆ ಸಂಬಂಧ ತೇಜಸ್ವಿನಿ ತಂದೆ ಸುಧಾಕರ್​ ನೀಡಿದ ದೂರಿನ ಆಧಾರದ ವೆಂಕಟೇಶ್​ ಮತ್ತು ಆತನ ತಂದೆ ಚೆಂಚುಕೃಷ್ಣಯ್ಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ಸಾಂಕ್ರಾಮಿಕದಲ್ಲಿ ಲಾಭ ಗಳಿಸುವುದು ಹೇಗೆ ಎಂದು ಶ್ವೇತಪತ್ರ ಪ್ರಕಟಿಸಿ: ರಾಹುಲ್ ಗಾಂಧಿಗೆ ಬಿಜೆಪಿ ನಾಯಕ ಟಾಂಗ್

ಸಿಡಿ ಲೇಡಿ ಹುಡುಕಿ ಹೊರಟ್ರು ಜಾರಕಿಹೊಳಿ- ಊರಿಗೆ ಬಂದ್ರೂ ಮನೆಗೆ ಬಂದಿಲ್ಲ: ಎಲ್ಲವೂ ನಿಗೂಢ!

ರಾತ್ರೋರಾತ್ರಿ ಒಂದು ಕಿ.ಮೀ ಉದ್ದದ ರಸ್ತೆ ‘ಕಳುವು’: ಹೀಗೊಂದು ವಿಚಿತ್ರ ಘಟನೆ- ದೂರು ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − four =
Remember me
