ಥಿರುವಲ್ಲ:ಪ್ರಖ್ಯಾತ ಮಲಯಾಳಂ ನಟ ಗಿನ್ನೆಸ್ಸ್​ ಪಕ್ರು ಅಲಿಯಾಸ್​ ಅಜಯ್​ ಕುಮಾರ್​ ಅವರ ಕಾರು ಅಪಘಾತಕ್ಕೀಡಾಗಿರುವ ಘಟನೆ ಕೇರಳದ ಥಿರುವಲ್ಲ ಪಟ್ಟಣದಲ್ಲಿ ನಡೆದಿದೆ.
ಈ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಥಿರುವಲ್ಲ ಬೈಪಾಸ್​ ರಸ್ತೆಯಲ್ಲಿ ಬರುತ್ತಿದ್ದ ಪಾರ್ಸೆಲ್​ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅದೃಷ್ಟವಶಾತ್​ ನಟ ಗಿನ್ನೆಸ್ಸ್​ ಪಕ್ರು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತೊಂದು ವಾಹನವನ್ನು ಓವರ್​ಟೇಕ್​ ಮಾಡಲು ಹೋದ ಲಾರಿ ಎದುರು ಬರುತ್ತಿದ್ದ ಗಿನ್ನೆಸ್ಸ್​ ಪಕ್ರು ಅವರ ಕಾರಿನ ಚಕ್ರಕ್ಕೆ ಡಿಕ್ಕಿ ಹೊಡೆದಿದೆ. ಪಕ್ರು ಅವರು ತಿರುವನಂತಪುರದಿಂದ ಕೊಚ್ಚಿಗೆ ತೆರಳು ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.
ಘಟನೆ ಸಂಬಂಧ ಥಿರುವಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ಪಕ್ರು ಅವರು ಫೇಸ್​ಬುಕ್​ ಮೂಲಕ ಪ್ರತಿಕ್ರಿಯೆ ನೀಡಿದ್ದು, ಸೀಟ್​ ಬೆಲ್ಟ್​ ಧರಿಸಿದ್ದರಿಂದ ಪ್ರಾಣ ಉಳಿಯಿತು. ದಯವಿಟ್ಟು ಸೀಟ್​ ಬೆಲ್ಟ್​ ಧರಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಲಾರಿ ಡಿಕ್ಕಿ ಹೊಡೆದರೂ ಒಂದೇ ಒಂದು ಗಾಯಗಳಾಗದೇ ಪಕ್ರು ಅವರು ಬಚಾವ್​ ಆಗಿದ್ದಾರೆ. ಚಾಲಕ ಶಿವನ್​, ನೆರವಿಗೆ ಬಂದ ಯುವಕರು, ಎಸ್​ಐ ಹುಮಾಯುನ್​, ತಮ್ಮ ಸ್ನೇಹಿತ ಮ್ಯಾಥೀವ್​ ನೈನಾನ್​ ಮತ್ತು ಮುಂತಾದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.(ಏಜೆನ್ಸೀಸ್​)

ವಾಹನ ಚಾಲಕರೇ ಎಚ್ಚರ! ನೀವು ತಪ್ಪು ಮಾಡದಿದ್ರೂ ನಿಮ್ಮ ವಾಹನಕ್ಕೆ ಬಿದ್ದಿರುತ್ತದೆ ದಂಡ

ಒಂದೇ ಉಸಿರಲಿ ಹನುಮಾನ್ ಚಾಲೀಸಾ ಹಾಡಿದ ಶಂಕರ್ ಮಹಾದೇವನ್

ಅಲ್ಲು ಅರ್ಜುನ್​, ಮಂಚು ಮನೋಜ್ ಬಳಿಕ​ ನಟ ನಾಗಚೈತನ್ಯಗೂ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 1 =
Remember me
