ಅಹಮದಾಬಾದ್​:ಹದಿನೇಳು ವರ್ಷದ ಹುಡುಗನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಮಾಡಿದ ಆರೋಪದಲ್ಲಿ 23 ವರ್ಷದ ಮಹಿಳೆಯನ್ನು ಬಂಧಿಸಿ, ಪೊಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಗುಜರಾತ್​ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್​ ಮೂಲಗಳ ಪ್ರಕಾರ ಗುಜರಾತಿನ ಆನಂದ್​​ ಮೂಲದ 17 ವರ್ಷದ ಹುಡುಗ ಮೇ 25ರಿಂದ ನಾಪತ್ತೆಯಾಗಿದ್ದ. ಸಾಕಷ್ಟು ಹುಡುಕಾಡಿ, ಪತ್ತೆಹಚ್ಚಲು ಸಾಧ್ಯವಾಗದಿದ್ದಾಗ ಕುಟುಂಬಸ್ಥರು ಪೊಲೀಸ್​ ಠಾಣೆಯ ಮೆಟ್ಟಿಲೇರಿ ನಾಪತ್ತೆ ದೂರು ದಾಖಲಿಸಿದ್ದರು.
ದೂರು ಸ್ವೀಕರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ದೂರು ನೀಡಿದ ಹದಿನೈದು ದಿನಗಳ ಬಳಿಕ ಸೂರತ್​ನಲ್ಲಿ ಹುಡುಗನನ್ನು ಪತ್ತೆಹಚ್ಚಿದ್ದಾರೆ. ಮದುವೆ ಆಗುವುದಾಗಿ ನಂಬಿಸಿ ಗುಜರಾತ್​ನ ಆನಂದ್​ದಿಂದ ಸೂರತ್​ಗೆ ಮಹಿಳೆ ಕರೆದೊಯ್ದಿದ್ದಳು. ಇನ್ನು ವಿಚಾರಣೆ ವೇಳೆ ಹುಡುಗನ ಜತೆ ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ.
ಸದ್ಯ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.(ಏಜೆನ್ಸೀಸ್​)
ಪ್ರೀತಿಸಿ ಮದುವೆಯಾದ ಯುವತಿಯ ಆಧಾರ್​ ಕಾರ್ಡ್​ ಮಾಹಿತಿ ನೋಡಿ ಶಾಕ್​ ಆದ ಯುವಕ..!

ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್​ ಆಗಲು ಸಂಚು ರೂಪಿಸಿದ್ದ ಟಿಕ್​ಟಾಕ್​ ಸ್ಟಾರ್ ಸಿಕ್ಕಿಬಿದ್ದಿದ್ದೇ ರೋಚಕ!

ಒಂದೇ ಗ್ರಾಮದ 80 ಮಂದಿಯನ್ನು ಬೇಟೆಯಾಡಿ ತಿಂದಿದ್ದ ದೈತ್ಯ ಮೊಸಳೆ ಕೊನೆಗೂ ಸರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + two =
Remember me
