ಗಾಂಧಿನಗರ:ದೇಶದ ಜನತೆಯನ್ನು ಆಘಾತಕ್ಕೆ ದೂಡಿರುವ ಕೇರಳದ ನರಬಲಿ ಪ್ರಕರಣದ ರೀತಿಯಲ್ಲೇ ಮತ್ತೊಂದು ಪ್ರಕರಣ ಇದೀಗ ಗುಜರಾತ್​ನಿಂದ ವರದಿಯಾಗಿದೆ. ದಿಢೀರ್​ ಶ್ರೀಮಂತರಾಗುವ ದುರುದ್ದೇಶದಿಂದ ಗಿರ್​ ಸೊಮನಾಥ್​ ಜಿಲ್ಲೆಯ ಧವಾ ಗ್ರಾಮದ ಕುಟುಂಬವೊಂದು 14 ವರ್ಷದ ಮಗಳನ್ನು ವಾಮಾಚಾರಕ್ಕೆ ಬಲಿ ನೀಡಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಈ ಘಟನೆ ನವರಾತ್ರಿಯ ದಿನದಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಾರಿ ಸಂಪತ್ತು ಪಡೆಯುತ್ತೇವೆ ಎಂಬ ಮೂಡನಂಬಿಕೆಗೆ ಒಳಗಾಗಿ ತಮ್ಮ ಮಗಳನ್ನು ಕುಟುಂಬ ಬಲಿ ನೀಡಿದೆ ಎಂದು ನೆರೆಹೊರೆಯವರು ಆರೋಪ ಮಾಡಿರುವುದಲ್ಲದೆ, ದೂರು ಸಹ ದಾಖಲಿಸಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಬಾಲಕಿಯ ಮರಣವು ನೋಂದಣಿ ಆಗಿಲ್ಲ ಮತ್ತು ಆತುರವಾಗಿ ಬಾಲಕಿಯ ಮೃತದೇಹವನ್ನು ಅವರ ತೋಟದಲ್ಲಿ ಹೂಳಲಾಗಿದೆ ಎಂದು ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಇದಾದ ಬಳಿಕ ಪೊಲೀಸ್​ ಮತ್ತು ವಿಧಿವಿಜ್ಞಾನ ತಂಡ ತೋಟಕ್ಕೆ ತೆರಳಿ, ಬಾಲಕಿ ಹೂತಿದ್ದ ಹಾಗದಲ್ಲಿ ಸಾಕ್ಷಿಗಳನ್ನು ಸಂಗ್ರಹಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಬಾಲಕಿಯ ಪಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತ ಬಾಲಕಿಯ ತಂದೆ ಭವೇಶ್​ ಸೂರತ್​ನಲ್ಲಿ ಉದ್ಯಮವೊಂದನ್ನು ನಡೆಸುತ್ತಿದ್ದಾರೆ. ಬಾಲಕಿ ಆರು ತಿಂಗಳ ಹಿಂದೆ ಸೂರತ್​ನಲ್ಲಿ ಓದುತ್ತಿದ್ದಳು. ಯಾವುದೇ ಕಾರಣವಿಲ್ಲದೆ, ತಮ್ಮ ಮಗಳ ವಿದ್ಯಾಭ್ಯಾಸವನ್ನು ಪಾಲಕರು ಮೊಟಕುಗೊಳಿಸಿದ್ದರು. ಇದಾದ ಬಳಿಕ ಬಾಲಕಿಯನ್ನು ಮನೆಗೆ ಕರೆತರಲಾಗಿತ್ತು. ಮಗಳು ಮತ್ತೆ ಜನಿಸುತ್ತಾಳೆ ಮತ್ತು ಭಾರಿ ಸಂಪತ್ತು ಗಳಿಸಬಹುದು ಅಂತಾ ಮೂಡನಂಬಿಕೆಗೆ ಕಟ್ಟುಬಿದ್ದು ಮಗಳನ್ನು ನವರಾತ್ರಿಯ ದಿನ ಬಲಿ ಕೊಟ್ಟಿದ್ದಾರೆ. ಬಳಿಕ ನಾಲ್ಕು ದಿನಗಳವರೆಗೆ ಮೃತದೇಹವನ್ನು ಮನೆಯಲ್ಲಿ ಇಟ್ಟುಕೊಂಡು, ನಂತರ ತಮ್ಮ ತೋಟದಲ್ಲಿ ಹೂತಿಟ್ಟಿದ್ದರು ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದುಬಂದಿದೆ.
ಸದ್ಯ ಬಂಧಿಕ ಪಾಲಕರನ್ನು ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಗರ್ಲ್​ಫ್ರೆಂಡ್​ ಜತೆ ಶಾಪಿಂಗ್​ ಮಾಡುವಾಗ ಪತ್ನಿಯ ಕೈಗೆ ಸಿಕ್ಕಿಬಿದ್ದ ಪತಿ: ಮುಂದೇನಾಯ್ತು ವಿಡಿಯೋ ನೋಡಿ…

ನವಿರಾದ ಪ್ರೇಮಕಥೆಯುಳ್ಳ ಕಂಬ್ಳಿಹುಳ ಸಿನಿಮಾ ನ.4ಕ್ಕೆ ಬಿಡುಗಡೆ: ಈ ಚಿತ್ರಕ್ಕಿದೆ ಸೆಲೆಬ್ರಿಟಿಗಳ ಸಾಥ್​

ಕಾಳಸಂತೇಲಿ ಬಡವರ ಅಕ್ಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 11 =
Remember me
