ಅಹಮದಾಬಾದ್​:ಇತ್ತೀಚೆಗಷ್ಟೇ ಕಾಂಗ್ರೆಸ್​ ತೊರೆದ ಗುಜರಾತ್​ನ​​ ಪ್ರಭಾವಿ ಸಮುದಾಯದ ಯುವ ನಾಯಕ ಹಾರ್ದಿಕ್​ ಪಟೇಲ್​​, ಇಂದು (ಜೂ.2) ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಗಾಂಧಿನಗರದ ಬಿಜೆಪಿ ಕಚೇರಿಯಲ್ಲಿ ಕೇಸರಿ ಟೋಪಿ ಮತ್ತು ಶಾಲು ನೀಡಿ ಹಾರ್ದಿಕ್​ ಪಟೇಲ್​ರನ್ನು ಬಿಜೆಪಿ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು.
ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಹಾರ್ದಿಕ್​ ಪಟೇಲ್​, ರಾಷ್ಟ್ರೀಯ ಹಿತಾಸಕ್ತಿ, ಪ್ರಾದೇಶಿಕ ಹಿತಾಸಕ್ತಿ ಮತ್ತು ಸಾಮಾಜಿಕ ಹಿತಾಸಕ್ತಿಯ ಭಾವನೆಗಳೊಂದಿಗೆ ನಾನು ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸೇವೆಯಲ್ಲಿ ನಾನು ಸಣ್ಣ ಸೈನಿಕನಾಗಿ ಸೇವೆ ಸಲ್ಲಿಸುತ್ತೇನೆ ಎಂದಿದ್ದಾರೆ.
28 ವರ್ಷದ ಹಾರ್ದಿಕ್ ಪಟೇಲ್​, 2015ರಲ್ಲಿ ಗುಜರಾತ್​ನಲ್ಲಿ ಪಟೇಲ್ ಸಮುದಾಯದ ಮೀಸಲಾತಿ ಚಳವಳಿ ಮುನ್ನಡೆಸುವ ಮೂಲಕ ಮುನ್ನೆಲೆಗೆ ಬಂದಿದ್ದರು. 2019ರಲ್ಲಿ ಕಾಂಗ್ರೆಸ್​ನ ರಾಷ್ಟ್ರನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರು. ಪ್ರಭಾವಿ ಯುವ ನಾಯಕ ಎಂದೇ ಗುರುತಿಸಿಕೊಂಡಿದ್ದ ಹಾರ್ದಿಕ್ ಕಳೆದ ತಿಂಗಳು 18ರಂದು ಕಾಂಗ್ರೆಸ್​ ರಾಜೀನಾಮೆ ನೀಡಿದರು. ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.(ಏಜೆನ್ಸೀಸ್​)
ಹಾಕಿ ವಿಶ್ವಕಪ್‌ಗೆ ಭಾರತ ತಂಡಕ್ಕೆ ಶ್ರೀಜೇಶ್​ರಂತಹ ಗೋಲ್‌ಕೀಪರ್ ಅಗತ್ಯವಿದೆ: ದಿಲೀಪ್ ಟಿರ್ಕಿ

ಕಾಶ್ಮೀರದಲ್ಲಿ ಉಗ್ರರ ಗುಂಡೇಟಿಗೆ ಬ್ಯಾಂಕ್​ ಮ್ಯಾನೇಜರ್ ಬಲಿ​: ಹಿಂದುಗಳೇ ಟಾರ್ಗೆಟ್​, ಆತಂಕದಲ್ಲಿ ಜನರು

ಕಾಂಗ್ರೆಸ್​ ವಿರುದ್ಧ ಸಿಡಿದೆದ್ದ ಮುಖ್ಯಮಂತ್ರಿ ಚಂದ್ರು! ರಾಜೀನಾಮೆಗೆ ಕಾರಣ ಬಿಚ್ಚಿಡುತ್ತಲೇ ಪರ್ಯಾಯ ವ್ಯವಸ್ಥೆ ಬಗ್ಗೆ ಪ್ರಸ್ತಾಪ

Sign in to your account
Please enter an answer in digits:three × two =
Remember me
