ಗುಜರಾತ್​:ಪ್ರೇಯಸಿ ಜತೆ ಲೈಂಗಿಕ ಸಂಭೋಗ ನಡೆಸುವಾಗ ಆಕೆ ಗರ್ಭಿಣಿ ಆಗುವುದನ್ನು ತಡೆಯಲೆಂದು ಪ್ರಿಯಕರ ತನ್ನ ಗುಪ್ತಾಂಗಕ್ಕೆ ಗಮ್​ ಹಾಕಿ ಅಂಟಿಸಿಕೊಂಡು ಮೃತಪಟ್ಟಿರುವ ವಿಚಿತ್ರ ಪ್ರಸಂಗ ಗುಜರಾತಿನ ಅಹಮದಾಬಾದ್​ನಲ್ಲಿ ನಡೆದಿದೆ.
ಫತೇಹವಾಡಿ ಏರಿಯಾದ ಸಲ್ಮಾನ್​ ಮಿರ್ಜಾ (25) ತನ್ನ ಗರ್ಲ್​ಫ್ರೆಂಡ್​ ಜತೆ ಜೂನ್​ 22ರಂದು ಜುಹಾಪುರಾದ ಏರಿಯಾದಲ್ಲಿರುವ ಹೋಟೆಲ್​ ಒಂದಕ್ಕೆ ತೆರಳಿದ್ದಾನೆ. ಡ್ರಗ್ಸ್​ ವ್ಯಸನಿಯಾಗಿದ್ದ ಇಬ್ಬರು ಅದೇ ಅಮಲಿನಲ್ಲಿ ಲೈಂಗಿಕ ಸಂಭೋಗ ನಡೆಸಲು ಬಯಸಿದ್ದರು. ಆದರೆ, ಕಾಂಡೋಮ್​ ಸಿಗದಿದ್ದಾಗ ಬಾಯ್​ಫ್ರೆಂಡ್​ ತನ್ನ ಗುಪ್ತಾಂಗಕ್ಕೆ ಗಮ್​ ಅಂಟಿಕೊಂಡಿದ್ದಾನೆ.
ಮರುದಿನ ಬೆಳಗ್ಗೆ ಮಿರ್ಜಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆರೋಗ್ಯ ಹದಗೆಟ್ಟಿದ್ದರಿಂದ ಗಾಬರಿಗೊಂಡ ಆತನ ಗರ್ಲ್​ಫ್ರೆಂಡ್​ ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.
ಇದಾದ ಬಳಿಕ ಜೂನ್​ 25ರಂದು ಮಿರ್ಜಾ ಸಂಬಂಧಿಯೊಬ್ಬ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಎದುರು ನೋಡುತ್ತಿದ್ದಾರೆ. ಪ್ರಾಥಮಿಕ ವರದಿಯ ಪ್ರಕರಾರ ಗುಪ್ತಾಂಗಕ್ಕೆ ಗಮ್​ ಅಂಟಿಸಿಕೊಂಡಿದ್ದರಿಂದ ಆತ ಮೃತಪಟ್ಟಿದ್ದಾನೆಂದು ಹೇಳಲಾಗಿದೆ.(ಏಜೆನ್ಸೀಸ್​)
ಸಂಸದ ನನ್ನ ಮೇಲೆ ಅತ್ಯಾಚಾರ ಮಾಡಿದ್ರು: ಸುಪ್ರೀಂಕೋರ್ಟ್​ ಗೇಟ್​ ಬಳಿ ಬೆಂಕಿ ಹಚ್ಚಿಕೊಂಡಿದ್ದ ಸಂತ್ರಸ್ತೆ ಸಾವು

ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ…; ಧ್ರುವ ಸರ್ಜಾ-ಪ್ರೇಮ್ ಕಾಂಬಿನೇಷನ್

ಅನ್ನಭಾಗ್ಯ ಅಕ್ಕಿ ಆಫ್ರಿಕಾ ಪಾಲು!; ಬಡವರ ಪಡಿತರಕ್ಕೆ ಕನ್ನ, ಬೃಹತ್ ದಂಧೆ ಬಯಲಿಗೆಳೆದ ಆಹಾರ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
