ದಿಸ್ಪುರ್​​/ಅಹಮದಾಬಾದ್​:ವಿವಾದಿತ ಟ್ವೀಟ್​ ಆರೋಪದ ಹಿನ್ನೆಲೆಯಲ್ಲಿ ಗುಜರಾತ್​ ಕಾಂಗ್ರೆಸ್​ ನಾಯಕ ಹಾಗೂ ವಡ್ಗಾಮ್​ ಕ್ಷೇತ್ರದ ಶಾಸಕ ಜಿಗ್ನೇಶ್​ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾತ್ರಿ 11.30ರ ಸುಮಾರಿಗೆ ಪಲಂಪುರ್​ ಸರ್ಕ್ಯೂಟ್​ ಹೌಸ್​ನಲ್ಲಿ ಬಂಧಿಸಲಾಗಿದೆ.
ಜಿಗ್ನೇಶ್​ ಮೇವಾನಿ ಬಂಧನವಾಗಿರುವ ಸುದ್ದಿಯನ್ನು ಅವರ ಬೆಂಬಲಿಗರು ಖಚಿತಪಡಿಸಿದ್ದಾರೆ. ಆದರೆ, ಬಂಧಿಸವ ವೇಳೆ ಪೊಲೀಸರ ಬಳಿ ಎಫ್​ಐಆರ್​ ಪ್ರತಿ ಇರಲಿಲ್ಲ ಎಂದು ಬೆಂಬಲಿಗರು ಆರೋಪ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಜಿಗ್ನೇಶ್​ ಮೇವಾನಿ ಟ್ವೀಟ್​ ಒಂದನ್ನು ಮಾಡಿದ್ದರು. ಈ ಟ್ವೀಟ್​ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಮಾಡಿರುವ ಸಂಚು ಹಾಗೂ ಸಮುದಾಯವನ್ನು ಅವಮಾನಿಸಿ ಶಾಂತಿಯ ವಾತಾವರಣವನ್ನು ಕದಡಲು ಯತ್ನಿಸಿದ್ದಾರೆ ಎಂದು ಅಸ್ಸಾಂ ಪೊಲೀಸರು, ಜಿಗ್ನೇಶ್ ಮೇವಾನಿ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸದ್ಯ ಜಿಗ್ನೇಶ್ ಮೇವಾನಿ ಅವರನ್ನು ಅಹಮದಾಬಾದ್‌ಗೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಅಸ್ಸಾಂ ಪೊಲೀಸರು ಅವರನ್ನು ರೈಲಿನಲ್ಲಿ ಗುವಾಹಟಿಗೆ ಕರೆದೊಯ್ಯಲಿದ್ದಾರೆ. ಇದರ ನಡುವೆ ಮೇವಾನಿ ಬಂಧನದ ವಿರುದ್ಧ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ಇಂದು (ಏ. 21) ರಾಷ್ಟ್ರ ರಾಜಧಾನಿಯಲ್ಲಿ ‘ಸಂವಿಧಾನ ಉಳಿಸಿ, ದೇಶ ಉಳಿಸಿ’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಲಿದ್ದಾರೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಜಿಗ್ನೇಶ್ ಮೇವಾನಿ ಬಂಧನವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. (ಏಜೆನ್ಸೀಸ್​)
‘ರಾಜ್ಯದಲ್ಲಿ ಲೋಡ್​ ಶೆಡ್ಡಿಂಗ್​ ಪ್ರಶ್ನೆಯೇ ಇಲ್ಲ, ಕಲ್ಲಿದ್ದಲು ಕೊರತೆ ಎಂಬುದು ಶುದ್ಧ ಸುಳ್ಳು’

ಏ.26ಕ್ಕೆ ನನ್ನ ಮದ್ವೆ ಇದೆ, ದಯವಿಟ್ಟು ಎಲ್ಲಿಗಾದ್ರೂ ಓಡೋಗೋಣ… ಸಖತ್​ ವೈರಲ್​ ಆಗ್ತಿದೆ ಪ್ರಿಯತಮೆ ಸಂದೇಶ

ಎಸ್​ಐ ನೇಮಕ ಅಕ್ರಮಕ್ಕೆ ಓಎಂಆರ್ ಸಾಕ್ಷ್ಯ!; 50 ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ, ಮತ್ತೆ 50 ಮಂದಿ ವಿಚಾರಣೆಗೆ ನೋಟಿಸ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
