ಟಿ.ನಗರ:ಗೋಣಿ ಚೀಲದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಕೊಂದು ಮೂಟೆ ಕಟ್ಟಿ ಎಸೆಯಲಾಗಿದೆ ಎಂಬ ವಾಟ್ಸ್​ಆ್ಯಪ್ ಸಂದೇಶ ಸಂಚಲನ ಸೃಷ್ಟಿಸಿದ ಘಟನೆ ತಮಿಳುನಾಡಿನ ನಾಗರ್ಕೋಯಿಲ್ ರೈಲು ನಿಲ್ದಾಣದಲ್ಲಿ ನಡೆದಿದೆ.
ರೈಲು ನಿಲ್ದಾಣದ ಮೊದಲನೇ ಫ್ಲಾಟ್​ಫಾರ್ಮ್​ನಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿದೆ. ರೈಲುಗಳು ಕೇವಲ ಎರಡನೇ ಫ್ಲಾಟ್​ಫಾರ್ಮ್​ನಲ್ಲಿ ಮಾತ್ರ ಓಡಾಡುತ್ತಿದೆ. ಇಂದು ಬೆಳಗ್ಗೆ ಅನೇಕ ಮಂದಿ ರೈಲು ನಿಲ್ದಾಣದಲ್ಲಿ ಓಡಾಡುವಾಗ ಇಡೀ ದೇಹ ಹಳದಿ ಬಣ್ಣದ ಗೋಣಿ ಚೀಲದಲ್ಲಿ ಸುತ್ತಿರುವಂತೆ ಫ್ಲಾಟ್​ಫಾರ್ಮ್​ ಬಳಿ ಕಾಣುತ್ತದೆ.
ಇದನ್ನು ನೋಡಿದ ಮಂದಿ ಯಾರದ್ದೋ ಕೊಲೆಯಾಗಿರಬಹುದೆಂದು ತಮ್ಮಷ್ಟೇ ತಾವೇ ಊಹಿಸಿಕೊಂಡು ಫೋಟೋ ತೆಗೆದು ವಾಟ್ಸ್​ಆ್ಯಪ್​ನಲ್ಲಿ ಹರಿಬಿಡುತ್ತಾರೆ. ಈ ಮಾಹಿತಿ ಪೊಲೀಸರಿಗೂ ತಲುಪಿ ಘಟನಾ ಸ್ಥಳಕ್ಕೆ ಪರಿಶೀಲನೆಗೆಂದು ಪೊಲೀಸರು ತೆರಳುತ್ತಾರೆ.
ಇದನ್ನೂ ಓದಿರಿ:ನೀನು ಸತ್ತ ಮೇಲೆ ಮಗ ನನ್ನ ಜತೆ ಇರಬೇಕು ಅಂತಿದ್ದಾರೆ ವಿಚ್ಛೇದಿತ ಪತಿ- ಹೀಗೆ ಕಂಡೀಷನ್​ ಹಾಕ್ಬೋದಾ?
ಇನ್ನೇನು ಗೋಣಿ ಚೀಲದ ಕಡೆ ಪೊಲೀಸರು ಹೋಗಬೇಕು ಎನ್ನುವಷ್ಟರಲ್ಲಿ ಓರ್ವ ವ್ಯಕ್ತಿ ದಿಢೀರನೇ ಗೋಣಿ ಚೀಲದಿಂದ ಮೇಲೆದ್ದು ಬರಿಗಾಲಲ್ಲಿ ಸುಮ್ಮನೇ ನಡೆದುಕೊಂಡು ಹೋಗುತ್ತಾನೆ. ಈ ವೇಳೆ ಅಲ್ಲಿ ನೆರೆದಿದ್ದ ಮಂದಿ ಒಬ್ಬರಿಗೊಬ್ಬರ ಮುಖವನ್ನು ನೋಡಿಕೊಂಡು ನಗುತ್ತಾರೆ.
ಸ್ಥಳಕ್ಕೆ ಬಂದ ಪೊಲೀಸರು ಸಹ ಒಂದು ವಾಟ್ಸ್​ಆ್ಯಪ್​ ಸಂದೇಶ ಏನೆಲ್ಲಾ ಮಾಡಿತು ನೋಡಿ ಎಂದು ಸುಮ್ಮನ್ನೇ ನಕ್ಕು ಬಂದ ದಾರಿಯಲ್ಲೇ ಹಿಂದಿರುತ್ತಾರೆ. ಅಂದಹಾಗೆ ಗೋಣಿಚೀಲದಲ್ಲಿ ಇದ್ದಿದ್ದ ವ್ಯಕ್ತಿ ತನ್ನ ಇಡೀ ದೇಹವನ್ನು ಮುದರಿಕೊಂಡು ಮಲಗಿದ್ದು, ಗೋಣಿ ಚೀಲ ಕಟ್ಟಿದಂತೆ ಭಾಸವಾಗಿ, ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ.(ಏಜೆನ್ಸೀಸ್​)

ಇನ್ನೂ ಸುಂದರಿಯಾಗಲು ಚಿಕಿತ್ಸೆ ಪಡೆದ ಖ್ಯಾತ ನಟಿ ಕನ್ನಡಿ ನೋಡಿದಾಗ ಮೂರ್ಛೆ ಹೋದಳು!

ಪಿಡಿಎಫ್ ಜನಕ, ಅಡೋಬ್ ಸಹ ಸಂಸ್ಥಾಪಕ ಚಾರ್ಲ್ಸ್ ಇನ್ನಿಲ್ಲ

ಸರ್ಕಾರಿ ಕಚೇರಿಯಲ್ಲೇ ಮಹಿಳೆ ಜತೆ ಸರಸ: ವಿಡಿಯೋ ವೈರಲ್​ ಬೆನ್ನಲ್ಲೇ ರೆವಿನ್ಯೂ ಇನ್ಸ್​ಪೆಕ್ಟರ್ ಅರೆಸ್ಟ್​!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:nineteen + eight =
Remember me
