ಗುಂಟೂರು:ಇತ್ತೀಚಿನ ದಿನಗಳಲ್ಲಿ ಸಾಲದ ಆ್ಯಪ್​ಗಳು​ ಮತ್ತು ಆನ್​ಲೈನ್​ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್​ಲೈನ್​ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಬಲಿಯಾಗುತ್ತಿದ್ದಾರೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಅಮಾಯಕ ಜೀವಗಳು ಬಲಿಯಾಗುತ್ತವೆ.
ತಾಜಾ ಬೆಳವಣಿಗೆ ಒಂದರಲ್ಲಿ ಸಾಲದ ಆ್ಯಪ್​ ಆಪರೇಟರ್​ಗಳ ಕಿರುಕುಳವನ್ನು ಸಹಿಸಲಾರದೇ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ವಿವಾಹಿತೆಯೊಬ್ಬಳು ಸಾವಿನ ಹಾದಿ ಹಿಡಿದಿದ್ದಾಳೆ. ಸೋಮವಾರ ಈ ಘಟನೆ ನಡೆದಿದೆ.
ವಿವರಣೆಗೆ ಬರುವುದಾದರೆ, ಗುಂಟೂರು ಜಿಲ್ಲೆಯ ಮಂಗಳಗಿರಿ ಮಂಡಲದ ಚಿನ್ನಕಾಕನಿ ಗ್ರಾಮದ ನಿವಾಸಿ ಬಂಡಪಲ್ಲಿ ಪ್ರತ್ಯುಷಾ ಎಂಬುವರು ಇಂಡಿಯನ್​ ಬುಲ್ಸ್​ ಮತ್ತು ರುಪೆಕ್ಸ್​ ಸಾಲದ ಆ್ಯಪ್​ನಲ್ಲಿ 20 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದರು. ಇದಕ್ಕೆ ಅತ್ಯಧಿಕ ಬಡ್ಡಿದರ ವಿಧಿಸಿದ್ದ ಆಪರೇಟರ್​ಗಳು ಪ್ರತ್ಯುಷಾರಿಂದ 2 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದರು.
ಇಷ್ಟಾದರೂ ಸುಮ್ಮನಾಗದ ಆ್ಯಪ್​ ಏಜೆಂಟ್​ಗಳು, ಪ್ರತ್ಯುಷಾ ಇನ್ನೂ ಸಾಲ ತೀರಿಸಿಲ್ಲ ಅಂತಾ ತಮ್ಮ ಸಾಮಾನ್ಯ ವಿಧಾನದಲ್ಲಿ ಸೈಬರ್​ ಕ್ರಿಮಿನಲ್​ ಚಟುವಟಿಕೆ ಮೂಲಕ ಆಕೆಯನ್ನು ಹೆದರಿಸಲು ಆರಂಭಿಸಿದರು. ಸಾಲ ಮರು ಪಾವತಿ ಮಾಡದಿದ್ದರೆ, ಸಂಬಂಧಿಕರಿಗೆ ಸಾಲದ ಮಾಹಿತಿ ನೀಡಲಾಗುವುದು ಎಂದು ಹೆದರಿಸಿದರು. ಅಲ್ಲದೆ, ವಾಟ್ಸ್​ಆ್ಯಪ್​ ಮೂಲಕ ಅಶ್ಲೀಲ ಸಂದೇಶ ರವಾನಿಸಿದರು. ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಸಿದರು.
ಆ್ಯಪ್​ ಏಜೆಂಟರ್​ ನಿರಂತರ ಕಿರುಕುಳವನ್ನು ಸಹಿಸದ ಪ್ರತ್ಯುಷಾ ಸೋಮವಾರ (ಜು.11) ತಮ್ಮ ಮನೆಯ ಮೇಲಿರುವ ಫ್ಲೆಕ್ಸ್​ ಹೋರ್ಡಿಂಗ್​ ಫ್ರೇಮ್​ಗೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಪಾಲಕರಿಗೆ ಮತ್ತು ಪತಿಗೆ ಸೆಲ್ಫಿ ವಿಡಿಯೋ ಮಾಡಿರುವ ಪ್ರತ್ಯಷಾ, ನಡೆದ ಎಲ್ಲ ಘಟನೆಯನ್ನು ವಿವರಿಸಿದ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
ವಿಡಿಯೋ ನೋಡಿದ ಪ್ರತ್ಯುಷಾ ಪತಿ, ಮಂಗಳಗಿರಿ ಪೊಲೀಸ್​ ಠಾಣೆಗೆ ತೆರಳಿ ಸಾಲದ ಆ್ಯಪ್​ ಮತ್ತು ಏಜೆಂಟ್​ಗಳ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆ ಅಡಿಯಲ್ಲಿರುವ ಸೂಕ್ತ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಹೀಗೆ ಸುಮ್ಮನಿದ್ದರೆ ಪ್ಯಾನ್​ ಇಂಡಿಯಾ ಕ್ರೇಜ್​ ಕಣ್ಮರೆಯಾಗಲಿದೆ… ಯಶ್​ ತಕ್ಷಣ ಈ ಕೆಲ್ಸ ಮಾಡಲೇಬೇಕಿದೆ!

PSI ಚಿತ್ರಹಿಂಸೆಗೆ ಅಮಾಯಕ ಬಲಿ: ವಿಜಯಪುರದ ಯುವಕನ ಈ ವಿಡಿಯೋ ನೋಡ್ತಿದ್ರೆ ಕರುಳು ಚುರ್​ ಅನ್ನುತ್ತೆ

ಗಂಡನಿಲ್ಲದ ವೇಳೆ ಮಹಿಳೆಯ ಮನೆಗೆ ನುಗ್ಗಿ ರೇಪ್​: ಬಂಧಿತ ಸಿಐ​ ಹಿನ್ನೆಲೆ ನೋಡಿ ತನಿಖಾಧಿಕಾರಿಗಳು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 15 =
Remember me
