ಕಾಬುಲ್​:ಅಫ್ಘಾನಿಸ್ತಾನ ಆಕ್ರಮಿಸಿಕೊಂಡಿರುವ ತಾಲಿಬಾನಿಗಳು ಸರ್ಕಾರ ರಚನೆಗೆ ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಕಾಬುಲ್​ ನಿವಾಸಿಗಳಿಗೆ ತಾಲಿಬಾನಿಗಳು ಕರೆಯೊಂದನ್ನು ನೀಡಿದ್ದು, ನಿಮ್ಮ ಬಳಿಯಿರುವ ಸರ್ಕಾರಿ ವಾಹನ, ಸಶ್ತ್ರಾಶ್ತ್ರ ಹಾಗೂ ಮದ್ದು ಗುಂಡುಗಳನ್ನು ಹಿಂತಿರುಗಿಸುವಂತೆ ತಾಲಿಬಾನ್​ ವಕ್ತರಾ ಝಬಿಹುಲ್ಲಾ ಮುಜಾಹಿದ್ ಕಾಬುಲ್​ ನಿವಾಸಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಸರ್ಕಾರಿ ಆಸ್ತಿಗಳು ಸೇರಿದಂತೆ ಯಾವೆಲ್ಲ ವಸ್ತುಗಳು ಸರ್ಕಾರಕ್ಕೆ ಸೇರಿದೆವೆಯೋ ಅದನ್ನೆಲ್ಲ ಮರಳಿಸುವಂತೆ ತಾಲಿಬಾನ್​ ಕರೆ ನೀಡಿದೆ. ಒಂದು ವೇಳೆ ಹಿಂತಿರುಗಿಸದಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನು ಸಹ ತಾಲಿಬಾನಿಗಳು ನೀಡಿದ್ದಾರೆ.
ಇದರೊಂದಿಗೆ ಎಲ್ಲ ಸರ್ಕಾರಿ ಅಧಿಕಾರಿಗಳು ಕಚೇರಿಗೆ ಮರಳಿ ಕೆಲಸ ಆರಂಭಿಸುವಂತೆಯೂ ಸಂದೇಶ ರವಾನೆಯಾಗಿದೆ. ಇನ್ನೇನು ಅಮೆರಿಕ ಸ್ಥಳಾಂತರ ಪ್ರಕ್ರಿಯೆ ಮುಗಿಯಲಿದ್ದು, ಅಮೆರಿಕ ಯೋಧರು ಆಫ್ಘಾನ್​ ನೆಲವನ್ನು ಶಾಶ್ವತವಾಗಿ ತೊರೆಯಲಿದ್ದಾರೆ. ಇದಾದ ಬಳಿಕ ತಾಲಿಬಾನಿಗಳು ಸರ್ಕಾರ ರಚಿಸುವ ಪ್ಲಾನ್​ ಮಾಡಿಕೊಂಡಿದೆ.
ಇನ್ನು ತಾಲಿಬಾನಿಗಳ ಆಡಳಿತವನ್ನು ನೆನೆದು ಭಯಭೀತಗೊಂಡಿರುವ ಆಫ್ಘಾನ್ನರು ಬೇರೆ ಬೇರೆ ದೇಶಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ಲಕ್ಷಾಂತರ ಮಂದಿ ಕಾಬುಲ್​ ವಿಮಾನ ನಿಲ್ದಾಣ ಮುಂದೆಯೇ ತಮ್ಮ ಅವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕಾಬುಲ್​ ವಿಮಾನ ನಿಲ್ದಾಣದಲ್ಲಿ ಅಮೆರಿಕ ಸೇನೆಯನ್ನು ಗುರಿಯಾಗಿರಿಸಿ ಐಎಸ್​-ಕೆ ಉಗ್ರ ಸಂಘಟನೆ ಮತ್ತೊಮ್ಮೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಕಾಬುಲ್​ನಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ.(ಏಜೆನ್ಸೀಸ್​)
ಮೈಸೂರು ಗ್ಯಾಂಗ್​ರೇಪ್ ಕೇಸ್​: ಕೃತ್ಯಕ್ಕೆ ಕಾರಣ ಬಿಚ್ಚಿಟ್ಟ ಆರೋಪಿಗಳ ಮಾತು ಕೇಳಿ ಪೊಲೀಸರೇ ಶಾಕ್!

ಗುಜರಾತ್‌ನಲ್ಲಿ ಸಂಸ್ಕೃತ ಭಾಷೆ ಉಳಿಸುವ ಕೆಲಸ- ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮಾಹಿತಿ

ದಂಡ ವಸೂಲಿ ಮಾಡ್ತಿದ್ದ ಪೊಲೀಸರಿಗೆ ಕ್ಲಾಸ್​: ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ವಿರುದ್ಧ ತಿರುಗಿಬಿದ್ದ ಕೆಲ ಪೊಲೀಸರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + sixteen =
Remember me
