ನವದೆಹಲಿ:ಯುದ್ಧ ಪೀಡಿತ ಯೂಕ್ರೇನ್​ನಿಂದ ಮಗನನ್ನು ಸುರಕ್ಷಿತವಾಗಿ ತವರಿಗೆ ಕರೆದುಕೊಂಡು ಬಂದ ಸರ್ಕಾರಕ್ಕೆ ಕಾಶ್ಮೀರ ಮೂಲದ ಸಂಜಯ್​ ಪಂಡಿತ ಎಂಬುವರು ಧನ್ಯವಾದ ತಿಳಿಸಿದ್ದಾರೆ. ಯೂಕ್ರೇನ್​ನಿಂದ ಮರಳಿದ್ದು ನನ್ನ ಮಗನಲ್ಲ ಪ್ರಧಾನಿ ಮೋದಿ ಅವರ ಮಗನೆಂದು ಹೇಳಲು ಬಯಸುತ್ತೇನೆಂದು ಸಂಜಯ್​ ಇದೇ ಸಂದರ್ಭದಲ್ಲಿ ಭಾವುಕ ಮಾತುಗಳನ್ನಾಡಿದರು.
ಯೂಕ್ರೇನ್​ನ ಸುಮಿಯ ಸ್ಥಿತಿಯನ್ನು ನೋಡಿ ನಾವು ಭರವಸೆ ಕಳೆದುಕೊಂಡಿದ್ದೆವು. ಇಂತಹ ಸಂದಿಗ್ಧ ಸಮಯದಲ್ಲಿ ನನ್ನ ಮಗನನ್ನು ಸುರಕ್ಷಿತವಾಗಿ ತವರಿಗೆ ಕರೆತಂದಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಸಂಜಯ್​ ಪಂಡಿತ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಮಗನನ್ನು ಬರಮಾಡಿಕೊಂಡ ಬಳಿಕ ಮಾಧ್ಯಮಗಳಿಗೆ ಹೇಳಿದರು.
ನಿನ್ನೆ ಬೆಳಗ್ಗೆ ಯೂಕ್ರೇನ್​ನಿಂದ ಬಂದ ತಮ್ಮ ಮಕ್ಕಳನ್ನು ಬರಮಾಡಿಕೊಳ್ಳಲು ಪಾಲಕರು ದೆಹಲಿ ವಿಮಾನ ನಿಲ್ದಾಣದಲ್ಲಿ ಸುಮಾರು 5 ರಿಂದ 6 ಗಂಟೆಗಳ ಕಾದು ಕುಳಿತಿದ್ದರು. ಮಕ್ಕಳು ಬರುತ್ತಿದ್ದಂತೆ ಅವರ ಮುಖಗಳನ್ನು ನೋಡಿ ಪಾಲಕರ ಮುಖದಲ್ಲಿ ನಗು ಅರಳಿತು. ಈ ಸಂದರ್ಭದಲ್ಲಿ ಸಂಜಯ್​ ಪಂಡಿತ ಅವರು ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಈಶಾನ್ಯ ಯೂಕ್ರೇನ್‌ನ ಯುದ್ಧ ಪೀಡಿತ ನಗರವಾದ ಸುಮಿಯಿಂದ ಹೆಚ್ಚಾಗಿ ವಿದ್ಯಾರ್ಥಿಗಳನ್ನೇ ಒಳಗೊಂಡ 674 ಜನರನ್ನು ಹೊತ್ತ ಮೂರು ವಿಮಾನಗಳು ಶುಕ್ರವಾರ ದೆಹಲಿಗೆ ಬಂದಿಳಿಯಿತು. ಬಂದವರು ಯೂಕ್ರೇನ್​ನಲ್ಲಿ ತಾವು ಅನುಭವಿಸಿದ ಭಯಾನಕತೆಯನ್ನು ವಿವರಿಸಿದರು. ಬಂದವರು ಭಾರತ ಹಾಗೂ ಪ್ರಧಾನಿ ಪರ ಘೋಷಣೆಯನ್ನು ಕೂಗಿದರು.(ಏಜೆನ್ಸೀಸ್​)
#WATCHA tearful Sanjay Pandita from Srinagar, Kashmir welcomes his son Dhruv on his return from Sumy,#Ukraine, says, “I want to say that it’s Modiji’s son who has returned, not my son. We had no hopes given the circumstances in Sumy. I am thankful to GoI for evacuating my son.”pic.twitter.com/ygqOVk5PGm
— ANI (@ANI)March 11, 2022

2009ರಲ್ಲಿ ಕಂಗನಾ ಹೇಳಿದ್ದ ಗುಟ್ಟನ್ನು ರಟ್ಟು ಮಾಡಿದ ಪ್ರಭಾಸ್​: ರಾಧೆಶ್ಯಾಮ್​ ಚಿತ್ರಕ್ಕೂ ಆ ಗುಟ್ಟಿಗೂ ಇದೆ ಲಿಂಕ್!​

ಹುಡ್ಗೀರಿಗೆ ಪೋನಿ ಹೇರ್​ಸ್ಟೈಲ್​​​ ಬ್ಯಾನ್​, ಬಿಳಿ ಬಣ್ಣದ ಒಳಉಡುಪಿಗೆ ಮಾತ್ರ ಅನುಮತಿ: ಇಲ್ಲಿದೆ ಶಾಕಿಂಗ್​ ಕಾರಣ

ಮೊದಲ ಬಾರಿ ಬಿಕಿನಿಯಲ್ಲಿ ಕಾಣಿಸಿಕೊಂಡ ಸೌತ್​ ಬ್ಯೂಟಿ ವರು! ವಿಡಿಯೋ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + seven =
Remember me
