ಮುಂಬೈ:ಹೋಟೆಲ್​ ಒಂದರಲ್ಲಿ ಕ್ವಾರಂಟೈನ್​ನಲ್ಲಿದ್ದ ಕೋವಿಡ್​ ರೋಗಿಯನ್ನು ಮಂಚಕ್ಕೆ ಕರೆದ ವೈದ್ಯಕೀಯ ಸಂಯೋಜಕನನ್ನು ಬಂಧಿಸಿರುವ ಘಟನೆ ಮುಂಬೈನ ಅಂಧೇರಿ ಉಪನಗರದಲ್ಲಿ ಬುಧವಾರ ನಡೆದಿದೆ.
ವೈದ್ಯಕೀಯ ಸಂಯೋಜಕನ ಹಿಂಸೆಯನ್ನು ತಾಳಲಾರದೇ ಸಂತ್ರಸ್ತೆ ಸೋಮವಾರ ಮುಂಬೈ ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿರಿ:ಮಿಂಚಿದ ಮ್ಯಾಕ್ಸ್‌ವೆಲ್, ಶಾಬಾಜ್ ಅಹ್ಮದ್; ಆರ್‌ಸಿಬಿಗೆ ಸತತ 2ನೇ ಜಯ
ಕರೊನಾ ವೈರಸ್​ ಪಾಸಿಟಿವ್​ ಬಳಿಕ ಸಂತ್ರಸ್ತೆ ಅಂಧೇರಿಯ ಎಂಐಡಿಸಿ ಏರಿಯಾದ ಹೋಟೆಲ್​ ಒಂದರಲ್ಲಿ ಕ್ವಾರಂಟೈನ್​ನಲ್ಲಿದ್ದರು. ಈ ವೇಳೆ ಆರೋಗ್ಯ ವಿಚಾರಿಸಲು ಅಲ್ಲಿಗೆ ಬರುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದಲ್ಲದೆ, ಸೆಕ್ಸ್​ಗೆ ಸಹಕರಿಸು ಎಂದು ಒತ್ತಾಯಿಸುತ್ತಿದ್ದ ಎಂದು ಆರೋಪಿಸಿದ್ದಾಳೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್​ 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಅಪರಾಧದ ಒತ್ತಡ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿ, 14 ದಿನಗಳ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.(ಏಜೆನ್ಸೀಸ್​)
ಕತ್ತೆ ಹೊತ್ತು ನಡೆಯುತ್ತಿರುವ ಯೋಧ: ವೈರಲ್​​ ಫೋಟೋ ಹಿಂದಿನ ನಿಜವಾದ ಕತೆ ಮನಕಲಕುವಂತಿದೆ!

ಸಂದರ್ಶನ: ಮಸ್ಕಿಯಲ್ಲಿ ಅಭಿವೃದ್ಧಿಗೆ ಮತ, ಅನುಕಂಪಕ್ಕಲ್ಲ: ಬಿವೈ ವಿಜಯೇಂದ್ರ

ಮದುವೆ ನಿಶ್ಚಿತಾರ್ಥ ಬೆನ್ನಲ್ಲೇ ಖಾಸಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
