ಕೊಚ್ಚಿ:ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿರುವ ಕೇರಳ ನ್ಯಾಯಲಯ, ಜಾಮೀನು ನೀಡಲು ಕೊಟ್ಟಿರುವ ಕಾರಣ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅರ್ಜಿದಾರಳು ಲೈಂಗಿಕವಾಗಿ ಪ್ರಚೋದನಾಕಾರಿಯಾದ ಉಡುಗೆ ಧರಿಸಿದ್ದರಿಂದ ಲೈಂಗಿಕ ದೌರ್ಜನ್ಯ ಪ್ರಕರಣವು ಪ್ರಾಥಮಿಕವಾಗಿ ನಿಲ್ಲುವುದಿಲ್ಲ ಎಂದು ಹೇಳುವ ಮೂಲಕ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನನ್ನು ನೀಡಿದೆ.
ವಿವರಣೆಗೆ ಬರುವುದಾದರೆ, ಆಗಸ್ಟ್​ 12ರಂದು ಕೇರಳದ ಕೊಯಿಕ್ಕೋಡ್​ನ ಹೆಚ್ಚುವರಿ ನ್ಯಾಯಾಲಯವು 74 ವರ್ಷದ ಸಾಮಾಜಿಕ ಕಾರ್ಯಕರ್ತ ಹಾಗೂ ಲೇಖಕ ಚಂದ್ರನ್ ಎಂಬುವರ ಜಾಮೀನು ಅರ್ಜಿ ವಿಚಾರಣೆ ನಡೆಸಿತು. ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಚಂದ್ರನ್​ ಅವರ ಮೇಲಿದೆ. ಆರೋಪಿ ಚಂದ್ರನ್​ ಪರ ವಕೀಲರು ಜಾಮೀನು ಅರ್ಜಿಯೊಂದಿಗೆ ದೂರುದಾರ ಮಹಿಳೆಯ ಭಾವಚಿತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಫೋಟೋಗಳಲ್ಲಿ ದೂರುದಾರಳ ಕೆಲವು ಉಡುಪುಗಳು ಲೈಂಗಿಕವಾಗಿ ಪ್ರಚೋದನಕಾರಿಯಾಗಿದ್ದವು ಎಂದು ಅರ್ಜಿದಾರ ಉಲ್ಲೇಖಿಸಿದ್ದರು. ಫೋಟೋಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನ್ಯಾಯಾಲಯ, ಆರೋಪಿ ವಿರುದ್ಧ ಸೆಕ್ಷನ್ 354 ಎ ಪ್ರಾಥಮಿಕವಾಗಿ ನಿಲ್ಲುವುದಿಲ್ಲ ಎಂದು ತೀರ್ಪು ಪ್ರಕಟಿಸಿದೆ. ಅಲ್ಲದೆ, ಆರೋಪಿಗೆ ವಯಸ್ಸಾಗಿದೆ ಹಾಗೂ ದೈಹಿಕವಾಗಿ ಅಂಗವೈಕಲ್ಯವಿದೆ. ಹೀಗಾಗಿ ಆತ ಮಹಿಳೆಯನ್ನು ಬಲವಂತಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಗಮನಿಸಿ, ಜಾಮೀನು ನೀಡಿದೆ. ಈ ತೀರ್ಪು ಇದೀಗ ಸಾರ್ವಜನಿಕ ವಲಯದಲ್ಲೂ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.
ಆಪಾದಿತ ಘಟನೆಯು ಫೆಬ್ರವರಿ 2020 ರಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಯುವ ಬರಹಗಾರ್ತಿಯಾಗಿರುವ ಮಹಿಳೆಯ ಮೇಲೆ ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತ ಚಂದ್ರನ್​ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದ ಆರೋಪಿಸಿದೆ. ಆದರೆ, ಚಂದ್ರನ್​ ಅವರು ಈ ಹೇಳಿಕೆಯನ್ನು ನಿರಾಕರಿಸಿದ್ದು, ಇದು ತನ್ನ ಶತ್ರುಗಳು ಯೋಜಿಸಿದ ಸುಳ್ಳು ಪ್ರಕರಣ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಜಾಲತಾಣದಲ್ಲಿ ಪರಿಚಯವಾದಾಕೆ ಕರೆದಳು ಅಂತ ಖುಷಿಯಿಂದ ಲಾಡ್ಜ್​ಗೆ ಹೋದ ಯುವಕನಿಗೆ ಕಾದಿತ್ತು ಬಿಗ್​ ಶಾಕ್​!

ನಿಜವಾಯ್ತು ಈಕೆ ನುಡಿದ ಭವಿಷ್ಯವಾಣಿ: ಸೆಲೆಬ್ರಿಟಿಗಳಿಗೆ ನಡುಕ ಹುಟ್ಟಿಸಿದ ಹೊಸ ತಲೆಮಾರಿನ ಬಾಬಾ ವಾಂಗಾ

KRS ಡ್ಯಾಂ ಮೇಲೆ ಫೋಟೋಶೂಟ್​ ಮಾಡಿಸಿದ ಸಂಸದೆ ವಿರುದ್ಧ ಶಾಸಕ ಗರಂ! ಕಾನೂನು ಎಲ್ಲರಿಗೂ ಒಂದೇ ಕ್ರಮ ಕೈಗೊಳ್ಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 4 =
Remember me
