ಚೆನ್ನೈ:ಅವನೊಬ್ಬ ರೌಡಿ ಶೀಟರ್. ಆತನ ಹೆಸರು​ ಸಾಹುಲ್ ಹಮೀದ್ ಅಲಿಯಾಸ್ ಲೆಫ್ಟ್​ ಸಾಹುಲ್ (32). ಈತ ಕಳೆದ ವಾರ ತೆಂಕಶಿಯ ಚಿಕ್ಕ ಗುಡ್ಡದ ಚಿನ್ನ ಪೊತಾಯಿ ಪಕ್ಕದ ಹೊಂಡದಲ್ಲಿ ತಲೆಮರೆಸಿಕೊಂಡಾಗ ಸಿಕ್ಕಿಬೀಳುತ್ತೇನೆ ಎಂದು ಯಾರೂ ಊಹಿಸಿರಲಿಲ್ಲ. ಪೊಲೀಸರು ಆತನನ್ನು ಕಂಡಾಗ ಆತ ಒಂದು ಬಂಡೆಯಿಂದ ಮತ್ತೊಂದು ಬಂಡೆಗೆ ಹಾರಿ ನೀರಿಗೆ ಡೈವ್​ ಹೊಡೆದು ಪರಾರಿಯಾಗುತ್ತಿದ್ದನು. ಸಾಹುಲ್‌ನ ತಂತ್ರಗಾರಿಕೆಯನ್ನು ನೋಡಲು ಎರಡು ಡ್ರೋನ್‌ಗಳನ್ನು ಸ್ಥಳದಲ್ಲಿಯೇ ನಿಯೋಜಿಸಿದ ಪೊಲೀಸರು ಆತನನ್ನು ಬಲೆ ಬೀಳಿಸಲು ನಡೆಸಿದ ಕಾರ್ಯಾಚರಣೆ ರೋಚಕವಾಗಿತ್ತು.
ಸಾಹುಲ್​ ಕೆಸರು ಮಿಶ್ರಿತ ನೀರಿನಲ್ಲಿ ಅಡಗಿರುವುದನ್ನು ಹೆಚ್ಚಿನ ರೆಸಲ್ಯೂಶನ್ ಡ್ರೋನ್‌ಗಳು ಗುರುತಿಸಿದವು. ನಂತರ ಪೊಲೀಸರು ಎಲ್ಲಾ ಕಡೆಯಿಂದ ಅವನನ್ನು ಸುತ್ತುವರಿದು ಆತನನ್ನು ಬಂಧಿಸಿದರು. ಡ್ರೋನ್​ನಲ್ಲಿ ಸೆರೆಯಾದ ದೃಶ್ಯಗಳಲ್ಲಿ ಸಾಹುಲ್ ಕೊಳದ ನಡುವೆ ಬೆಳೆದ ದಟ್ಟವಾದ ಪೊದೆಗಳು ಮತ್ತು ಗಿಡಗಂಟಿಗಳ ನಡುವೆ ಹೊರ ಬರಲು ಯತ್ನಿಸುತ್ತಿರುವುದನ್ನು ತೋರಿಸಿತು. ಇದನ್ನು ನೋಡಿದ ನಾಲ್ವರು ಪೊಲೀಸರು ತಮ್ಮ ಪ್ಯಾಂಟ್‌ಗಳನ್ನು ಕಟ್ಟಿಕೊಂಡು ನೀರಿನ ಹೊಂಡಕ್ಕೆ ಇಳಿದು ಕೊನೆಗೂ ಸಾಹುಲ್‌ನನ್ನು ಹೊರಗೆ ಕರೆತರುವುದನ್ನು ದೃಶ್ಯಗಳಲ್ಲಿ ಕಾಣಬಹುದು.
ವಿವರಣೆಗೆ ಬರುವುದಾದರೆ, ಠಾಣೆಯ ಪೊಲೀಸ್ ಮೂಲಗಳ ಪ್ರಕಾರ, ಸಾಹುಲ್ ಹಮೀದ್ ಓರ್ವ ರೌಡಿ ಶೀಟರ್ ಆಗಿದ್ದು, ಮೂರು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಸ್ಥಳೀಯರಿಗೆ ದೈಹಿಕವಾಗಿ ಹಲ್ಲೆ ನಡೆಸಿರುವ ಆರೋಪ ಇದೆ. ಇದೇ ವೇಳೆ ಆತನ ಮೇಲೆಯೂ ಸ್ಥಳೀಯರು ಹಲ್ಲೆ ನಡೆಸಿ, ತಮಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ, ಶಾಹುಲ್ ಹಮೀದ್ ಸುಮಾರು 70 ಎಕರೆಗಳಷ್ಟು ವಿಸ್ತಾರವಾಗಿರುವ ಕೊಳ ಮತ್ತು ಜವುಗು ಭೂಮಿಯನ್ನು ಹೊಂದಿರುವ ಚಿನ್ನ ಪೊಥೈ ಪ್ರದೇಶಕ್ಕೆ ಹೋಗಿ, ಈ ಪ್ರದೇಶ ಮತ್ತು ಕೊಳವು ತನ್ನ ನಿಯಂತ್ರಣದಲ್ಲಿದೆ. ಈ ಪ್ರದೇಶವನ್ನು ಪ್ರವೇಶಿಸಲು ಅಥವಾ ದಾಟಲು ಯಾರಿಗೂ ಅವಕಾಶವಿಲ್ಲ ಎಂದು ಸ್ವಯಂ ಘೋಷಿಸಿಕೊಂಡಿದ್ದ. ಅಲ್ಲದೆ, ಆ ಪ್ರದೇಶಕ್ಕೆ ಬಂದವರಿಗೆ ಬೆದರಿಕೆ ಹಾಕುತ್ತಿದ್ದ. ಅಲ್ಲದೆ, ಹಲ್ಲೆ ಮಾಡುತ್ತಿದ್ದ. ಅನೇಕ ದಿನಗಳಿಂದ ಸಾಹುಲ್​ನ ಆಟಾಟೋಪ ಮುಂದುವರಿದುಕೊಂಡು ಬರುತ್ತಿತ್ತು. ಈ ಸಂಬಂಧ ಪೊಲೀಸ್​ ಠಾಣೆಗೆ ಸ್ಥಳೀಯರು ದೂರು ದಾಖಲಿಸಿದ್ದರು. ಸಾಹುಲ್​ ಕೆಲವರಿಗೆ ಕೊಲೆ ಬೆದರಿಕೆ ಹಾಕಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಇದೇ ಮಾರ್ಚ್ 10ರಂದು 50 ವರ್ಷದ ಕುರುಬ ಪೀರ್ ಮೊಹಮ್ಮದ್ ಕೆರೆಯನ್ನು ದಾಟುವಾಗ ಸಾಹುಲ್​ ದಾಳಿ ನಡೆಸಿದ್ದ. ಮಹಮ್ಮದ್ ಅವರನ್ನು ತೆಂಕಶಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ನಂತರ ತಿರುನಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರೇ ಆಗಲಿ ಈ ಪ್ರದೇಶವನ್ನು ದಾಟಿದರೆ ಅವರಿಗೆ ಸಾಹುಲ್​ ಬೆದರಿಕೆ ಹಾಕುತ್ತಿದ್ದಾನೆ. ಹೊಂಡದ ಇನ್ನೊಂದು ಬದಿಯಲ್ಲಿ ಸ್ನಾನ ಮಾಡಲು ಬಂದ ಮಹಿಳೆಯರಿಗೂ ಬೆದರಿಕೆ ಹಾಕಿದ್ದಾನೆ.
ಇನ್ನು ಚಿನ್ನ ಪೊತಾಯಿ ಪ್ರದೇಶವು ಸಂಪೂರ್ಣವಾಗಿ ಗಿಡಗಂಟಿಗಳು ಮತ್ತು ಸಸ್ಯಗಳು ಮತ್ತು ನೀರಿನಿಂದ ಆವೃತವಾಗಿದೆ. ದೂರಿನ ಬಳಿಕ ಆತನನ್ನು ಹಿಡಿಯಲು ಪೊಲೀಸರು ಹೋದಾಗ ನಿಜಕ್ಕೂ ಅದು ಸವಾಲಿನ ಕೆಲಸವಾಗಿತ್ತು. ಏಕೆಂದರೆ, ಸಾಹುಲ್​ ಪೊಲೀಸರನ್ನು ಕಂಡ ಕೂಡಲೇ ಬಂಡೆಯ ಮೇಲೆ ಜಿಗಿದು ತಲೆಮರೆಸಿಕೊಳ್ಳುತ್ತಿದ್ದ. ಕೊನೆಗೆ ನೀರಿಗೆ ಡೈವ್​ ಹೊಡೆದು ತಪ್ಪಿಸಿಕೊಳ್ಳಲು ಯತ್ನಿಸಿದ. ಇದಾದ ಬಳಿಕ ಇನ್ಸ್‌ಪೆಕ್ಟರ್ ಬಾಲಮುರುಗನ್ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು, ನಂತರ ಅವರು ಮಾರ್ಚ್ 15 ರಂದು ಡ್ರೋನ್‌ಗಳನ್ನು ಬಳಸಲು ನಿರ್ಧರಿಸಿದರು. ವ್ಯಾಪಕ ಶೋಧದ ನಂತರ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)
ವಿಡಿಯೋ ಕೃಪೆ (ದಿ ನ್ಯೂಸ್​ ಮಿನಟ್​)

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 + 5 =
Remember me
