ನವದೆಹಲಿ:ಉದ್ದೇಶಪೂರ್ವಕವಾಗಿಯೇ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿ ಬೈಕ್​ ಸವಾರನಿಗೆ ಡಿಕ್ಕಿ ಹೊಡೆದ ಯುವಕನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆತಂಕಕಾರಿ ಸಂಗತಿಯೆಂದರೆ ಡಿಕ್ಕಿ ಹೊಡೆದ ಕಾರು ಚಾಲಕ ಓರ್ವ ಕಾನೂನು ವಿದ್ಯಾರ್ಥಿ.
ಪೊಲೀಸ್​ ಮೂಲಗಳ ಪ್ರಕಾರ, ಅರ್ಜಾಂಘರ್ ಮೆಟ್ರೋ ನಿಲ್ದಾಣದ ಬಳಿ ಬೈಕ್ ಸವಾರ ಮತ್ತು ಕಾರು ಚಾಲಕನ ನಡುವೆ ಸಣ್ಣ ಪ್ರಮಾಣದಲ್ಲಿ ವಾಗ್ವಾದ ನಡೆದಿದೆ. ಇದಾದ ಬಳಿಕ ಸ್ಕಾರ್ಪಿಯೋ ಚಲಾಯಿಸುತ್ತಿದ್ದ ಅನುಜ್ ಚೌಧರಿ ಎಂಬಾತ ಅತಿವೇಗದಲ್ಲಿ ಕಾರು ಚಲಾಯಿಸಿಕೊಂಡು ಹೋಗಿ ರಾಯಲ್ ಎನ್‌ಫೀಲ್ಡ್ ಬೈಕ್ ಚಲಾಯಿಸುತ್ತಿದ್ದ ಶ್ರೇಯಾಂಶ್‌ ಎಂಬುವರಿಗೆ ಡಿಕ್ಕಿ ಹೊಡೆದಿದ್ದಾರೆ. ಇದಕ್ಕೂ ಮೊದಲೇ ಕಾರು ಹರಿಸಿ ಕೊಲ್ಲುವುದಾಗಿ ಚೌಧರಿ ಬೆದರಿಕೆ ಹಾಕಿದ್ದ. ಇದರ ಬೆನ್ನಲ್ಲೇ ಡಿಕ್ಕಿ ಹೊಡೆದ್ದು, ಉದ್ದೇಶಪೂರ್ವಕವಾಗಿಯೇ ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದು ಗಾಯಗೊಂಡ ಬೈಕ್ ಸವಾರ ಶ್ರೇಯಾಂಶ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವಿಡಿಯೋವನ್ನು ಅನುರಾಗ್ ಅಯ್ಯರ್ ಎಂಬುವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಪಿಎಂಒ ಇಂಡಿಯಾ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ನವದೆಹಲಿ ಡಿಸಿಪಿಗೆ ಟ್ಯಾಗ್ ಮಾಡಿದ್ದಾರೆ.
ನಾನು ಮತ್ತು ತನ್ನ ಸ್ನೇಹಿತರು ಅರಾವಳಿಯಲ್ಲಿರುವ ದೇವಸ್ಥಾನಕ್ಕೆ ಹೋಗಿ, ಹಿಂತಿರುಗಿ ಬರುವಾಗ ಅತಿ ವೇಗದ ಚಾಲನೆ ಮಾಡುತ್ತಿದ್ದ ಅನುಜ್​ನನ್ನು ಪ್ರಶ್ನೆ ಮಾಡಿದೆ. ಅದಕ್ಕೆ ಆತ ನನ್ನ ಜೊತೆ ವಾಗ್ವಾದಕ್ಕೆ ಇಳಿದ. ಕೊಲ್ಲುವುದಾಗಿ ಬೆದರಿಕೆಯನ್ನು ಹಾಕಿದ ಎಂದು ಶ್ರೇಯಾಂಶ ಹೇಳಿಕೆ ನೀಡಿದ್ದಾರೆ.
ಟ್ವಿಟರ್ ವಿಡಿಯೋವನ್ನು ಗಮನಿಸಿ ಫೀಲ್ಡಿಗಿಳಿದ ದೆಹಲಿ ಪೊಲೀಸರು, ಅನುಜ್ ಚೌಧರಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇದರ ನಡುವೆ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.(ಏಜೆನ್ಸೀಸ್​)
@PMOIndia@ArvindKejriwal@DCPNewDelhiPlease help us , the Scorpio Car driver almost killed a few of our riders and threatened to kill us by crushing us under the car.This is not what we vote for or pay taxes forno one was severely injuredGears respect riderspic.twitter.com/rcZIZvP7q4— ANURAG R IYER (@anuragiyer)June 5, 2022
@PMOIndia@ArvindKejriwal@DCPNewDelhiPlease help us , the Scorpio Car driver almost killed a few of our riders and threatened to kill us by crushing us under the car.This is not what we vote for or pay taxes forno one was severely injuredGears respect riderspic.twitter.com/rcZIZvP7q4
ಇದೆಂಥಾ ವಿಸ್ಮಯ! ಆಮ್ಲೆಟ್​ ಹಾಕಲು ಮೊಟ್ಟೆ ಹೊಡೆದ ಹೋಟೆಲ್​ ಮಾಲೀಕನಿಗೆ ಕಾದಿತ್ತು ಶಾಕ್​
ನೂಪುರ್ ಹೇಳಿಕೆ, 15 ರಾಷ್ಟ್ರಗಳ ಖಂಡನೆ: ಉಗ್ರರಿಂದ ಜೀವ ಬೆದರಿಕೆ, ಉಚ್ಚಾಟಿತ ನಾಯಕಿಗೆ ಭದ್ರತೆ..
ಕಾಲದ ಆಯ್ಕೆಯೋ? ಕಾಲದ ಮೇಲಿನ ಹೇರಿಕೆಯೋ?: ನಾಗರಿಕತೆಗಳ ಸಂಘರ್ಷ ಭಾಗ – 2

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + twenty =
Remember me
