ನವದೆಹಲಿ:ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂಬುದು ಹಲವರ ಕನಸು. ಅದಕ್ಕಾಗಿ ಹಗಲಿರುಳು ಓದಿ ಯುಪಿಎಸ್​ಸಿ ಸಾಧನೆ ಮಾಡಿದವರು ಬಹುತೇಕರಿದ್ದಾರೆ. ಸಾಧಕರ ಕತೆಗಳನ್ನು ನಾವು-ನೀವೆಲ್ಲ ಓದಿದ್ದೇವೆ. ಯುಪಿಎಸ್​ಸಿ ಪರೀಕ್ಷೆ ಪಾಸ್​ ಮಾಡೋದು ಹೇಗೆ ಅಂತಾ ಅನೇಕರು ಸಲಹೆ ನೀಡುವುದನ್ನು ನೋಡಿದ್ದೇವೆ. ಆದರೆ, ಕೇವಲ 60 ಸೆಕೆಂಡ್​ಗಳಲ್ಲಿ ಯುಪಿಎಸ್​ಸಿ ಅನುತ್ತೀರ್ಣ ಆಗೋದು ಹೇಗೆ ಅಂತಾ ಐಎಎಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಅವರು ಯುಪಿಎಸ್​ಸಿ ಫೇಲ್​ ಆಗೋದು ಹೇಗೆ ಅಂತಾ ವಿಡಿಯೋವೊಂದನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 1 ನಿಮಿಷ 4 ಸೆಕೆಂಡ್​ ವಿಡಿಯೋದಲ್ಲಿ ಫೇಲ್​ ಆಗೋದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ಇದೀಗ ವಿಡಿಯೋ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್​ಗಳ ಭರಾಟೆ ಜೋರಾಗಿದೆ.
ಸರಿಯಾದ ತಂತ್ರಗಾರಿಕೆ ಇಲ್ಲದೆ ಅಧ್ಯಯನ ಆರಂಭಿಸಿ. ಆಗಾಗ ನಿಮ್ಮ ತಂತ್ರಗಾರಿಕೆಯನ್ನು ಬದಲಾಯಿಸುತ್ತಿರಿ. ಯೂಟ್ಯೂಬ್​ನಲ್ಲಿರುವ ಪ್ರತಿಯೊಂದು ತಂತ್ರಗಾರಿಕೆಯನ್ನು ನೋಡುತ್ತಿರಿ. ನಿಮ್ಮದೇ ಆದ ಯಾವುದೇ ಯೋಜನೆ ಹಾಕಿಕೊಳ್ಳಬೇಡಿ. ಕೇವಲ ಪ್ರಿಲಿಮ್ಸ್​ ಪರೀಕ್ಷೆ ಮೇಲೆ ಮಾತ್ರ ಗಮನವಿಡಿ. ಪ್ರತಿದಿನ ನ್ಯೂಸ್​ ಪೇಪರ್​ ಓದಬೇಡಿ ಮತ್ತು ನ್ಯೂಸ್​ ಪೇಪರ್​ಗೆ ಸಬ್​ಸ್ಕ್ರೈಬ್​ ಆಗಿ ಆದರೆ ಸಂಪಾದಕೀಯ ವಿಭಾಗವನ್ನು ಓದಬೇಡಿ…ಹೀಗೆ ಅನೇಕ ಅಂಶಗಳನ್ನು ಅವನೀಶ್​ ಶರಣ್​ ಅವರು ಹಂಚಿಕೊಳ್ಳುವ ಮೂಲಕ ಯುಪಿಎಸ್​ಸಿ ಆಕಾಂಕ್ಷಿಗಳನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
How to fail UPSC Civil Services Exam.
Well explained.pic.twitter.com/IftbagsJA5
— Awanish Sharan (@AwanishSharan)November 8, 2021

ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಬೇಕೆಂಬುದನ್ನು ಈ ರೀತಿ ವಿಡಿಯೋ ಮೂಲಕ ವಿಭಿನ್ನವಾಗಿ ಅವನೀಶ್​ ಶರಣ್​ ತಿಳಿಸಿದ್ದಾರೆ. ಅಂದಹಾಗೆ ಅವನೀಶ್​ ಶರಣ್​ ಅವರು 2009 ಬ್ಯಾಚ್​ನ ಐಎಎಸ್​ ಅಧಿಕಾರಿ. ಇವರು ಛತ್ತೀಸ್​ಗಢ ಕೇಡರ್​ನವರು. ಆಲ್​ ಇಂಡಿಯಾ ರ್ಯಾಂಕ್​ 77 ಗಳಿಸುವ ಮೂಲಕ ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವನೀಶ್​ ಶರಣ್​ ಅವರ ವಿಡಿಯೋ ಈಗಾಗಲೇ 60 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. 5 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್​ ಮಾಡಿದ್ದಾರೆ.(ಏಜೆನ್ಸೀಸ್​)
ಬಿಗ್​ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಹಿ ಘಟನೆಗೆ ಸಾಕ್ಷಿಯಾದ ಬಿಗ್ ಹೌಸ್​: ನೆಟ್ಟಿಗರ ಆಕ್ರೋಶ

ಯೂಟ್ಯೂಬ್​ನಿಂದ ಮಹತ್ವದ ನಿರ್ಧಾರ: ಇನ್ಮುಂದೆ ಯೂಟ್ಯೂಬ್​ ವಿಡಿಯೋಗಳ ಕೆಳಗೆ ಇದು ಕಾಣಲ್ಲ!

23 ವರ್ಷಕ್ಕೆ ಈಕೆ ಮಾಡುತ್ತಿರುವ ಅನಾಚಾರ ಕೇಳಿದ್ರೆ ದಂಗಾಗ್ತೀರಾ! ಇದು ಖತರ್ನಾಕ್​​ ಲೇಡಿಯ ಕರಾಳ ಮುಖ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six − 4 =
Remember me
