ಭುವನೇಶ್ವರ್​:ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳಾ ಬ್ಲಾಕ್​ಮೇಲರ್​ ಅರ್ಚನಾ ನಾಗ್​ ಎಂಬಾಕೆಯನ್ನು ಒಡಿಶಾ ಪೊಲೀಸರು ಬಂಧಿಸಿದ್ದು, ಇದೀಗ ಆಕೆಯ ಕುರಿತು ಪ್ರತಿದಿನ ಸಾಕಷ್ಟು ಸಂಗತಿಗಳು ಬೆಳಕಿಗೆ ಬರುತ್ತಿವೆ.
ಅರ್ಚನಾ ನಾಗ್​ ಕಾಲೇಜು ದಿನಗಳಲ್ಲಿ ಮುಗ್ಧಳಾಗಿದ್ದಳಂತೆ. ವಿಜ್ಞಾನ ವಿಭಾಗದಲ್ಲಿ ಭೋಗರಾಯ್​ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿದ್ದಾಳೆ ಎಂಬ ಸಂಗತಿ ತಿಳಿದುಬಂದಿದೆ. ಒಡಿಶಾದ ಕಲಹಂಡಿ ಜಿಲ್ಲೆಯ ಭವಾನಿಪಟ್ಟಣ ಮೂಲದ ಅರ್ಚನಾ ನಾಗ್, ಬಾಲಸೋರ್‌ನ ಭೋಗರಾಯ್ ಬ್ಲಾಕ್ ವ್ಯಾಪ್ತಿಯ ಬೌನ್‌ಶಬಾನಿ ಗ್ರಾಮದ ಜಗಬಂಧು ಅವರನ್ನು ವಿವಾಹವಾದ ನಂತರ ಭೋಗರಾಯ್​ ಕಾಲೇಜಿನಲ್ಲಿ ಓದುತ್ತಿದ್ದಳು.
ಬೈಕುಂಠನಾಥ ಹೈಯರ್ ಸೆಕೆಂಡರಿ ಶಾಲೆಯ ದಾಖಲಾತಿಗಳ ಪ್ರಕಾರ, ಅರ್ಚನಾ, 2014 ರಲ್ಲಿ ದ್ವಿತೀಯ ಪಿಯುಸಿಗೆ ಪ್ರವೇಶ ಪಡೆದರು. ಸಂಸ್ಥೆಯಲ್ಲಿ ಆಕೆಯ ವಿದ್ಯಾಭ್ಯಾಸದ ಅವಧಿಯಲ್ಲಿ ಆಕೆ ತುಂಬಾ ಸರಳ, ಶಾಂತಿ ಮತ್ತು ಸಾಧಾರಣವಾಗಿದ್ದಳಂತೆ. ಚೆನ್ನಾಗಿ ಓದುತ್ತಿದ್ದ ಅರ್ಚನಾ, 2016ರಲ್ಲಿ ದ್ವಿತೀಯ ವಿಭಾಗದಲ್ಲಿ ತೇರ್ಗಡೆಯಾದಳು.
ಅರ್ಚನಾ ಬಗ್ಗೆ ಮಾತನಾಡಿರುವ ಪ್ರಾಂಶುಪಾಲ ಹರಿಪಾದ್ ಪರಮಾಣಿಕ್, ಅರ್ಚನಾ ತನ್ನ ಅಧ್ಯಯನದ ಸಮಯದಲ್ಲಿ ತುಂಬಾ ಸಮಚಿತ್ತ ಮತ್ತು ವಿಧೇಯತೆ ತೋರುತ್ತಿದ್ದಳು. ಕಾಲೇಜಿಗೆ ಹೋಗುವ ಹುಡುಗಿಯಾಗಿ ಆಕೆಯ ನಡವಳಿಕೆ ಮತ್ತು ವರ್ತನೆಯಲ್ಲಿ ಏನೂ ತಪ್ಪಿರಲಿಲ್ಲ. ಆದರೆ, ಪತಿ ಜಗಬಂಧು ಜತೆ ಕಾರಿನಲ್ಲಿ ಕಾಲೇಜಿಗೆ ಬರುತ್ತಿದ್ದ ಆಕೆ ಸದೃಢ ಮಹಿಳೆಯಂತೆ ಕಾಣುತ್ತಿದ್ದಳು ಎಂದು ತಿಳಿಸಿದ್ದಾರೆ. ಅಲ್ಲದೆ, ಆಕೆಯ ನಡತೆಯ ವಿರುದ್ಧ ಒಮ್ಮೆಯು ಯಾರೋಬ್ಬರು ದೂರು ನೀಡಿಲ್ಲ ಎಂದು ಹೇಳಿದ್ದಾರೆ.
ಈ ರೀತಿ ಇದ್ದ ಅರ್ಚನಾ, ಒಂದೆರಡು ವರ್ಷಗಳಲ್ಲಿ ತೀವ್ರ ಬದಲಾವಣೆಯಾಗಿರುವುದು ಆಕೆಯ ಬಗ್ಗೆ ಚೆನ್ನಾಗಿ ಗೊತ್ತಿದ್ದವರಿಗೆ ಗೊಂದಲ ಉಂಟಾಗಿದೆ. ಯಾರು ಹೆಣೆದ ಬಲೆಗೆ ಅರ್ಚನಾ ಬಿದ್ದಿರಬಹುದು ಎಂದು ಹೇಳುತ್ತಿದ್ದಾರೆ. ಈಗಲೂ ಆಕೆಯ ಮೇಲೆ ಸಂಪೂರ್ಣ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.
ಅಂದಹಾಗೆ ಅರ್ಚನಾ ನಾಗ್​, 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್​ ಬಲೆಗೆ ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಹನಿಟ್ರ್ಯಾಪ್​ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ನೇತೃತ್ವದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದಾರೆ.
ಅರ್ಚನಾ ಮತ್ತು ಆಕೆಯ ಪತಿ ಪ್ರಭಾವಿ ವ್ಯಕ್ತಿಗಳನ್ನು ಹನಿಟ್ರ್ಯಾಪ್​ ಬಲೆಗೆ ಕೆಡವಿ, ಅವರ ಲೈಂಗಿಕ ವಿಡಿಯೋಗಳನ್ನು ರೆಕಾರ್ಡ್ ಮಾಡುವ ಮೂಲಕ ಬ್ಲಾಕ್​ಮೇಲ್ ಮಾಡಿ, ಹಣ ಸುಲಿಗೆ ಮಾಡುತ್ತಿದ್ದರು. ಆದರೆ, ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗುತ್ತಿದೆ.(ಏಜೆನ್ಸೀಸ್​)
ಅರ್ಚನಾ ನಾಗ್ ಹನಿಟ್ರ್ಯಾಪ್​ ಕೇಸ್​: ಸಾಲದ ಹಣ ವಾಪಸ್​ ಕೇಳಿದ ಉದ್ಯಮಿಗೆ ಈಕೆ ಕೊಟ್ಟಿದ್ದಳು ಬಿಗ್​ ಶಾಕ್!

ಕಡು ಬಡತನದಲ್ಲಿ ಹುಟ್ಟಿ 30 ಕೋಟಿ ರೂ. ಬೆಲೆ ಬಾಳುವ ಆಸ್ತಿ ಗಳಿಸಿದ್ಹೇಗೆ? ಕಿಲಾಡಿ ಲೇಡಿಯ ಹಿನ್ನೆಲೆ ತಿಳಿದ್ರೆ ದಂಗಾಗ್ತೀರಾ!

18 ಶಾಸಕರು ಸೇರಿ 25 ಪ್ರಭಾವಿಗಳನ್ನು ಹನಿಟ್ರ್ಯಾಪ್​ ಬಲೆಗೆ ಕಡೆವಿ ಸರ್ಕಾರಕ್ಕೆ ಕುತ್ತು ತಂದಿಟ್ಟ ಖತರ್ನಾಕ್​ ಲೇಡಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + 19 =
Remember me
