ಜೈಪುರ:ಪತ್ನಿಯನ್ನು ಕೊಂದ ಪಾಪಿ ಪತಿರಾಯನೊಬ್ಬ ಆಕೆಯ ಮೃತದೇಹವನ್ನು ರಸ್ತೆಯಲ್ಲಿ ಧರಧರನೇ ಎಳೆದಾಡಿದ ಆತಂಕಕಾರಿ ಘಟನೆ ರಾಜಸ್ಥಾನದ ಪೋರ್ಟ್​ ಒಂದರಲ್ಲಿ ಮಂಗಳವಾರ ನಡೆದಿದೆ.
ಆರೋಪಿಯನ್ನು ಪಿಂಟು ಅಲಿಯಾಸ್​ ಸುನೀಲ್​ ವಲ್ಮಿ ಎಂದು ಗುರುತಿಸಲಾಗಿದೆ. ಈತ ರಾಜಸ್ಥಾನದ ಕೋಟಾ ಜಿಲ್ಲೆಯ ಭಟಪದಾ ಏರಿಯಾದವನು. ಸುನೀಲ್​ 15 ವರ್ಷಗಳ ಹಿಂದೆ ಸೀಮಾ ಎಂಬಾಕೆಯನ್ನು ಮದುವೆ ಆಗಿದ್ದ. ಇಬ್ಬರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ.
ಕೆಲವು ವರ್ಷಗಳಿಂದ ಪತಿ ಮತ್ತು ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ, ಮಂಗಳವಾರ ತಾರಕ್ಕಕ್ಕೇರಿದ ಇಬ್ಬರ ಜಗಳದಲ್ಲಿ ತಾಳ್ಮೆ ಕಳೆದುಕೊಂಡ ಸುನೀನ್​ ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಇಷ್ಟಕ್ಕೆ ಸುಮ್ಮನಾಗದ ಆರೋಪಿ ಸುನೀಲ್​ ಪತ್ನಿಯ ಮೃತದೇಹವನ್ನು ಸುಮಾರು 70 ರಿಂದ 80 ಮೀಟರ್​ ರಸ್ತೆಯಲ್ಲಿ ಎಳೆದಾಡಿದ್ದಾನೆ. ಅಕ್ಕಪಕ್ಕ ಮನೆಯವರು ಈ ಭಯಾನಕ ದೃಷ್ಯವನ್ನು ನೋಡಿ ಹೆದರಿದ್ದಾರೆ. ಬಳಿಕ ಶವವನ್ನು ರಸ್ತೆಯಲ್ಲಿ ಬಿಟ್ಟು ಸುನೀಲ್​ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪತ್ನಿ ಮೇಲಿನ ದಾಳಿಯಲ್ಲಿ ಕಿರಿಯ ಮಗನಿಗೂ ದಾಳಿಯಾಗಿದ್ದು, ಆತನು ಸಹ ಚಿಕಿತ್ಸೆ ಫಲಿಸದೇ ಬುಧವಾರ ಮೃತಪಟ್ಟಿದ್ದಾನೆ.(ಏಜೆನ್ಸೀಸ್​)
ಹಿರಿಯ ಪೋಷಕ ನಟಿ ಬಿ.ಜಯಾ ಇನ್ನಿಲ್ಲ! ಕಣ್ಣೀರ ಕಡಲಲ್ಲಿ ಚಿತ್ರರಂಗ

ದೂರಾದ ಪ್ರೇಯಸಿ ನೋಡಲು ವಧುವಿನ ವೇಷದಲ್ಲಿ ಮನೆಗೆ ಹೋಗಿ ಎಡವಟ್ಟು ಮಾಡಿ ಸಿಕ್ಕಿಬಿದ್ದ ಯುವಕ!

ಮಾತು ಬಾರದ, ಕಿವಿ ಕೇಳದ ಬಾಲಕಿ ಮೇಲೆ ಅತ್ಯಾಚಾರ! ಇಳಿ ಸಂಜೆಯ ಹೊತ್ತಿಗೆ ನಡೆದೇ ಹೋಯಿತು ಘೋರ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − five =
Remember me
