ಪಟನಾ:ಆಮ್ಲೆಟ್ ಮಾಡಿಕೊಡಲು ಒಪ್ಪದ ಪತ್ನಿಯನ್ನು ಪತಿರಾಯನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ.
ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಆಕೆಯ ಮೃತದೇಹವನ್ನು ಸೀಲಿಂಗ್​ ಫ್ಯಾನ್​ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ಕೊನೆಗೆ ಪತಿರಾಯ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಅಜಿತ್​ ಸಿಂಗ್​ ಎಂದು ಗುರುತಿಸಲಾಗಿದೆ. ಈತ ನಿವೃತ್ತ ಸಬ್​ ಇನ್ಸ್​ಪೆಕ್ಟರ್​ ರಾಮ್​ ವಿನಯ್​ ಸಿಂಗ್​ ಪುತ್ರ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ತಂದೆ ರಾಮ್​ ವಿನಯ್​ ನೀಡಿದ ಹೇಳಿಕೆ ಆಧಾರದ ಮೇಲೆ ಅಜಿತ್​ ಸಿಂಗ್​ ವಿರುದ್ಧ ಸೀತಾಮರ್ಹಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಈ ಘಟನೆ ಜಿಲ್ಲೆಯ ಬೆಲ್ಹಿ ಜೈರಾಮ್​ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿರುವ ರಾಮ್​ ವಿನಯ್​ ಸಿಂಗ್, ನನ್ನ ಮಗ ಮದ್ಯ ವ್ಯಸನಿ. ಗುರುವಾರ ಸಂಜೆ ಪಾನಮತ್ತನಾಗಿ ಮನೆಗೆ ಬಂದಿದ್ದ. ಬರುವಾಗ ಜತೆಯಲ್ಲಿ ಮೊಟ್ಟೆಗಳನ್ನು ತಂದಿದ್ದ. ಆಮ್ಲೆಟ್​ ಮಾಡಿಕೊಡುವಂತೆ ಪತ್ನಿ ನೀತು ಸಿಂಗ್​ (30) ಕೇಳಿದ. ಆದರೆ, ಆಕೆ ತಿರಸ್ಕರಿಸಿದಳು. ಗುರುವಾರ ಮೊಟ್ಟೆ ಮಾಡುವಂತಿಲ್ಲ ಎಂದು ಹೇಳಿದಳು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಯಿತು. ಗಂಡನ ಮದ್ಯ ವ್ಯಸನದಿಂದ ನೀತು ಬೇಸತ್ತು ಹೋಗಿದ್ದಳು. ಈ ಹಿಂದೆಯು ಆತನ ಚಟದ ವಿರುದ್ಧ ಆಕೆ ಪ್ರತಿಭಟಿಸಿದ್ದಳು. ಗುರುವಾರವೂ ಅದನ್ನೇ ಮಾಡಿದಳು. ಇದರಿಂದ ಕೋಪಗೊಂಡ ಅಜಿತ್​ ಮೊದಲು ಆಕೆಯನ್ನು ಬೆಡ್​ರೂಮ್​ನಲ್ಲಿ ಮೃಗೀಯವಾಗಿ ಹಲ್ಲೆ ಮಾಡಿದ. ಇದಾದ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಂದು ಸೀಲಿಂಗ್​ ಫ್ಯಾನ್​ಗೆ ನೇತು ಹಾಕಿದ್ದಾನೆ. ಕೆಲವೇ ಸಮಯದಲ್ಲಿ ನೀತು ಕಿರುಚಾಡುವುದು ನಿಂತು ಹೊಗಿದ್ದರಿಂದ ಇಬ್ಬರು ಸಮಾಧಾನಗೊಂಡಿರಬಹುದೆಂದು ಭಾವಿಸಿದೆವು. ಆದರೆ, ಕೆಲವೇ ಕ್ಷಣದಲ್ಲಿ ಅಜಿತ್​ ಮನೆಯಿಂದ ಆಚೆ ಬಂದು ಓಡಿ ಹೋದನು. ಇದಾದ ಬಳಿಕ ಕೋಣೆ ಒಳಗೆ ನೋಡಿದಾಗ ನೀತು ಮೃತದೇಹ ಫ್ಯಾನಿನಲ್ಲಿ ನೇತಾಡುತ್ತಿತ್ತು. ಅದನ್ನು ನೋಡಿ ನಮಗೆ ಆಘಾತವಾಯಿತು ಎಂದು ರಾಮ್​ ವಿನಯ್​ ಸಿಂಗ್ ಹೇಳಿದ್ದಾರೆ.
ಎಫ್​ಐಆರ್​ ನಲ್ಲಿ ವಿನಯ್​ ಸಿಂಗ್​ ಹೇಳಿಕೆಯನ್ನು ದಾಖಲಿಸಲಾಗಿದೆ. ಠಾಣಾಧಿಕಾರಿ ಎಚ್​.ಎಸ್​. ಕುಮಾರ್​ ಎಂಬುವರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಲಾಗಿದೆ.(ಏಜೆನ್ಸೀಸ್​)
ಹಿಜಾಬ್​ ವಿವಾದ ಕುರಿತು ದಂಗಲ್​ ಹುಡುಗಿ ಜೈರಾ ವಾಸಿಮ್​ ಹೇಳಿದ್ದು ಹೀಗೆ…

ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಮಾಜಿ ಸಿಎಂ ಬಿಎಸ್​ವೈ! ನೈಜ ಘಟನೆ ಆಧಾರಿತ ಸಿನಿಮಾದಲ್ಲಿ ನಟನೆ

ವೆಸ್ಟ್ ಇಂಡೀಸ್ ಎದುರು ಕ್ಲೀನ್‌ಸ್ವೀಪ್ ಗುರಿಯತ್ತ ಭಾರತ ; ಇಂದು 3ನೇ ಟಿ20 ಪಂದ್ಯ; ಗೆದ್ದರೆ ನಂ.1 ಪಟ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 5 =
Remember me
